This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಹಾಡುವಾಗ ಗೀತೆ ಅಧವಾ ಕೀರ್ತನೆಯ ಕಾಲಪ್ರಮಾಣವನ್ನು ಕೈಯಿಂದ

ಲಾಗಲೀ, ತಾಳಯಂತ್ರಗಳಿಂದಲಾಗಲಿ ಹೊಡೆದು ತೋರಿಸುವುದಕ್ಕೆ ತಾಳವೆಂದು

ಹೆಸರು. ಶ್ರುತಿರ್ಮಾತಾಲಯಃಪಿತಾ ಎಂಬಂತೆ ಲಯವು ಸಂಗೀತಕ್ಕೆ ಪಿತೃ ಸಮಾನ

ವಾದುದು. ತಾಳವು ಎರಡು ವಿಧ (೧) ಮಾರ್ಗತಾಳ (೨) ದೇಶೀತಾಳ,

ಮಾರ್ಗತಾಳಗಳು ಈಶ್ವರ ಪ್ರಣೀತವಾದುವೆಂದು ಹೇಳಿದೆ. ಇವುಗಳಲ್ಲಿ ಶುದ್ಧ,

ಸಾಲಗ ಮತ್ತು ಸಂಕೀರ್ಣ ಎಂಬ ಭೇದಗಳಿವೆ. ಮಾರ್ಗತಾಳಗಳಾವುವೆಂದರೆ

ಪರಮೇಶ್ವರನು ತಾಂಡವನೃತ್ಯ ಮಾಡಿದ ಕಾಲದಲ್ಲಿ ಅವನ ಪಂಚಮುಖಗಳಿಂದ

ಐದು ತಾಳಗಳು ಉದ್ಭವವಾದುವೆಂದು ಸಂಗೀತ ರತ್ನಾಕರ'ದಲ್ಲಿ ಉಕ್ತವಾಗಿದೆ.

ಚಚ್ಚತುಟ, ಚಾಚುಟ, ಷಟ್ಟತಾ ಪುತ್ರಿಕ, ಸಂವದ್ವೇಷ್ಟಕ ಮತ್ತು ಉದ್ಭಟ

ಆ ತಾಳಗಳು. ಇತರ ತಾಳಗಳಿಗೆ ದೇಶೀತಾಳಗಳೆಂದು ಹೆಸರು.
 

ಎಂಬುವೇ
 
ಇವುಗಳಲ್ಲಿ ಅತಿ ಪ್ರಾಚೀನವಾದುದು ಅಷ್ಟೋತ್ತರ ಶತಾದಿತಾಳಗಳು. ಕರ್ಣಾಟಕ

ಸಂಗೀತದಲ್ಲಿ ಪ್ರಧಾನವಾದ ತಾಳಗಳು ಸೂಳಾದಿಸಪ್ತತಾಳಗಳಾದ ಧ್ರುವ, ಮರ,

ರೂಪಕ, ಝಂಪ, ತ್ರಿಪುಟ, ಆಟ ಮತ್ತು ಏಕತಾಳ. ಇವುಗಳ ಜಾತಿ ಭೇದಗಳಿಂದ

೩೫ ತಾಳಗಳೂ ಮತ್ತು ಪಂಚಗತಿ ಭೇದಗಳಿಂದ ೧೭೫ ತಾಳಗಳುಂಟಾಗಿವೆ.
 
೪೧
 

 
ತಾಳ ದಶಪಾಪ್ರಾಣಗಳು - ತಾಳಗಳ
 

ತಾಳಗಳ
ಮೂಲಗತಿಯನ್ನು ವಿಭಜಿಸಿದಾಗ

ತಾಳಕ್ಕೆ ಹತ್ತು ವಿಧವಾದ ಅವಯವಗಳು ಕಂಡುಬರುತ್ತವೆ. ಇವಕ್ಕೆ ತಾಳದಶ

ಪ್ರಾಣಗಳೆಂದು ಹೆಸರು. ಇವು ಯಾವುವೆಂದರೆ
 

ಕಾಲೋಮಾರ್ಗ ಕ್ರಿಯಾಂಗಾನಿ ಗ್ರಹಜಾತಿಃ ಕಳಾಲಯಃ ।
 

ಯತಿಃಪ್ರಸ್ತಾರಕಂ ಚೇತಿ ತಾಳ ತಾಳಪ್ರಾಣ ದಶಃ ಸ್ಮೃತಃ ।
 

ಕಾಲ, ಮಾರ್ಗ, ಕ್ರಿಯಾ, ಅಂಗ, ಗ್ರಹ, ಜಾತಿ, ಕಳಾ, ಲಯ, ಯತಿ ಮತ್ತು

ಪ್ರಸ್ತಾರ ಎಂಬುವು ತಾಳ ದಶಪ್ರಾಣಗಳು. ಇವುಗಳಲ್ಲಿ ಮೊದಲ ಐದು ಭಾಗಗಳಿಗೆ

ಮಹಾಪ್ರಾಣಗಳೆಂದೂ, ಉಳಿದವುಗಳನ್ನು ಉಪಪ್ರಾಣಗಳೆಂದೂ ಭಾವಿಸಲಾಗಿದೆ.
 
ತಾ

 
ತಾಳ್ಳ
ಪಾಕಂ ಅಣ್ಣಮಾಚಾರ್ಯ (೧೪೨೪-೧೫೦೩)-
ಅಣ್ಣಮಾ
ಚಾರ್ಯರು ಪ್ರಸಿದ್ಧ ತೆಲುಗು ವಾಗ್ಗೇಯಕಾರರು. ಭಜನ ಪದ್ಧತಿಯನ್ನು

ಬೆಳೆಸಿದವರಲ್ಲಿ ಪ್ರಮುಖರು. ಇವರ ಪುತ್ರ ಪದ್ಧತಿರುಮಲೈ ಅಯ್ಯಂಗಾರ್ ಮತ್ತು

ಪೌತ್ರ ಚಿನ್ನ ತಿರುಮಲೈ ಅಯ್ಯಂಗಾರ್ ಈ ಮೂವರಿಗೂ ತಾಳ್ಳಪಾಕಂ ವಾಗ್ಗೇಯ

ಅಣ್ಣಮಾಚಾರ್ಯರು ಆಂಧ್ರದ ಕಡಪ ಜಿಲ್ಲೆಯ ತಾಳ್ಳಪಾಕಂ

ಗ್ರಾಮದಲ್ಲಿ ತೆಲುಗು ನಂದವರೀಕ ಬ್ರಾಹ್ಮಣ ದಂಪತಿಗಳಾದ ನಾರಾಯಣಸೂರಿ

ಮತ್ತು ಲಕ್ಷಮ್ಮ ಎಂಬುವರ ಪುತ್ರನಾಗಿ

ಪುತ್ರನಾಗಿ ಜನ್ಮವೆತ್ತಿದರು. ಜೀವನದ

ತಾರುಣ್ಯದಲ್ಲೇ ಸ್ವಗ್ರಾಮವನ್ನು ಬಿಟ್ಟು ತಿರುಪತಿಗೆ ಹೋಗಿ ನೆಲೆಸಿದರು. ಅಲ್ಲಿ

ವಿಷ್ಣು ಸ್ವಾಮಿ ಎಂಬ ಬ್ರಾಹ್ಮಣನಿಂದ ವೈಷ್ಣವ ದೀಕ್ಷೆಯನ್ನೂ, ತರುವಾಯ
 
ಕಾರರೆಂದು ಹೆಸರು