2023-07-05 10:04:40 by jayusudindra
This page has been fully proofread once and needs a second look.
ಗಳನ್ನೂ, ಹಾಡುಗಳನ್ನೂ ರಚಿಸಿದರು. ತ್ಯಾಗರಾಜರ ಮಾತಾಮಹರಾದ ವೀಣಾ
ಕಾಳಹಸ್ತಿ ಅಯ್ಯರ್ ತಂಜಾವೂರಿನ ಆಸ್ಥಾನ ವಿದ್ವಾಂಸರಾಗಿದ್ದರು. ರಾಮಬ್ರಹ್ಮರ
ಮೂವರು ಪುತ್ರರಲ್ಲಿ ಹಿರಿಯವರು ಪಂಚಾಪಕೇಶ ಅಥವಾ ಜಶನ್, ಎರಡನೆಯವರು
ರಾಮನಾಥನ್ ಮತ್ತು ಕಿರಿಯವರು ತ್ಯಾಗರಾಜರು. ರಾಮನಾದನ್ ತಾರುಣ್ಯದಲ್ಲೇ
ತೀರಿಕೊಂಡರು. ಜಶನ್ ಕೆಲವು ಲೇಖಕರು ಚಿತ್ರಿಸಿರುವಷ್ಟು ಕೆಟ್ಟವರಾಗಿರಲಿಲ್ಲ.
ಅವರಿಗೆ ತ್ಯಾಗರಾಜರ ಧೈಯಗಳು ಹಿಡಿಸಲಿಲ್ಲ. ತ್ಯಾಗರಾಜರು ರಾಜರು ನೀಡಿದ
ವರಮಾನವನ್ನು ನಿರಾಕರಿಸಿ ನಿಧಿಚಾಲ ಸುಖಮಾ' ಎಂಬ ಕೃತಿಯಲ್ಲಿರುವ ಭಾವನೆ
ಯನ್ನು ತಿಳಿದು 'ನಿನ್ನ ರಾಮಭಜನೆಯಿಂದ ಹೊಟ್ಟೆ ತುಂಬುತ್ತದೆಯೇ" ಎಂದರು.
ತ್ಯಾಗರಾಜರ ತಾಯಿ ಚೆನ್ನಾಗಿ ಹಾಡುತ್ತಿದ್ದರು. ಅವರಿಗೆ ಪುರಂದರದಾಸರ ಅನೇಕ
ಕೀರ್ತನೆಗಳು ತಿಳಿದಿತ್ತು.
೪೫೬
ತುಳಜಾಜಿ ಮಹಾರಾಜನು(೧೭೬೫-೧೭೮೭)
ರಾಮಬ್ರಹ್ಮರ ಪಾಂಡಿತ್ಯ
ಮತ್ತು ಭಕ್ತಿಯನ್ನು ಮೆಚ್ಚಿಕೊಂಡು ರಾಮನವಮಿ ಉತ್ಸವದ ಕಾಲದಲ್ಲಿ ತನ್ನ
ಆಸ್ಥಾನದಲ್ಲಿ ರಾಮಾಯಾಣದ ಪ್ರವಚನ ಮಾಡಲು ಪ್ರಾರ್ಥಿಸಿದನು. ಇಂತಹ
ಸಂದರ್ಭಗಳಲ್ಲಿ ತಂದೆಯೊಡನೆ ತ್ಯಾಗರಾಜರೂ ಹೋಗುತ್ತಿದ್ದರು. ಮತ್ತು ಶ್ಲೋಕ
ಗಳನ್ನು ಓದುತ್ತಿದ್ದರು. ರಾಮಬ್ರಹ್ಮ ಅವನ್ನು ಕುರಿತು ಪ್ರವಚನ ಮಾಡುತ್ತಿದ್ದರು.
ಹೀಗೆ ಬಾಲ್ಯದಲ್ಲೇ ಈ ಮಹಾಕಾವ್ಯದ ಹಿರಿಮೆ ಮತ್ತು ವಿಷಯವನ್ನು ಪರಿಚಯ
ತುಳಜಾಜಿಯು ರಾಮಬ್ರಹ್ಮರಿಗೆ ಪಶುಪತಿ ಕೋವಿಲ್
ಎಂಬಲ್ಲಿ ಸ್ವಲ್ಪ ಜಮೀನನ್ನೂ, ತಿರುವೈ ಯಾರಿನಲ್ಲಿ ಒಂದು ಮನೆಯನ್ನೂ ಕೊಟ್ಟನು.
ರಾಮಬ್ರಹ್ಮರು ಕಾಲವಾದ ಮೇಲೆ ತಿರುವೈಯ್ಯಾರಿನ ತಿರುಮಂಜಿನ ಬೀದಿಯಲ್ಲಿ
ರುವ ಈ ಮನೆಯನ್ನು ಭಾಗ ಮಾಡಲಾಯಿತು. ಉತ್ತರದ ಭಾಗವು ತ್ಯಾಗರಾಜರಿಗೆ
ಕೊಡುತ್ತಿದ್ದ ಹಿಂದೆ, ಕ್ರೌರ್ಯಗಳನ್ನು ನೋಡಿದ್ದ ಅಲ್ಲಿಯ ತಹಶೀಲ್ದಾರನ ಮಧ್ಯಸ್ಥಿಕೆ
ಯಿಂದ ಮನೆಯು ವಿಭಾಗವಾಗಿ ಇಬ್ಬರು ಸಹೋದರರಿಗೂ ಒಳ್ಳೆಯದಾಯಿತು.
ತ್ಯಾಗರಾಜರ ಪಾಲಿಗೆ ಏಕ ಪೀಠ ವಿಗ್ರಹವು ಬಂದಿತು. ತನ್ನ ಹಿರಿಯ ಸಹೋದರ
ನಿಂದ ತಾವು ಪಟ್ಟ ಕಷ್ಟವನ್ನು ಅನ್ಯಾಯವು ಸೇಯ ಕುರ' ಮತ್ತು ಆದಯ ಶ್ರೀ
ರಘುವ' ಎಂಬ ಕೃತಿಗಳಲ್ಲಿ ಸೂಚಿಸಿದ್ದಾರೆ. ವಿಭಾಗವಾದ ನಂತರ ಜಿಶನ್
ತಾನು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪಪಟ್ಟರು.
ವಾಲಾಜ ಪೇಟೆ ವೆಂಕಟರಮಣ ಭಾಗವತರು ಕೊಟ್ಟ ಮತ್ತು 'ನನುಪಾಲಿಂಪ
ಎಂಬ ಕೃತಿಗೆ ಕಾರಣವಾದ ಕೋದಂಡರಾಮಸ್ವಾಮಿಯ ಚಿತ್ರವು ಇಲ್ಲಿದೆ.
ತ್ಯಾಗರಾಜರ ಮನೆಯಲ್ಲಿ ಅವರ ಪುತ್ರಿ ಮತ್ತು ಮೊಮ್ಮಗ ಅನೇಕ ವರ್ಷಗಳ
ಕಾಲ ವಾಸಿಸುತ್ತಿದ್ದರು. ನಂತರ ಈ ಮನೆಯನ್ನು ಮಾರಿಬಿಟ್ಟರು. ತ್ಯಾಗಬ್ರಹ್ಮ