2023-07-05 09:57:53 by jayusudindra
This page has been fully proofread once and needs a second look.
ಶ್ರೀರಾಮಾನುಜಸಿದ್ದಾಂತ ರಹಸ್ಯಗಳ ಉಪದೇಶವನ್ನು ಪಡೆದರು. ಆದ್ದರಿಂದ ಇವರ
ವಂಶಸ್ಥರು ಶ್ರೀವೈಷ್ಣವ ಸಂಪ್ರದಾಯದವರಾಗಿದ್ದಾರೆ. ಅಣ್ಣಮಾಚಾರರು
ಶ್ರೀ ವೈಷ್ಣವ ಸಂಪ್ರದಾಯದ ನಾರಾಯಿರ ದಿವ್ಯ ಪ್ರಬಂಧಗಳಲ್ಲಿ ಅದ್ವಿತೀಯ
ಪಾಂಡಿತ್ಯವನ್ನು ಪಡೆದಿದ್ದರು. ಇವರನ್ನು ಅಣ್ಣ ಮಾಲ್ಯ, ಅಣ್ಣಮಯ್ಯ,
ಅಣ್ಣಮಯ್ಯಾಂಗಾರ್ ಎಂದು ಕರೆಯುವುದುಂಟು.
ಇವರಿಗೆ ಚಿಕ್ಕಂದಿನಿಂದಲೂ
ಸಾಹಿತ್ಯ ಮತ್ತು ಸಂಗೀತದಲ್ಲಿ ಅಪಾರ ಅಭಿರುಚಿಯಿತ್ತು.
ತಿರುಪತಿಯ
೪EB
ಗಳನ್ನು ರಚಿಸಿ ಹಾಡಿ ನಲಿದರು. ಇವರಿಗೆ ಪದಕವಿತಾ ಮಾರ್ಗದರ್ಶಿ, ಸಂಕೀರ್ತನಾ
ಚಾರ, ದ್ರಾವಿಡಾಗಮ ಸಾರ್ವಭೌಮ ಎಂಬ ಬಿರುದುಗಳಿದ್ದು ಎಂದು ತಿಳಿದು
ಬರುತ್ತದೆ. ಟುಂಗಳೂರಿನ ರಾಜನ ಗೌರವಕ್ಕೆ ಪಾತ್ರರಾಗಿದ್ದರು.
ಅಣ್ಣಮಾಚಾರರು ವೆಂಕಟೇಶ್ವರನನ್ನು ಭಕ್ತಿಯಿಂದ ಸ್ತುತಿಸಿ, ಅವನ
ಶೃಂಗಾರ ವಿಭೂತಿಯನ್ನು ಕೊಂಡಾಡುವುದರಲ್ಲಿ ತನ್ನ ಜೀವಮಾನವನ್ನು ಕಳೆದರು.
ಇವರ ರಚನೆಗಳ ಸಂಕಲನಗಳು ನಾಲ್ಕು ಇವೆ.
ಅಧ್ಯಾತ್ಮ ಸಂಕೀರ್ತನಲು
೪.
ಶೃಂಗಾರ ಸಂಕೀರ್ತನನು ೩. ಶೃಂಗಾರ ಮಂಜರಿ
ಮಹಾತ್ಮ, ಇವರ ಕೀರ್ತನಗಳನ್ನು ತಾಮ್ರ ಪತ್ರಗಳಲ್ಲಿ ಬರೆಸಿ ತಿರುಪತಿ ದೇವಾಲಯ
ದಲ್ಲೂ ಮತ್ತು ಅಹೋಬಲದ ನೃಸಿಂಹ ದೇವಾಲಯದಲ್ಲಿ ಇವರ ಮಗನು
ಇಡಿಸಿದನು. ಇವುಗಳಲ್ಲಿ ಕೃತಿಗಳ ರಾಗಗಳನ್ನು ಮಾತ್ರ ಸೂಚಿಸಲಾಗಿದೆ.
ತಾಳವನ್ನು ಗುರುತು ಮಾಡಿಲ್ಲ. ಈ ತಾಮ್ರ ಪತ್ರಗಳು ತಿರುಪತಿ ದೇವಾಲಯದಲ್ಲಿ
ಸಿಕ್ಕಿವೆ. ಇವುಗಳಲ್ಲಿ ಅಣ್ಣಮಾಚಾರರ ಕೀರ್ತನೆಗಳು ೧೨ ೦೦೦ಕ್ಕೂ ಮೇಲ್ಪಟ್ಟು
ಇವೆ. ಇವರ ಮೊಮ್ಮಗ ಪ್ರಸಿದ್ಧ ಕವಿ ಚಿನ್ನ ತಿರುವೆಂಕಟನಾಥನು ಹೇಳಿರುವಂತೆ
ಇವರ ಕೃತಿಗಳು ಒಟ್ಟು ೩೨ ೦೦೦
ಎಂದು ತಿಳಿದು ಬರುತ್ತದೆ. ಅಧ್ಯಾತ್ಮ
ಸಂಕೀರ್ತನಮು' ಎಂಬುದರ ವಿಷಯ ಭಕ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು
ವೆಂಕಟೇಶ್ವರಸ್ವಾಮಿಯನ್ನು
ಎಂಬ ದರಲ್ಲಿ ಅಣ್ಣಮಯ್ಯನವರು ನಾಯಿಕಾ ಮತ್ತು ವೆಂಕಟೇಶ್ವರನು ನಾಯಕ.
ಇದು ನಾಯಕ-ನಾಯಕೀ ಭಾವದಿಂದ ತುಂಬಿದೆ. ಮೂರನೆಯ ಕೃತಿಯ
ವಿಷಯವು ವೆಂಕಟೇಶ್ವರನಲ್ಲಿ ಒಬ್ಬ ತರುಣಿಯ ನಿಷ್ಕಲ್ಮಷವಾದ ಪ್ರೇಮ ಮತ್ತು
ಅವಳ ಸಖಿಯರ ಮಧ್ಯಸ್ಥಿಕೆಯಿಂದ ಆ ಪ್ರೇಮವು ಸಫಲವಾಗುತ್ತದೆ.
ದೊರೆತಿರುವ ಕೀರ್ತನೆಗಳಲ್ಲಿ ಸುಮಾರು ೧೦೮ಕ್ಕೆ ಮೈಸೂರಿನ
ಕಾಲೇಜಿನ ತೆಲುಗು ಪ್ರಾಧ್ಯಾಪಕರೂ, ಸುಪ್ರಸಿದ್ಧ ಸಾಹಿತಿ ಹಾಗೂ ಸಂಗೀತ ವಿದ್ವಾಂಸ
ರಾಗಿದ್ದ 'ಗಾನಕಲಾ ಸಿಂಧು' ರಾಷ್ಟ್ರಪಳ್ಳಿ ಅನಂತ ಕೃಷ್ಣಶರ್ಮರಿಂದ ತಿರುಪತಿ
ದೇವಾಲಯವು ಸ್ವರಸಂಯೋಜನೆ ಮಾಡಿಸಿ ಪ್ರಕಟಿಸಿದೆ. ಅಣ್ಣಮಾಚಾರ್ಯರ