2023-06-27 15:40:56 by jayusudindra
This page has been fully proofread once and needs a second look.
ರಾಮಪ್ಪನವರಲ್ಲಿ ಹಾರ್ಮೋನಿಯಂ ಶಿಕ್ಷಣ ಪಡೆದರು. ಮನ್ಮಥವಿಜಯ ಎಂಬ
ನಾಟಕದಲ್ಲಿ ಹಾರ್ಮೋನಿಯಂ ನುಡಿಸಿದರು. ನಂತರ ನಾರಾಯಣಸ್ವಾಮಿ ಎಂಬುವ
ರಲ್ಲಿ ಸಂಗೀತವನ್ನು ಕಲಿತು ಹೆಬ್ಬಣೆ ಕೃಷ್ಣಶಾಸ್ತ್ರಿ, ವೆಂಕಣ್ಣದಾಸರು ಮತ್ತು ನರಸಿಂಗ
ರಾಯರು ಮುಂತಾದವರು ಮಾಡುತ್ತಿದ್ದ ಹರಿಕಥೆಗಳಲ್ಲಿ ಹಾರ್ಮೋನಿಯಂ
ನುಡಿಸಿದರು. ೧೯೧೭-೧೮ರಲ್ಲಿ ಇವರ ವಿವಾಹವಾಯಿತು.
ನಡೆಯುತ್ತಿದ್ದ ಭಜನೆಗಳಲ್ಲಿ ಎಲ್ಲಾ ವಿದ್ವಾಂಸರಿಗೆ ಪಕ್ಕವಾದ್ಯ ನುಡಿಸುತ್ತಿದ್ದರು
ನಾಟಕ ಶಿರೋಮಣಿ ವರದಾಚಾರ್ಯರಿಂದ ಆಹ್ವಾನಿತರಾಗಿ ಅವರ ನಾಟಕಗಳಲ್ಲಿ
ಹಾರ್ಮೋನಿಯಂ ನುಡಿಸಿದರು. ಬೆಂಗಳೂರು ಪುಟ್ಟಪ್ಪನವರಲ್ಲಿ ಪ್ರೌಢ ಶಿಕ್ಷಣ
ಪಡೆದರು. ಒಂದು ಸಲ ಭೈರವಿ ಕೆಂಪೇಗೌಡರು ಇದ್ದಕ್ಕಿದ್ದ ಹಾಗೆ ಬಂದು ಬೇಗಡೆ
ಮತ್ತು ಭೈರವಿರಾಗಗಳನ್ನು ಹಾಡಿ ಇವರನ್ನು ಹರಸಿದರು.
ಶನಿವಾರಗಳಂದು
ನುಡಿಸಿದರು.
ಬೆಂಬಲದಿಂದ ಸಂಗೀತ ರಂಗವನ್ನು ಪ್ರವೇಶಿಸಿದರು. ಬಿ. ಎಸ್. ರಾಜಯ್ಯಂಗಾರರ
ಓಡಿರ್ಯ ಗ್ರಾಮಾಫೋನ್ ರೆಕಾರ್ಡ್‌ಗಳಿಗೆ ಹಾರ್ಮೋನಿಯಂ
ನಾಲ್ವಡಿ ಕೃಷ್ಣರಾಜ ಒಡೆಯರು ಇರುವವರೆಗೂ ವರ್ಷಕ್ಕೆ ಎರಡು ಸಲ ಅರಮನೆ
ಯಲ್ಲಿ ಬಿ. ಎಸ್. ರಾಜಅಯ್ಯಂಗಾರರ ಹಾಡುಗಾರಿಕೆಗೆ ಪಕ್ಕವಾದ್ಯ ನುಡಿಸು
ತಿದ್ದರು. ಹಾಗೆಯೇ ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರದಲ್ಲಿ ಪ್ರತಿವರ್ಷವೂ
ತಪ್ಪದೇ ಇವರ ಕಚೇರಿಗಳಾಗುತ್ತಿದ್ದುವು ಪ್ರಸಿದ್ಧ ಮೃದಂಗ ವಿದ್ವಾಂಸರಾಗಿದ್ದ
ದಕ್ಷಿಣಾಮೂರ್ತಿ ಪಿಳ್ಳೆಯವರ ಮೃದಂಗದೊಡನೆ ಹಲವು ಕಚೇರಿಗಳನ್ನು ಮಾಡಿದರು.
ದಕ್ಷಿಣ ಭಾರತದ ಪ್ರಮುಖ ಸ್ಥಳಗಳು, ಪೂನಾ, ಬೊಂಬಾಯಿ, ಕರಾಚಿ, ಲಾಹೋರ್,
ದೆಹಲಿ, ಅಹಮದಾಬಾದ್, ಕಲ್ಕತ್ತಗಳಲ್ಲಿ ಕಚೇರಿಗಳಲ್ಲಿ ನುಡಿಸಿ ಜಯಭೇರಿ
ಹೊಡೆದು ಬಂದರು. ಪಂಡಿತ ಮದನಮೋಹನ ಮಾಳವೀಯರು ಇವರ ವಾದನವನ್ನು
ಕೇಳಿ ಮೆಚ್ಚಿ ಪ್ರಶಂಶಿಸಿದರು. ೧೯೩೩ರಲ್ಲಿ ಬೆಂಗಳೂರಿನ ಬಳೇಪೇಟೆಯಲ್ಲಿ ಅರುಣಾ
ಮ್ಯೂಸಿಕಲ್ಸ್ ಎಂಬ ಸಂಗೀತವಾದ್ಯಗಳ ಅಂಗಡಿಯನ್ನು
ಅಂಗಡಿಯನ್ನು ಪ್ರಾರಂಭಿಸಿದರು.
ಹಾರ್ಮೋನಿಯಂ ವಾದ್ಯವನ್ನು ಬಹುವಾಗಿ ಪರಿಶೀಲಿಸಿ ಅದನ್ನು ಉತ್ತಮಗೊಳಿಸಲು
ಪ್ರಯತ್ನಿಸುತ್ತಿದ್ದರು. ಅದರ ಪರಿಣಾಮವೇ ಕಟ್‌ಲೋಸ್ ಹಾರ್ಮೋನಿಯಂ
ಬೆಲೋಸ್‌ನ್ನು ಒತ್ತಿ ಎಡಗೈ ಎತ್ತಿದರೆ ಕೂಡಲೇ ಒಳಗಿರುವ ಗಾಳಿಗೆ ತಡೆಯಾಗ
ಇದರಿಂದ ಬೆಲೋಸನ್ನು ಹತೋಟಿಯಲ್ಲಿಡಬಹುದು
ವಿಧಾನ ಮತ್ತು ತಂತ್ರ. ಇದರಿಂದ ಗಮಕಗಳನ್ನು ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯ
ವಾಯಿತು. ಸಂಗೀತರತ್ನ ಟಿ. ಚೌಡಯ್ಯ, ನಾಯನಾಪಿಳ್ಳೆಯವರ ಶಿಷ್ಯ
ನಾರಾಯಣಸ್ವಾಮಿ ಭಾಗವತರ್, ಡಿ. ಸುಬ್ಬರಾಮಯ್ಯ, ಚಿಂತನಪಲ್ಲಿ ರಾಮಚಂದ್ರ
ರಾಯರು ಮುಂತಾದವರೊಂದಿಗೆ ನೂರಾರು ಕಚೇರಿಗಳಲ್ಲಿ ನುಡಿಸಿದರು.
೪೧