This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ನನ್ನನ್ನು ಗೌರವಿಸಿದ್ದೀರಿ"
ಮುಕ್ತಕಂಠದಿಂದ ಪ್ರಶಂಸಿಸಿ
 
ಬಂದು ಹಾಡುತ್ತಿದ್ದೆ. ತಾವು ಇಲ್ಲಿಯವರೆಗೆ ಬಂದು
ಎಂದರು. ತ್ಯಾಗರಾಜರು ವಡಿವೇಲುವಿನ ಗಾಯನವನ್ನು
ತಮ್ಮ ಮನೆಗೆ ಬಂದು ಹಾಡಬೇಕೆಂದು ಆಹ್ವಾನಿಸಿದರು. ಅಂತೆಯೇ ವಡಿವೇಲು ಅವರ
ಮನೆಗೆ ಹೋಗಿ ಸ್ವಾತಿತಿರುನಾಳರ ಹಲವು ರಚನೆಗಳನ್ನು ಹಾಡಿ ತ್ಯಾಗರಾಜರ ಮೆಚ್ಚಿಗೆ
ಪಡೆದರು ಮತ್ತೊಂದು ದಿನ ಅದ್ಭುತವಾಗಿ ಹಾಡಿದ್ದನ್ನು ಕೇಳಿ ಮಹದಾನಂದ ಪರವಶ
ರಾಗಿ ಅವರ ಇಚ್ಛೆ ಏನು ಬೇಕಾದರೂ ಕೇಳಬಹುದೆಂದರು.
ಇಂತಹ ಸಮಯಕ್ಕಾಗಿ
ಕಾಯುತ್ತಿದ್ದ ವಡಿವೇಲು ನನ್ನತೆಯಿಂದ ಮಹಾರಾಜರ ಇಚ್ಛೆಯನ್ನು ತಿಳಿಯಪಡಿಸಿ
ದಾಗ ತ್ಯಾಗರಾಜರು ಸ್ವಲ್ಪ ಹೊತ್ತು ಮೌನವಾಗಿದ್ದು "ನಾನು ಅವರನ್ನು ಖಂಡಿತ ಭೇಟಿ
ಮಾಡುತ್ತೇನೆ ಆದರೆ ಈ ಲೋಕದಲ್ಲಲ್ಲ ಅವರ ಉಪಾಸನಾ ಮೂರ್ತಿಯಾದ ಪದ್ಮ
ನಾಭನೂ ನನ್ನ ಉಪಾಸನಾ ಮೂರ್ತಿಯೂ ಒಂದೇ" ಎಂದರು. ವಡಿವೇಲು ಸ್ವಲ್ಪ
ಕಾಲಾನಂತರ ತಿರುವಾಂಕೂರಿಗೆ ಹಿಂತಿರುಗಿ ಮಹಾರಾಜರಿಗೆ ತನ್ನ ರಾಯಭಾರದ
ವಿಫಲತೆಯನ್ನು ಕುರಿತು ವರದಿ ಮಾಡಿದನು.
 
ಮಾರಾರ್
 
ಗೋವಿಂದ ಮಾರಾರ್ (೧೭೯೮-೧೮೪೩)-ಗೋವಿಂದ
ತಿರುವಾಂಕೂರಿನ ರಾಮಮಂಗಲವೆಂಬ
ಗ್ರಾಮದವರು. ೧೯ನೆ ಶತಮಾನದ
ಆದಿಭಾಗದ ಒಬ್ಬ ಶ್ರೇಷ್ಠಗಾಯಕರಾಗಿದ್ದರು. ಇವರಿಗೆ ರವೆಜಾತಿ ಶಾರೀರವಿತ್ತು.
ಪಲ್ಲವಿಗಳನ್ನು ಷಟ್ಕಾಲದಲ್ಲಿ ಹಾಡುತ್ತಿದ್ದರು. ಆದ್ದರಿಂದ ಇವರಿಗೆ ಷಟ್ಬಾಲ
ಗೋವಿಂದ ಮಾರಾರ್ ಅಥವಾ ಗೋವಿಂದದಾಸ ಎಂಬ ಹೆಸರಿತ್ತು. ಷಟ್ಬಾಲ
ಎಂಬ ಬಿರುದನ್ನು ಪಡೆದಿರುವವರು ಸೇಲಂನ ಷಟ್ಕಾಲ ನರಸಯ್ಯ ಮತ್ತು ವಿಜಯ
ನಗರದ ಷಟ್ಬಾಲ ಚಕ್ರವರ್ತಿ ವೀಣಾವೆಂಕಟರಮಣದಾಸರು ಕರ್ಣಾಟಕದ
ಸಂಗೀತದ ಇತಿಹಾಸದಲ್ಲಿ ಪ್ರಸಿದ್ದರು.
 
ಮಾರಾರರು ತಮ್ಮ ವೃದ್ಧಾಪ್ಯದಲ್ಲಿ ಕಾಶೀಯಾತ್ರೆಗಾಗಿ ಹೊರಟು ತಿರುವನಂತ
ಪುರಕ್ಕೆ ಬಂದು ಮಹಾರಾಜರ ಅತಿಧಿಗಳಾದರು. ನಂತರ ೧೮೪೨ರಲ್ಲಿ ತ್ಯಾಗರಾಜರನ್ನು
ಸಂದರ್ಶಿಸಲು ತಿರುವೈಯಾರಿಗೆ ಹೋದರು. ಮಂದ್ರವೊಂದನ್ನು ಉಳಿದು ಮಿಕ್ಕ
ಎರಡೆರಡು ತಂತಿಗಳಿರುವ ಏಳುತಂತಿಗಳ ತಂಬೂರಿಯನ್ನು ಬಳಸುತ್ತಿದ್ದರು. ಇದನ್ನು
ಮಾಟುತ್ತಾ ಬಲಗಾಲಿನ ಎರಡು ಬೆರಳುಗಳಿಂದ ಖಂಜರವನ್ನು ನಿಲ್ಲಿಸಿಕೊಂಡು
ಎಡಗೈಯಿಂದ ನುಡಿಸುತ್ತಾ ಹಾಡುತ್ತಿದ್ದರು. ಇವರು ತ್ಯಾಗರಾಜರ ಮನೆಗೆ ಬಂದ
ದಿನವು ಏಕಾದಶಿಯಾದ್ದರಿಂದ ಭಜನೆ ನಡೆಯುತ್ತಿತ್ತು. ಇವರು ಭಕ್ತರಗೋಷ್ಠಿಯಲ್ಲಿ
ಕುಳತರು. ಭಜನೆಯ ಪೂರ್ವಭಾಗವಾದ ನಂತರ ಮುಖ್ಯ ಅತಿಧಿಗಳನ್ನು ಹಾಡಲು
ಆಹ್ವಾನಿಸುವುದು ಸಂಪ್ರದಾಯ. ಅಂತೆಯೇ ಮಾರಾರರನ್ನು ಆಹ್ವಾನಿಸಿದಾಗ ಅವರು
ತಮ್ಮ ವಿಶೇಷ ತಂಬೂರಿಯನ್ನು ಶ್ರುತಿಮಾಡಿ ಜಯದೇವನ ಚಂದನ ಚರ್ಚಿತ ಎಂಬ
ನಾಲ್ಕನೇ ಅಷ್ಟ ಪದಿಯನ್ನು ಸಂತುವರಾಳಿ ರಾಗದಲ್ಲಿ ಹಾಡಲು ತೊಡಗಿದರು.
ಮೊದಲು ಅತಿ ಅತಿ ವಿಳಂಬಿತದಲ್ಲಿ ನಂತರ ಅತಿ, ವಿಳಂಬಿತ, ಮಧ್ಯಮಕಾಲ, ದ್ರುತ