This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಒಂದು ದಿನ ತ್ಯಾಗರಾಜರು ಮತ್ತು ಇತರ ಶಿಷ್ಯರೂ ಕಾರ್ಯಾರ್ಥವಾಗಿ ಎಲ್ಲೋ
ಹೋಗಿದ್ದಾಗ, ಇಂತಹ
ಸಮಯವನ್ನೇ ಎದುರು ನೋಡುತ್ತಿದ್ದ ಕುಪ್ಪಯ್ಯರ್
ಗುರುವಿನ ವೀಣೆಯನ್ನು ತೆಗೆದುಕೊಂಡು ಅದನ್ನು ಅದ್ಭುತವಾಗಿ ನುಡಿಸುವುದರಲ್ಲಿ
ತಲ್ಲೀನರಾದರು. ಈ ವಾದನದಿಂದ ಆಕರ್ಷಿತರಾದ ಗುರು ಪತ್ನಿಯು ಅಡಿಗೆ
ಮನೆಯಿಂದ ಬಂದು ನೋಡಿ ಅಯ್ಯರ್‌ರವರಿಗೆ ತಿಳಿಯದಂತೆ ಮರೆಯಲ್ಲಿ ನಿಂತು
ಕೇಳುತ್ತಿದ್ದರು. ಸ್ವಲ್ಪ ಹೊತ್ತಾದ ನಂತರ ಮನೆಗೆ ಬಂದ ತ್ಯಾಗರಾಜರು ಸೊಗಸಾದ
ವೀಣಾವಾದನವನ್ನು ಕೇಳಿ ಯಾರಿರಬಹುದೆಂದು ಆಶ್ಚರ್ಯ ಪಡುತ್ತಾ ಹಾಗೆಯೇ
ಜಗಲಿಯಲ್ಲಿ ಕುಳಿತು ಕೇಳತೊಡಗಿದರು. ಕುತೂಹಲವು ಹೆಚ್ಚಾಯಿತು. ಒಳಗೆ
ಹೋದರು. ಗುರುವನ್ನು ನೋಡಿದ ಕೂಡಲೇ ಕುಪ್ಪಯ್ಯರ್ ಎದ್ದು ಸಾಷ್ಟಾಂಗ
ಪ್ರಣಾಮ ಮಾಡಿ ಅವರ ಅಪ್ಪಣೆಯಿಲ್ಲದೆ ನುಡಿಸಿದ್ದಕ್ಕಾಗಿ ಕ್ಷಮೆ ಬೇಡಿದರು
ತ್ಯಾಗರಾಜರು ಅವರ ವೀಣಾವಾದನವನ್ನು ಮೆಚ್ಚಿಕೊಂಡು ಸಂತೋಷ ವ್ಯಕ್ತ
ಪಡಿಸಿದರು. ಈ ಘಟನೆಯು ಅವರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ.
"ದಾರಿನಿ ತೆಲುಸು ಕೊಂಟ" ಒಂದು ಸಲ ಆಗಿನ ಪ್ರಸಿದ್ಧ ನಾಗಸ್ವರ
ವಿದ್ವಾಂಸರಾಗಿದ್ದ ದಾಸರಿ ಎಂಬುವರು ತಿರುವೈಯ್ಯಾರಿನ ದೇವಾಲಯದ ಉತ್ಸವಕ್ಕೆ
ನುಡಿಸಲು ಬಂದರು. ಉತ್ಸವವು ತ್ಯಾಗರಾಜರ ಮನೆಯ ಸಮೀಪಕ್ಕೆ ಬಂದಿತು.
ದಾಸರಿಯು ಶುದ್ಧ ಸಾವೇರಿ ರಾಗಾಲಾಪನೆಯನ್ನು ನುಡಿಸಿ ತ್ಯಾಗರಾಜ ವಿರಚಿತ
ದಾರಿನಿ ತೆಲುಸು ಕೊಂಟಿ ಎಂಬ ಕೃತಿಯನ್ನು ಅದರ ಹೊಳೆಯುವ ಸಂಗತಿಗಳೊಡನೆ
ಅದ್ಭುತವಾಗಿ ನುಡಿಸಿದರು. ಆ ನಿಶ್ಯಬ್ದ ರಾತ್ರಿಯಲ್ಲಿ ಮನೆಯಿಂದಲೇ ಕೇಳುತ್ತಿದ್ದ
ತ್ಯಾಗರಾಜರು ಬಹಳ ಸಂತೋಷ ಪಟ್ಟು ದಾಸರಿಯನ್ನು ಕಂಡು ಅಭಿನಂದಿಸಿದರು.
 
ಜ್ಯೋತಿ ಸ್ವರೂಪಿಣಿ ರಾಗದ ಘಟನೆ : ಒಂದು ಸಲ ತ್ಯಾಗರಾಜರು
ತಮ್ಮ ಗುರು ಸೊಂಟ ವೆಂಕಟರಮಣದಾಸರ ಸಂಗಡ ಪುದುಕೋಟೆಯ ರಾಜಾಸ್ಥಾನಕ್ಕೆ
ಹೋಗಿದ್ದರು. ಆಗ ವಿಜಯರಘುನಾಥ ತೊಂಡೈಮಾನ್ ಈ ಸಂಸ್ಥಾನದ ರಾಜ
ನಾಗಿದ್ದನು. ಇವನು ವಿದ್ವಾಂಸನೂ, ಸಂಗೀತಗಾರನೂ ಆಗಿದ್ದು ನೂರಾರು ಸಂಸ್ಕೃತ
ಮತ್ತು ತೆಲುಗು ವಿದ್ವಾಂಸರು ಮತ್ತು ಸಂಗೀತ ವಿದ್ವಾಂಸರ ಪೋಷಕನಾಗಿದ್ದನು
ಆಸ್ಥಾನದಲ್ಲಿ ನೆರೆದಿದ್ದ ಸಂಗೀತ ವಿದ್ವಾಂಸರಿಗೆ ಒಂದು ವಿಚಿತ್ರವಾದ ಸವಾಲನ್ನು ಹಾಕಿ
ದನು. ಅವರ ಮುಂದೆ ದರ್ಬಾರು ಮಂಟಪದ ಮಧ್ಯದಲ್ಲಿ ಒಂದು ದೀಪವನ್ನು ಇಟ್ಟು
ಅದನ್ನು ತಮ್ಮ ಗಾಯನದಿಂದ ಮಾತ್ರ ಹತ್ತಿಕೊಳ್ಳುವಂತೆ ಮಾಡಬೇಕೆಂದು ಹೇಳಿ
ಗುರುವಿನಿಂದ ಪ್ರೋತ್ಸಾಹಿಸಲ್ಪಟ್ಟ ತ್ಯಾಗರಾಜರು ಜ್ಯೋತಿ ಸ್ವರೂಪಿಣಿ ರಾಗ
ವನ್ನು ಹಾಡಿದಾಗ ದೀಪವು ಹತ್ತಿಕೊಂಡು ಆ ರಾಗದ ಏರಿಳಿತಕ್ಕೆ ತಕ್ಕಂತೆ ಅದರ
ಪ್ರಕಾಶವು ಹೆಚ್ಚು ಕಡಿಮೆಯಾಗುತ್ತಿದ್ದುದನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತ
ಈ ವಿಚಾರವು ಪುದುಕೋಟೆಗೆ ಜೆಟಿಯರ್‌ನಲ್ಲಿ ಹೇಳಲಾಗಿದೆ. (ಸಂಪುಟ
 
ದನು.
 
ರಾದರು.
 
೨, ಪುಟ ೮೨೦)
 
೪೬೧