2023-06-25 23:30:33 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ತಾಮ್ರರಂಜನಿ-ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧನಿಯ
ಒಂದು ಜನ್ಯರಾಗ.
ಸ ರಿ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ಮ ಸ
PHO
ಬಗೆಯ
ತಾಮ್ರಚೂಡ-ಇದು ಭರತನಾಟ್ಯದ ಅಸಂಯುತ ಹಸ್ತಗಳಲ್ಲಿ ಒಂದು
ಹಸ್ತಮುದ್ರೆ, ಮುಕುಳಹಸ್ತದಲ್ಲಿನ ತರ್ಜನೀಬೆರಳನ್ನು ಬಗ್ಗಿಸಿ
ಹಿಡಿಯುವುದೇ ತಾಮ್ರ ಚೂಡ ಹಸ್ತಲಕ್ಷಣ. ಕೋಳಿ, ಬಕ, ಕಾಗೆ, ಒಂಟೆ, ಕರು
ಮುಂತಾದ ಪ್ರಾಣಿಗಳನ್ನೂ ಲೇಖನವನ್ನೂ ಸೂಚಿಸಲು ಈ ಹಸ್ತವಿನಿಯೋಗ
ವಾಗುವುದು
ತಾರವ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು
ಜನ್ಯರಾಗ,
ಸ ಗ ಮ ದ ನಿ ಸ
ಸ ನಿ ದ ಮ ಗ ಸ
ತಾರಾಕರ್ಮಗಳು ತಾರಕ ಅಥವಾ
ತಾರಾ ಕರ್ಮ.
ಕಣ್ಣಾಲಿಗಳ ಚಲನೆಯೇ
ಇದರಲ್ಲಿ ಒಂಬತ್ತು ವಿಧ. ಅವು ಭ್ರಮಣ, ವಲನ, ಪಾತನ,
ಚಲನ, ಸಂಪ್ರವೇಶನ, ವಿವರ್ತನ, ಸಮುದ್ರತ, ನಿಷ್ಕಾಮ ಮತ್ತು ಪ್ರಾಕೃತ,
ತಾರಂಜಿತ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
ಜನ್ಯರಾಗ,
ಸ ರಿ ಮ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ತಾಳ-ಶಕಾರ ಶಂಕರಪ್ಪೋ
ಲಕಾರಶಕ್ತಿರುಚ್ಯತೇ ।
ಶಿವಶಕ್ತಿ ಸಮಾಯೋಗಾತ್ತಾಳ ಇತ್ಯಭಿಧೀಯತೇ ।
ತಕಾರಕ್ಕೆ ಶಂಕರನು ಅಧಿದೇವತೆ, ಲಕಾರಕ್ಕೆ ಪಾರ್ವತಿಯು ಅಧಿದೇವತೆ. ಇವರಿಬ್ಬರ
ಸಂಯೋಗದಿಂದ ತಾಳ ಎಂಬ ಪದವುಂಟಾಗಿದೆ. ಪಾರ್ವತಿಯ ಎಡಹಸ್ತ,
ಶಂಕರನ ಬಲಹಸ್ತ ಇವುಗಳ ಸಂಯೋಗ, ವಿಯೋಗದಿಂದ ತಾಳವೆಂಬ ಶಬ್ದವು
ಹುಟ್ಟಿತೆಂದು ಪೂರ್ವಾಚಾರ್ಯರು ಹೇಳಿದ್ದಾರೆ. ಗೌರಿ ಮತ್ತು ಹರನ ನೃತ್ಯದಿಂದ
ತಾಳ ಉಂಟಾಯಿತು. ಹರನ ನೃತ್ಯವು ತಾಂಡವ ಮತ್ತು ಗೌರಿಯ ನೃತ್ಯವು ಲಾಸ್ಯ
ತಾಂಡವ ಎಂಬ ನಾಮಪದದ ಪ್ರಥಮಾಕ್ಷರ ತಾ ಮತ್ತು ಲಾಸ್ಯದ ಪ್ರಥಮಾಕ್ಷರ
ಲ ಎಂಬುವು ಸೇರಿ ತಾಳ ಎಂಬ ಪದವಾಗಿದೆ. ತಾಳ ಎಂಬ ಪದ ತಲಪ್ರತಿಷ್ಠಾಯಾಂ
ಎಂಬ ಧಾತುವಿನಿಂದ ಘ " ಎಂಬ ಪ್ರತ್ಯಯ ಸೇರಿ ತಾಳ ಎಂಬ ಶಬ್ದ ನಿಷ್ಪತ್ತಿ
ಯಾಗುತ್ತದೆ.