This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸಿದ್ಧರಾಗಿಲ್ಲದ ಭಾರತಿಯವರು ತಾನೇ ಆ ಭಾರತಿ ಎಂದು ಪರಿಚಯ ಹೇಳಿಕೊಂಡಾಗ

ತ್ಯಾಗರಾಜರಗೆ ಮಹದಾನಂದವಾಯಿತು.
 
೪೬೩
 

ಭಾರತಿಯವರು ನೋಡಲು ಆಕರ್ಷಕವಾದ ವ್ಯಕ್ತಿಯಾಗಿರಲಿಲ್ಲ. ತ್ಯಾಗರಾಜರಿಗೆ

ಅವರು ಯಾರೆಂದು ಊಹಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ತ್ಯಾಗರಾಜರ

ಶಿಷ್ಯರು ಆ ಭೋಗಿಯ ಒಂದು ಕೃತಿಯನ್ನು ಹಾಡುತ್ತಿದ್ದರು. ಅದಾದ ನಂತರ

ಯಾವುದಾದರೂ ಕೃತಿಯನ್ನು ಆ ರಾಗದಲ್ಲಿ ರಚಿಸಿದ್ದಾರೆಯೇ ಎಂದು ಭಾರತಿಯನ್ನು

ತ್ಯಾಗರಾಜರು ಕೇಳಿದರು. ಅದಕ್ಕೆ ಅವರು ಉತ್ತರ ಕೊಡದೆ ಸುಮ್ಮನಿದ್ದೂ ಅದೇ

ರಾತ್ರಿ ಈಗ ಪ್ರಚಲಿತವಿರುವ ಸಭಾಪತಿಕ್ಕು ಬೇರು ದೈವಂ ಎಂಬ ಕೃತಿಯನ್ನು ರಚಿಸಿ

ಮೂರನೆಯ ದಿನ ತ್ಯಾಗರಾಜರ ಮುಂದೆ ಹಾಡಿದರು. ತ್ಯಾಗರಾಜರು ಅವರ ಪ್ರತಿಭೆ

ಮೆಚ್ಚಿ ಆಶೀರ್ವದಿಸಿದರು ಇಲ್ಲಿಂದ ಮುಂದೆ ಭಾರತಿಯವರು ಅನೇಕ ಕೃತಿಗಳನ್ನು

ತ್ಯಾಗರಾಜರ ಮನೆಯಲ್ಲಿದ್ದ ಆಧ್ಯಾತ್ಮಿಕ ವಾತಾವರಣ

ಮತ್ತು ಅವರ ನಡವಳಿಕೆಯಿಂದ ಭಾರತಿಯವರಿಗೆ ಬಹಳ ಮೆಚ್ಚಿಗೆಯಾಯಿತು.
 
ತಮಿಳಿನಲ್ಲಿ ರಚಿಸಿದರು.
 

ಸ್ವಾತಿ ತಿರುನಾಳರ ಪ್ರತಿನಿಧಿ ವಡಿವೇಲು-ತಿರುವಾಂಕೂರಿನ ಮಹಾ

ರಾಜ ಸ್ವಾತಿ ತಿರುನಾಳರು ತ್ಯಾಗರಾಜರ ಶಿಷ್ಯರಾದ ಕನ್ನಯ್ಯ ಭಾಗವತರಿಂದ ಅವರ

ಅನೇಕ ಕೃತಿಗಳನ್ನು ಕೇಳಿದ್ದರು. ಈ ಪ್ರಸಿದ್ಧ ವಾಗ್ಗೇಯಕಾರರನ್ನು ಭೇಟಿ ಮಾಡ

ಬೇಕೆಂಬ ಬಯಕೆ ಉಂಟಾಯಿತು. ಶ್ರೇಷ್ಠಗಾಯಕ ಹಾಗೂ ಪಿಟೀಲು ವಿದ್ವಾಂಸ

ಮತ್ತು ಆಸ್ಥಾನ ವಿದ್ವಾಂಸರಾಗಿದ್ದ ವಡಿವೇಲುವನ್ನು ತ್ಯಾಗರಾಜರನ್ನು ತಮಲ್ಲಿಗೆ ಬರ

ಮಾಡಿಕೊಳ್ಳಲು ತಿರುವೈಯ್ಯರಿಗೆ ಕಳುಹಿಸಿದರು. ವಡಿವೇಲು ವೀಣಾಕುಪ್ಪಯ್ಯರ

ಸ್ನೇಹಿತರಾಗಿದ್ದರು ಮತ್ತು ತ್ಯಾಗರಾಜರನ್ನು ನೋಡಿದ್ದರೇ ವಿನಹ ನೇರವಾ
 
ಪರಿಚಯವಿರಲಿಲ್ಲ.
 

ವಡಿವೇಲು ತಿರುವೈಯಾರಿಗೆ ಹೋಗಿ ತ್ಯಾಗರಾಜರ ಮನೆಯ ಎದುರು

ಸಾಲಿನಲ್ಲಿ ಕಾವೇರಿಗೆ ಸಮೀಪದಲ್ಲಿದ್ದ ಒಂದು ಮನೆಯಲ್ಲಿ ಬಿಡಾರ ಮಾಡಿದರು.

ಸ್ನಾನ ಸಂಧ್ಯಾವಂದನೆಗಳಿಗಾಗಿ ಕಾವೇರಿಗೆ ತ್ಯಾಗರಾಜರು ಇದೇ ಮನೆಯ ಸವಿಾಪದಲ್ಲಿ

ಹೋಗಬೇಕಾಗಿತ್ತು. ಪ್ರತಿದಿನ ಸಂಜೆ ಅವರು ಕಾವೇರಿಗೆ ಹೋಗುವ ಸಮಯಕ್ಕೆ

ಸರಿಯಾಗಿ ವಡಿವೇಲು ಅವರ ಗಮನ ಸೆಳೆಯಲು ಹಾಡುತ್ತಿದ್ದರು. ಮೊದಲನೆಯ

ದಿನ ತ್ಯಾಗರಾಜರು ಹೋಗುತ್ತಿದ್ದಾಗ ಗಾಯನವನ್ನು ಕೇಳಿ ಸ್ವಲ್ಪ ಹೊತ್ತು ಆ ಮನೆಯ

ಮುಂದೆ ನಿಂತು ನಂತರ ಮನೆಗೆ ಬಂದರು. ಎರಡನೆಯ ದಿನ ಅದೇ ರೀತಿ ಇನ್ನೂ
 
ಸ್ವಲ್ಪ ಹೆಚ್ಚು ಕಾಲ ನಿಂತು ಕೇಳಿ ಗಾಯಕನು ಪ್ರತಿಭಾಶಾಲಿ ಎಂದು ತೀರ್ಮಾನಿಸಿದರು.

ಮೂರನೆಯ ದಿನ ಅವರ ಕುತೂಹಲವು ಹೆಚ್ಚಾಯಿತು. ಆ ಮನೆಯ ಒಳಕ್ಕೆ ಹೋಗಿ

ಅಷ್ಟು ಚೆನ್ನಾಗಿ ಹಾಡುವ ವ್ಯಕ್ತಿ ಯಾರೆಂದು ತಿಳಿಯಬೇಕೆಂದು ಇಚ್ಚಿಸಿ ಒಳಕ್ಕೆ

ಹೋದರು. ಅವರು ಬರುತ್ತಿದ್ದುದನ್ನು ನೋಡಿದ ವಡಿವೇಲು ಕೂಡಲೇ ಎದ್ದು ನಿಂತು

ನಮಸ್ಕರಿಸಿ "ಇದು ನನಗೆ ಸುದಿನ, ತಾವು ಹೇಳಿ ಕಳುಹಿಸಿದ್ದರೆ ನಾನು ತಮ್ಮ ಮನೆಗೆ