2023-07-05 10:08:27 by jayusudindra
This page has been fully proofread once and needs a second look.
ರಾಗಾಲಾಪನೆ ಮಾಡಲು ಪ್ರಯತ್ನಿಸಿದ್ದನ್ನು ಕ್ಷಮಿಸಬೇಕು' ಎಂದರು. * ನೀವು
ಶಿಷ್ಯರು ತಿಳಿಸಿದರು. ನಾನೇ ಕೇಳಲು ಬಂದೆ,
ನಿಮ್ಮ ಹಾಡುಗಾರಿಕೆಯಿಂದ
ಬಹಳ ಸಂತೋಷವಾಗಿದೆ' ಎಂದರು ತ್ಯಾಗರಾಜರು. ಆಗ
ಅಯ್ಯರ್‌ರವರು
ತ್ಯಾಗರಾಜರನ್ನು ಒಂದು ವರ ನೀಡಬೇಕೆಂದು ಪ್ರಾರ್ಥಿಸಿದರು.
ಅವರು ತಥಾಸ್ತು
ಎಂದ ಕೂಡಲೇ ತಾವು ಇನ್ನು ಮುಂದೆ ಈ ರಾಗದಲ್ಲಿ ಕೃತಿಗಳನ್ನು ರಚಿಸಬಾರದು.
ಮುಂದಿನ ಜನಾಂಗದವರು ಏಕೆ ಹೀಗೆ ಮಾಡಿದ್ದಾರೆ ಎಂದು ಕೇಳಿದಾಗ ಈ
ಘಟನೆಯು ಜ್ಞಾಪಕಕ್ಕೆ ಬಂದು ನನ್ನ ಹೆಸರು ಎಂದೆಂದಿಗೂ ನಿಲ್ಲುತ್ತದೆ' ಎಂದು
ಅಯ್ಯರ್ ಕೇಳಿದರು. ತ್ಯಾಗರಾಜರು ಆ ನಟನ ಬುದ್ಧಿವಂತಿಕೆಗೆ ನಕ್ಕು ಒಪ್ಪಿ
ಅಂತೆ
ರಚಿಸಿದ್ದ ಕೃತಿಗಳನ್ನು ಶಿಷ್ಯರಿಗೆ ಹೇಳಿಕೊಡಲಿಲ್ಲ. • ರಾಮ ರಾಮ ನೀವರಮು
ಎಂಬ ದಿವ್ಯನಾಮ ಕೀರ್ತನೆ, ಕ್ಷೀರಸಾಗರ ವಿಹಾರ ಎಂಬ ಉತ್ಸವ ಸಂಪ್ರದಾಯ
ಕೀರ್ತನೆ ಮತ್ತು ನೀವೇ ತೆಲಿಯಕ ಎಂಬ ಕೃತಿ ಅವರ ಶಿಷ್ಯರಿಂದ ನಮಗೆ ಬಂದಿವೆ.
ನೀದಯಚೇ-ತ್ಯಾಗರಾಜರ ಭಜನೆಗಳಿಗೆ ಬರುತ್ತಿದ್ದ ಒಬ್ಬ ವ್ಯಕ್ತಿಯು
ಅವನಿಂದ ಒಂದು ಹಾಡನ್ನು ಹೇಳಿಸಿ ಅವನ ಕಂಠದ ಇತಿ ಮಿತಿಯನ್ನು ತಿಳಿದು
ಯದುಕುಲ ಕಾಂಭೋಜಿರಾಗದಲ್ಲಿ ಸರಳವಾದ ನೀ ದಯ ಚೇ ಎಂಬ ಕೃತಿಯನ್ನು
ರಚಿಸಿ ಹೇಳಿಕೊಟ್ಟರು.
(೧೭೮೧-೧೮೭೪) ತ್ಯಾಗರಾಜರ ಒಬ್ಬ ಪ್ರಮುಖ ಶಿಷ್ಯರಾಗಿದ್ದರು. ಇವರನ್ನು
ತ್ಯಾಗರಾಜರ ಬಾಸ್ಟೆಲ್ ಎನ್ನಬಹುದು. ಪ್ರಾರಂಭದಲ್ಲಿ ಭಾಗವತರು ಇತರ
ಶಿಷ ರಂತೆ ಸಂಗೀತದಲ್ಲಿ ಮುಂದುವರಿಯುತ್ತಿರಲಿಲ್ಲ. ಇದನ್ನು ಕಂಡ ಗುರುವಿಗೆ
ಸಂಕಟವಾಯಿತು. ಶಿಷ್ಯನಿಗೆ ಸಂಗೀತ ಜ್ಞಾನವನ್ನು ಕರುಣಿಸಬೇಕೆಂದು
ಭಗವಂತನಲ್ಲಿ ಮೊರೆಯಿಟ್ಟರು. ಮಾರನೆಯ ದಿನದಿಂದಲೇ ಭಾಗವತರು ಎಲ್ಲರೂ
ಆಶ್ಚರ್ಯ ಪಡುವಂತೆ ತಮ್ಮ ಕಲಿಕೆಯಲ್ಲಿ ಪ್ರಗತಿಪಡೆದು ತ್ಯಾಗರಾಜರ ಪ್ರಸಿದ್ಧ
ಶಿಷ್ಯರಾದರು. ಇವರು ತ್ಯಾಗರಾಜರೊಡನೆ ೨೬ ವರ್ಷಗಳಿಗಿಂತ ಹೆಚ್ಚು ಕಾಲ ನಿಕಟ
ಸಂಪರ್ಕ ಪಡೆದಿದ್ದು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅವರ ಕೃತಿಗಳನ್ನು
೪೬೦
ವೀಣಾಕುಪ್ಪಯ್ಯರ್ ಮತ್ತು ತ್ಯಾಗರಾಜರ ವೀಣೆ-ಕುಪ್ಪಯ್ಯರ್
ತ್ಯಾಗರಾಜರಲ್ಲಿ ಶಿಷ್ಯವೃತ್ತಿಗೆ ಬಂದಾಗ ತಾನು ವೈಣಿಕನೆಂದು ಅವರಿಗೆ ತಿಳಿಸಲಿಲ್ಲ
ತನ್ನ ಗುರುವಿನ ವೀಣೆಯನ್ನು ನುಡಿಸಬೇಕೆಂಬ ಬಯಕೆ ಅವರಿಗೆ ಪ್ರಬಲವಾಯಿತು