2023-06-25 23:30:37 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕಾಲ ಮತ್ತು ಅತಿದ್ರುತ ಕಾಲದಲ್ಲಿ ಹಾಡಿ ಅಚ್ಚರಿಗೊಳಿಸಿದರು. ಇವರ ಲಯ
ಸಂಪತ್ತನ್ನು ಕಂಡು ತ್ಯಾಗರಾಜರಿಗೆ ಆಶ್ಚಯ್ಯ ಉಂಟಾಯಿತು. ಇವರಿಗೆ ಗೌರವ
ಸೂಚಿಸುವ ಸಲುವಾಗಿ ಹಿಂದೆಯೇ ರಚಿಸಲಾಗಿದ್ದ ಶ್ರೀರಾಗದ ( ಎಂದರೋ
ಭಾವುಲು ' ಎಂಬ ಕೃತಿಯನ್ನು ಶಿಷ್ಯರಿಂದ ಹಾಡಿಸಿದರು.
ವಾಲಾಜ ಪೇಟೆ ಕೃಷ್ಣಸ್ವಾಮಿ ಭಾಗವತರು ಕಿನ್ನರಿಯನ್ನು ನುಡಿಸಿದರು ಕೆಲವು
ದಿನಗಳ ಕಾಲ ತ್ಯಾಗರಾಜರ ಅತಿಥಿಗಳಾಗಿದ್ದು ನಂತರ ತಮ್ಮ ತೀರ್ಥಯಾತ್ರೆಯನ್ನು
ಮುಂದುವರಿಸಿದ ಮಾರಾರರು ಪಂಡರಾಪುರದಲ್ಲಿ ೧೮೪೩ರಲ್ಲಿ ಕಾಲವಾದರು.
ಕಾಂಚೀಪುರ, ತಿರುಪತಿ ಮತ್ತು ಇತರ ಸ್ಥಳಗಳಿಗೆ ತ್ಯಾಗರಾಜರ
ತೀರ್ಥಯಾತ್ರೆ-ತ್ಯಾಗರಾಜರ ತಂದೆ ರಾಮಬ್ರಹ್ಮ ಮತ್ತು ಕಾಂಚೀಪುರದ ಸ್ವಾಮಿ
ಉಪನಿಷತ್ ಬ್ರಹ್ಮ ಸಹಪಾಠಿಗಳೂ ಸ್ನೇಹಿತರೂ ಆಗಿದ್ದರು. ಉಪನಿಷತ್ ಬ್ರಹ್ಮರು
೧೮೪೩ರಲ್ಲಿ ತ್ಯಾಗರಾಜರನ್ನು ಕಾಂಚೀಪುರಕ್ಕೆ ಆಹ್ವಾನಿಸಿದರು. ಅವರ ಆಹ್ವಾನದಂತೆ
ಶಿಷ್ಯಸಮೇತರಾಗಿ ತ್ಯಾಗರಾಜರು ಕಾಂಚೀಪುರಕ್ಕೆ ಪ್ರಯಾಣ ಬೆಳೆಸಿದರು ಅಲ್ಲಿ
ಸ್ವಾಮಿಗಳ ಅತಿಧಿಗಳಾಗಿ ಕೆಲವು ದಿನಗಳು ಇದ್ದು ಭಜನೆಗಳನ್ನು ನಡೆಸಿದರು.
ಅಲ್ಲಿಗೆ ಬಂದಿದ್ದ ಪ್ರತಿಯೊಬ್ಬರು ಅವರ ಭಕ್ತಿಯುತವಾದ ಸಂಗೀತವನ್ನು ಕೇಳಿ ತಮ್ಮ
ಜನ್ಮಪಾವನವಾಯಿತೆಂದು ಭಾವಿಸಿದರು. ಆಗ ವರದರಾಜಸ್ವಾಮಿಯ ಉತ್ಸವದ
ಕಾಲ. ವರದರಾಜಸ್ವಾಮಿಯನ್ನು ಕುರಿತು ವರದರಾಜ ನಿನಕೋರಿ (ಸ್ವರಭೂಷಣಿ),
ವರದ ನವನೀ ತಾಳ (ರಾಗಪಂಜರಂ) ಎಂಬ ಎರಡು ಕೃತಿಗಳನ್ನೂ, ಕಾಮಾಕ್ಷಿ ಅಮ್ಮ
ನವರ ಸನ್ನಿಧಿಯನ್ನು ಸಂದರ್ಶಿಸಿ ವಿನಯಕುನಿವನು ಎಂಬ ಮಧ್ಯಮಾವತಿಯ ಕೃತಿ
ಯನ್ನು ಹಾಡಿದರು.
ಮಹಾನು
ಮಾರಾರರು ಹಾಡಿದಾಗ
ನಾಲಾಜಪೇಟೆ-ಕಾಂಚೀಪುರದಿಂದ ವಾಲಾಜಪೇಟೆಗೆ ಹೋಗಿ ಅಲ್ಲಿ ೧೨
ದಿನಗಳ ಕಾಲವಿದ್ದು ವೆಂಕಟರಮಣ ಭಾಗವತರ ಭಜನ ಮಂದಿರದಲ್ಲಿ ಭಜನೆಗಳನ್ನು
ನಡೆಸಿದರು. ಕೊನೆಯದಿನ ಶಿಷ್ಯರು ಇವರನ್ನು ವೈಭವದ ಮೆರವಣಿಗೆ ಮಾಡಿದರು.
ವೆಂಕಟರಮಣ ಭಾಗವತರ ಶಿಷ್ಯ ಮೈಸೂರು ಸದಾಶಿವರಾಯರು ಈ ಸಂದರ್ಭದಲ್ಲಿದ್ದು
ತೋಡಿರಾಗದ ತ್ಯಾಗರಾಜಸ್ವಾಮಿ ವೆಡಲಿನ ಎಂಬ ಉತ್ತಮ ಕೃತಿಯನ್ನು ರಚಿಸಿ ಈ
ಘಟನೆಯನ್ನು ಅಮರಗೊಳಿಸಿದ್ದಾರೆ.
ತಿರುಪತಿ-ವಾಲಾಜಪೇಟೆಯಿಂದ ತ್ಯಾಗರಾಜರು ತಿರುಪತಿಗೆ ಹೋದರು.
ಆ ಕಾಲದಲ್ಲಿ ಬೆಟ್ಟದ ಮೇಲಕ್ಕೆ ಹೋಗಲು ಏಳು ಮೈಲಿ ದೂರ ನಡೆಯಬೇಕಾಗಿತ್ತು.
ಬೆಳಗ್ಗೆ ಹೊರಟು ತಿರುಮಲೆಯನ್ನು ತಲುಪಿದಾಗ ಸುಮಾರು ಹನ್ನೊಂದು ಗಂಟೆ
ಸಮಯ. ಸಪ್ತ ಗಿರೀಶನ ದರ್ಶನವನ್ನು ಪಡೆಯಲು ಕಾತುರರಾಗಿದ್ದ ತ್ಯಾಗರಾಜರು
ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ಹೋದಾಗ ಸ್ವಾಮಿಯ
ಸನ್ನಿಧಿಯ ಮುಂದೆ ತೆರೆ ಹಾಕಿತ್ತು. ಅದನ್ನು ನೋಡಿ ಬಹಳ ದುಃಖದಿಂದ ಗೌಳಿ
30