This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ವಾಯಿತು.
 
ಪಂತು ರಾಗದಲ್ಲಿ ತೆರತೀಯಗರಾದ ಎಂಬ ಕೃತಿಯನ್ನು ಭಾವಾವೇಶದಿಂದ ಹಾಡಿದರು.

ಹಾಡು ಮುಗಿದ ಕೂಡಲೇ ಆ ತೆರೆಯು ತಾನಾಗಿಯೇ ಕಡಿದು ಬಿದ್ದು ದೇವರ ದರ್ಶನ

ಭಕ್ತಿಭಾವದಿಂದ ಪುಳಕಿತರಾಗಿ ತಕ್ಷಣವೇ ಮಧ್ಯಮಾವತಿ ರಾಗದಲ್ಲಿ

ವೆಂಕಟೇಶನಿನ್ನು ಸೇವಿಂದ ಎಂಬ ಕೃತಿಯನ್ನು ಹಾಡಿದರು.

ಈ ವೇಳೆಗೆ ಅಲ್ಲಿ

ನೆರೆದಿದ್ದ ಭಕ್ತರು ಈ ಆಶ್ಚರ್ಯಕರ ಘಟನೆಯನ್ನು ನೋಡಿದರು. ಮಹಾಭಕ್ತ

ಮತ್ತು ವಾಗ್ಗೇಯಕಾರರಾದ ತ್ಯಾಗರಾಜರು ಇವರೇ ಎಂಬುದನ್ನು ಅಧಿಕಾರಿಗಳೂ,

ಅರ್ಚಕರೂ ತಿಳಿದು ಅವರಿಗೆ ದೇವಾಲಯದ ಗೌರವಗಳನ್ನು ನೀಡಿದರು.

ವೆಂಕಟೇಶ್ವರನ ಸ್ತುತಿ ರೂಪವಾದ ತ್ಯಾಗರಾಜರ ಮತ್ತೊಂದು ಕೃತಿ ಕಲ್ಯಾಣಿ ರಾಗದ

( ತರನಾ ನೀ ಮಹಿಮ ಪೊಗಡ ' ಎಂಬುದು. ಈ ಮೂರು ಕೃತಿಗಳಲ್ಲಿ ತಿರುಪತಿ

ಅಥವಾ ನಾಗಾಚಲ ಎಂಬ ಕ್ಷೇತ್ರ ಮುದ್ರೆ ಇದೆ.
 

ಪುತ್ತೂರು-ತಿರುಪತಿಯಿಂದ ಹಿಂತಿರುಗುತ್ತಾ ಮದ್ರಾಸ್-ಬೊಂಬಾಯಿ

ಅಲ್ಲಿಯ ದೇವಾಲಯದ ಮುಂದೆ ಒಂದು
 

ಮಾರ್ಗದಲ್ಲಿರುವ ಪುತ್ತೂರಿಗೆ ಬಂದರು.

ಗುಂಪು ಸೇರಿತ್ತು.
 

ಒಬ್ಬ ಸ್ತ್ರೀ ತನ್ನ ಪತಿಯ ಮೃತದೇಹವನ್ನು ನೋಡಿ ಗೋಳಾಡು

ತಿದ್ದಳು. ಮರಣ ಹೊಂದಿದ್ದ ಯಾತ್ರಿಕ ಹಿಂದಿನ ರಾತ್ರಿ ಆ ಊರಿಗೆ ಬಂದು ನಿಲ್ಲಲು

ಎಲ್ಲ ಸ್ಥಳವಿಲ್ಲದೆ ದೇವಾಲಯದಲ್ಲಿ ನಿಲ್ಲಲು ಉದ್ದೇಶಿಸಿ ಹಾಕಿದ್ದ ಬಾಗಿಲನ್ನು

ತೆರೆಯಲು ಪ್ರಾಕಾರದ ಗೋಡೆಯನ್ನು ಹತ್ತಿ ಒಳಕ್ಕೆ ಹೋಗಲು ಪ್ರಯತ್ನಿಸಿ ಆಕಸ್ಮಿಕ

ವಾಗಿ ಬಾವಿಗೆ ಬಿದ್ದು ಮರಣ ಹೊಂದಿದ ವಿಷಯವನ್ನು ತಿಳಿದರು.

ಅವರ ಮನಸ್ಸು

ಸಂಕಟದಿಂದ ತುಂಬಿತು. ಶಿಷ್ಯರನ್ನು ಕೂಗಿ ಬಿಲಹರಿ ರಾಗದ ನಾ ಜೀವಾಧಾರ

ಎಂಬ ಕೃತಿಯನ್ನು ಹಾಡಲು ಹೇಳಿದರು. ನಂತರ ತುಳಸೀದಲದಿಂದ ತೀರ್ಥವನ್ನು

ಆ ದೇಹದ ಮೇಲೆ ಪ್ರೋಕ್ಷಿಸಿದರು. ಆ ವ್ಯಕ್ತಿ ಶೇಷಯ್ಯ ಎದ್ದು ತ್ಯಾಗರಾಜರಿಗೆ

ದೀರ್ಘದಂಡ ಪ್ರಣಾಮ ಮಾಡಿ ಆಶೀರ್ವಾದ ಪಡೆದು ತನ್ನ ಪ್ರಯಾಣವನ್ನು

ಮುಂದುವರಿಸಿದನು. ಪ್ರಾತಃಕಾಲದ ರಾಗವಾದ ಬಿಲಹರಿಯು ಜೀವ ಕೊಡು

ವಂತಹುದು. ನಾ ಜೀವಾಧಾರ ಎಂಬ ಕೃತಿಯು ಈ ರಾಗದ ಸಾರವನ್ನು ಹೊಂದಿದೆ.

ಪೋಲಿಂಗರ್ ಮುಂದೆ ಪ್ರಯಾಣ ಮಾಡುತ್ತಾ ಹೋಲಿಂಗರ್ ಎಂಬ

ಊರಿಗೆ ಬಂದಾಗ ಅಲ್ಲಿಯ ಲಕ್ಷ್ಮೀನರಸಿಂಹಸ್ವಾಮಿಯನ್ನು ಕುರಿತು ಬಿಲಹರಿ ರಾಗದಲ್ಲಿ

ನರಸಿಂಹ ನನು ವವೇ (ಛಾಪು) ಮತ್ತು ಫಲಮಂಜರಿ ರಾಗದಲ್ಲಿ ನರಸಿಂಹ

ಮಾಂಪಾಹಿ (ದೇಶಾದಿ) ಎಂಬ ಕೃತಿಗಳನ್ನೂ ಆಂಜನೇಯಸ್ವಾಮಿಯನ್ನು ಕುರಿತು

ಷಡ್ವಧಮಾರ್ಗಿಣಿ ರಾಗದಲ್ಲಿ ಪಾಹಿರಾಮದೂತ (ರೂಪಕ) ಎಂಬ ಕೃತಿಯನ್ನು
 
ಹಾಡಿದರು
 
೪೬೬
 

ಕಾಳಹಸ್ತಿಯ ಸಮಾಸದಲ್ಲಿ ಹರಿಯುವ ಸ್ವರ್ಣಮುಖಿ ನದಿಯ ತೀರದಲ್ಲಿರುವ

ವಿಷ್ಣು ಸ್ಥಳದ ದೇವರನ್ನು ಕುರಿತು ಬಿಲಹರಿ ರಾಗದಲ್ಲಿ ನೀವೇಗಾನಿ (ಛಾಪು) ಎಂಬ

ಕೃತಿಯನ್ನು ಹಾಡಿದರು.