This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸಂಗೀತಗಾರರು ಮತ್ತು ವಾಗ್ಗೇಯಕಾರರಿದ್ದರು. ಸುಮಾರು ಮೂರು ಶತಮಾನಗಳ
ಕಾಲ (೧೬೦೦-೧೯೦೦) ತಂಜಾವೂರು ಒಂದು ಪ್ರಮುಖ ಸಂಗೀತ ಕಲಾ ಕೇಂದ್ರ
ವಾಗಿತ್ತು. ತ್ಯಾಗರಾಜರ ಕಾಲದಲ್ಲಿ ತಂಜಾವೂರು ಆಸ್ಥಾನದಲ್ಲಿ ೩೬೦ ಸಂಗೀತ
ವಿದ್ವಾಂಸರಿದ್ದರು. ಸಂಗೀತ ಮಹಲ್‌ನಲ್ಲಿ ರಾಜನ ಮುಂದೆ ಹಾಡಲು
ಪ್ರತಿಯೊಬ್ಬರಿಗೂ ವರ್ಷದಲ್ಲಿ ಒಂದು ದಿನ ಮಾತ್ರ ಅವಕಾಶ ದೊರಕುತ್ತಿತ್ತು. ಪ್ರತಿ
ಯೊಬ್ಬರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದರು. ಕೆಲವರು
ಕೆಲವು ರಾಗಗಳನ್ನು
ಪ್ರಸಿದ್ಧರಾಗಿದ್ದರು ತೋಡಿ ಸೀತಾ
ರಾಮಯ್ಯ, ಅರಾಣ ಅಪ್ಪಯ್ಯ, ಶಂಕರಾಭರಣಂ ನರಸಯ್ಯ ಮುಂತಾದವರು
ಪ್ರಸಿದ್ಧರು.
 
ಹಾಡುವುದರಲ್ಲಿ
 
೪೫೮
 
ಉಂಛವೃತ್ತಿಯ
 
ವಾರಕ್ಕೆ
 
ಸರಳ ಜೀವನ, ಉನ್ನತ ಧೈಯಗಳು, ಚಿಂತನೆ, ಮಾನವ ಕೋಟಿಯ ಸೇವೆ
ಮುಂತಾದುವುಗಳಿಂದ ಪ್ರೇರಿತರಾದ ತ್ಯಾಗರಾಜರು ಅತ್ಯಂತ ಸರಳವಾದ ಜೀವನವನ್ನು
ನಡೆಸುತ್ತಿದ್ದರು. ಪಿತ್ರಾರ್ಜಿತವಾದ ಮನೆಯ ಒಂದು ಭಾಗ ಮತ್ತು ಸ್ವಲ್ಪ ಜಮೀನಿನ
ವಿನಹ ಇವರಿಗೆ ಇನ್ಯಾವ ಆಸ್ತಿ ಯೂ ಇರಲಿಲ್ಲ.
ಮೂಲಕ
ತನ್ನ ಕುಟುಂಬವನ್ನೂ, ಅನೇಕ ಶಿಷ್ಯರನ್ನೂ ಪೋಷಿಸುತ್ತಿದ್ದರು. ಇದಲ್ಲದೆ ಅನೇಕ
ಸಂಗೀತಗಾರರು, ಪಂಡಿತರು, ಭಾಗವತರೂ ಅತಿಥಿಗಳಾಗಿ ಬರುತ್ತಿದ್ದರು.
ಒಂದು ದಿನ ಮಾತ್ರ ಉಂಛ ವೃತ್ತಿಗೆ ಹೋಗುತ್ತಿದ್ದರು. ನೆರೆಹೊರೆಯ ಸ್ಥಳಗಳಿಗೆ
ಆಹ್ವಾನೆಯ ಮೇರೆಗೆ ಉಂಛ ವೃತ್ತಿ ಭಜನೆಗಳಿಗಾಗಿ ಹೋಗುತ್ತಿದ್ದರು. ಎನ್ನಾಳ್ಳು
ತಿರಿಗೇದಿ' ಎಂಬ ಮೂಳವ ಶ್ರೀ ರಾಗದ ಕೃತಿಯಲ್ಲಿ ಇದನ್ನು ಸೂಚಿಸಿದ್ದಾರೆ. ಇವರ
ಮಧ್ಯ ವಯಸ್ಸಿನಲ್ಲಿ ಅತ್ಯಂತ ಶ್ರೇಷ್ಠ' ವಾಗ್ಗೇಯಕಾರ ಮತ್ತು ಗಾಯಕನೆಂಬ ಕೀರ್ತಿ
ದೇಶದ ಮೂಲೆ ಮೂಲೆಗಳಿಗೆ ಹರಡಿತು. ರಸಿಕರು ಮತ್ತು ಖ್ಯಾತ ವಿದ್ವಾಂಸರು
ದೂರದ ಪ್ರದೇಶಗಳಿಂದ ಇವರ ಸಂದರ್ಶನ ಪಡೆಯುತ್ತಿದ್ದರು. ತನ್ನ ಕೀರ್ತಿಯು
ಎಲ್ಲೆಲ್ಲೂ ಹರಡುವಂತೆ ಮಾಡಿದ ಶ್ರೀ ರಾಮನನ್ನು 'ದಾಶರಥೇ ! ನೇ ಋಣಮು' ಎಂಬ
ತೋಡಿರಾಗದ ಕೃತಿಯಲ್ಲಿ ಕೊಂಡಾಡಿದ್ದಾರೆ. ಅವರಿಗೆ ತಮ್ಮ ಕೃತಿಗಳು ಉತ್ತಮ
ವಾದವು ಮತ್ತು ತಮ್ಮ ಮೂಲಕ ದೇವರು ತಿಳಿಸಿದನೆಂದು ತಿಳಿದಿತ್ತು
 
ತ್ಯಾಗರಾಜರು ತಮ್ಮ ಸಂಗೀತ ಜೀವನವನ್ನು ಆರಂಭಿಸಿದಾಗ ಕೆಲವು ಕುತೂ
ಹಲಕರವಾದ ಘಟನೆಗಳು ನಡೆದುವು ಅವರ 18ನೆ ವಯಸ್ಸಿನಲ್ಲಿ ಹರಿದಾಸ ಅಥವಾ
ರಾಮಕೃಷ್ಣ ಯತೀಂದ್ರರೆಂಬುವರು ಕಾಂಚೀಪುರದಿಂದ ಬಂದು ರಾಮ ತಾರಕ ಮಂತ್ರ
ವನ್ನು ಉಪದೇಶಿಸಿ ಅದನ್ನು 96 ಕೋಟಿ ಸಲ ಜಪ ಮಾಡಬೇಕೆಂದು ಹೇಳಿದರು.
ತ್ಯಾಗರಾಜರು ರಾಮನಾಮ ಜಪವನ್ನು ಸರಾಸರಿ ದಿನವೊಂದಕ್ಕೆ 125000 ದಷ್ಟು
ಜಪಿಸಿ 21 ವರ್ಷಗಳಲ್ಲಿ ಪೂರ್ಣಗೊಳಿಸಿದರು. ಈ ಕಾಲದಲ್ಲಿ ಹಲವು ಸಲ
ಶ್ರೀ ರಾಮನು ಇವರಿಗೆ ದರ್ಶನವಿತ್ತು ಅನುಗ್ರಹಿಸಿದನು. ಏಲಸೀ ದಯರಾದು
(ಅಠಾಣ) ಮತ್ತು ಕನುಗೊಂಟಿನಿ (ಬಿಲಹರಿ) ಮುಂತಾದ ಕೃತಿಗಳನ್ನು ಇಂತಹ
 
<