This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತ್ಯಾಗರಾಜರನ್ನು ಭೇಟಿ ಮಾಡಿದ ಕೆಲವು ಪ್ರಸಿದ್ಧ ವ್ಯಕ್ತಿಗಳು

ಆಗಿನ ಅನೇಕ ಪ್ರಸಿದ್ಧ ಕವಿಗಳು, ವಾಗ್ಗೇಯಕಾರರು, ಸಂಗೀತಗಾರರು, ಸನ್ಯಾಸಿಗಳು,

ಶ್ರೀಮಂತರು ಮತ್ತು ರಾಜರು ಮಹಾಪುರುಷರಾದ ತ್ಯಾಗರಾಜರನ್ನು ಸಂದರ್ಶಿಸಲು

ಬಂದು ಅವರ ಅತಿಧಿಗಳಾಗಿರುತ್ತಿದ ರು.
 

ತೂಮು ನರಸಿಂಹದಾಸರು ತೆಲುಗು ಮತ್ತು ಸಂಸ್ಕೃತದಲ್ಲಿ ಭಕ್ತಿ ಗೀತೆಗಳನ್ನು ರಚಿ

ಸಿದ ಪ್ರಮುಖ ವಾಗ್ಗೇಯಕಾರರಾಗಿದ್ದರು. ಈ ಹಾಡುಗಳನ್ನು ಭಜನೆಗಳಲ್ಲಿ ಹೆಚ್ಚಾಗಿ

ಹಾಡುತ್ತಾರೆ. ಇವರು ಆಂಧ್ರದ ಗುಂಟೂರಿನಲ್ಲಿ ವಾಸಿಸುತ್ತಿದ್ದರು. ರಾಮೇಶ್ವರಕ್ಕೆ

ತೀರ್ಧಯಾತ್ರೆ ಹೋಗುತ್ತಾ ತಿರುವೈಯಾರಿಗೆ ಬಂದು ೧೮೨೧ ರಲ್ಲಿ ತ್ಯಾಗರಾಜರನ್ನು

ಸಂದರ್ಶಿಸಿ ಅವರ ಗಾಯನವನ್ನು ಕೇಳಿ ಆನಂದಭರಿತರಾಗಿ ಅವರು ಭೂಲೋಕದ

ನಾರದರೆಂದು ಪ್ರಶಂಸಿಸಿ ತಮ್ಮ ಅನುಭವವನ್ನು ಕುರಿತು ಒಂದು ಸೀಸ ಪದ್ಯವನ್ನೂ,

ಎರಡು ತೆಲುಗು ವದ್ಯಗಳನ್ನು ರಚಿಸಿದರು. ಕೆಲವು ದಿನಗಳು ತ್ಯಾಗರಾಜರ

ಸಂಗಡವಿದ್ದು ತಮ್ಮ ತೀರ್ಧಯಾತ್ರೆಯನ್ನು ಮುಗಿಸಿ ಗುಂಟೂರಿಗೆ ಹಿಂತಿರು
 
ಗಿದರು.
 
೪೬೨
 

ಗೋಪೀನಾಥಭಟ್ಟಾಚಾರ್ಯ-ಇವರು ವಾರಣಾಸಿಯ ಪ್ರಸಿದ್ಧ ಹಿಂದೂ

ಸ್ಥಾನಿ ಸಂಗೀತ ವಿದ್ವಾಂಸರಾಗಿದ್ದರು. ರಾಮೇಶ್ವರಕ್ಕೆ ತೀರ್ಧಯಾತ್ರೆ ಹೊರಟು

ತಂಜಾವೂರಿಗೆ ಬಂದು ನಂತರ ತಿರುವೈಯಾರಿಗೆ ಹೋಗಿ ತ್ಯಾಗರಾಜರ ಸಂದರ್ಶನ

ಮಾಡಿ ಅವರ ಬಹು ದಿನದ ಆಸೆ ಅಂದು ಪೂರೈಸಿತೆಂದು ಹೇಳಿದರು. ಇದನ್ನು

ಕೇಳಿದ ತ್ಯಾಗರಾಜರು ತೋಡಿ ರಾಗದ ದಾಶರಧೇ ನೀ ಋಣಮು ಎಂಬ ಕೃತಿಯನ್ನು

ಹಾಡಿ ತಮ್ಮ ಕೀರ್ತಿಯು ಎಲ್ಲೆಲ್ಲೂ ಹರಡಿರುವುದಕ್ಕಾಗಿ ಶ್ರೀ ರಾಮನಿಗೆ ತಮ್ಮ

ಕೃತಜ್ಞತೆಯನ್ನು ಸಲ್ಲಿಸಿದರು. ಭಕ್ತಿಯಿಂದ ತಕ್ಷಣವೇ ತ್ಯಾಗರಾಜರ ಕೃತಿ ರಚಿಸಿ

ಹಾಡಿದ ಆ ಗಾಯನ ಮಾಧುರದಿಂದ ಭಟ್ಟಾಚಾರ್ಯರಿಗೆ ರೋಮಾಂಚನವಾಯಿತು.

ಕೆಲವು ದಿನಗಳು ಅವರ ಅತಿಥಿಯಾಗಿದ್ದೂ ನಂತರ ತಮ್ಮ ತೀರ್ಥಯಾತ್ರೆಯನ್ನು
 
ಮುಂದುವರಿಸಿದರು.
 

ಗೋಪಾಲ ಕೃಷ್ಣ ಭಾರತಿ-ಗೋಪಾಲ ಕೃಷ್ಣ ಭಾರತಿಯು ತಮಿಳಿನಲ್ಲಿ

ಅನೇಕ ಹಾಡುಗಳನ್ನು ರಚಿಸಿ 'ನಂದನಾರ್ ಚರಿತ್ರಂ'ನ್ನು ರಚಿಸುವ ಮೊದಲೇ

ಪ್ರಸಿದ್ಧರಾಗಿದ್ದ ರು.

ಸರಳವಾದ ಭಾಷೆ ಮತ್ತು ಉತ್ತಮ ಸಂಗೀತವಿರುವ ಇವರ

ಹಾಡುಗಳು ತಮಿಳು ನಾಡಿನಲ್ಲಿ ಎಲ್ಲರ ಬಾಯಲ್ಲೂ ಇತ್ತು * ನಂದನಾರ್ ಚರಿತ್ರಂ'
 

1851 ರಲ್ಲಿ ಪ್ರಕಟವಾಯಿತು. ಭಾರತಿಯವರಿಗೆ ತ್ಯಾಗರಾಜರನ್ನು ಸಂದರ್ಶಿಸಿ ಅವರ

ಆಶೀರ್ವಾದವನ್ನು ಪಡೆಯಬೇಕೆಂಬ ಹಂಬಲ ಪ್ರಬಲವಾಗಿತ್ತು. ಒಂದು ಸಲ

ತಿರುವೈಯ್ಯಾರಿಗೆ ಹೋಗಿ ಅವರನ್ನು ಭೇಟಿ ಮಾಡಿದರು.

ರೆಂದು ತಿಳಿದ ತ್ಯಾಗರಾಜರು ಒಳ್ಳೆಯ ತಮಿಳು ಹಾಡುಗಳನ್ನು ರಚಿಸಿರುವ ಗೋಪಾಲ

ಕೃಷ್ಣ ಭಾರತಿಯವರು ನಿಮಗೆ ಗೊತ್ತೇ ? ಎಂದು ಕೇಳಿದರು. ಇಂತಹ ಪ್ರಭಾರಶಂಸೆಗೆ
 
ಅವರು ಮಾಯಾವರದವ