This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸೃಷ್ಟಿಸಿದ ದರ್ಬಾರಿಕಾನಡ, ಮಿಯಾ ಮಲ್ಲಾರ್, ತಾನ್‌ಸೇನ್‌ತೋಡಿ

ಮಿಯಾಕಾ ಸಾರಂಗ್ ಎಂಬ ರಾಗಗಳು ಇಂದಿಗೂ ಜನಪ್ರಿಯವಾಗಿವೆ.

ಸಂಗೀತ್‌ಸಾರ್ ಮತ್ತು ರಾಗಮಾಲಾ ఎంబ ಗ್ರಂಥಗಳನ್ನು ರಚಿಸಿದನೆಂದು

ಹೇಳುತ್ತಾರೆ. ಇವನ ವಂಶದ ಬಿಲಾಸಖಾನ್ ನಿರ್ಮಿಸಿದ ಬಿಲಾಸಖಾನೀ ತೋಡಿ

ಎಂಬ ರಾಗ ಇಂದಿಗೂ ಬಹುಜನರಂಜಕವಾಗಿದೆ. ಇವನ ವಂಶದವನಾದ
 
ಸದಾರಂಗ ಎಂಬುವನು ಖಯಾಲ ಗಾಯನಕ್ಕೆ ಮೂರ್ತ ಸ್ವರೂಪ ಕೊಟ್ಟು ಅದನ್ನು

ಜನಪ್ರಿಯವಾಗಿಸಿದನು.
 
ಜನ್ಯರಾಗ,
 
೪೪೯
 

ತಾನಸೇನನು ೧೬೪೬ರಲ್ಲಿ ಆಗ್ರಾದಲ್ಲಿ ಕಾಲವಾದನು. ಅವನ ದೇಹವನ್ನು

ಗ್ವಾಲಿಯರಿಗೆ ತಂದು ಫಕೀರ್ ಮಹಮದ್‌ಗೌಸ್ ಸಮಾಧಿಯ ಸಮೀಪದಲ್ಲಿ

ಅಂತ್ಯಕ್ರಿಯೆ ಮಾಡಲಾಯಿತು.

ಅವನ ಸಮಾಧಿಯ ಮೇಲೆ ಭವ್ಯವಾದ ಸ್ಮಾರಕ
 

ಮಂದಿರವನ್ನು ಕಟ್ಟಿದ್ದಾರೆ. ಇದು ಮೊಗಲರ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ

ಮಾದರಿಯಾಗಿದೆ ಇದರ ಬಳಿಯಿರುವ ಒಂದು ಪುರಾತನವಾದ ಹುಣಿಸೆಮರದ

ಚಿಗುರನ್ನು ತಿಂದರೆ ಸಂಗೀತಗಾರರ ಶಾರೀರವು ಉತ್ತಮವಾಗಿ ಅವರು ಕಲಾ

ಪರಿಣತಿಯನ್ನು ಪಡೆಯುವರೆಂಬ ನಂಬಿಕೆಯಿದೆ ಹಿಂದೂಸ್ತಾನಿ ಸಂಗೀತಗಾರರಿಗೆ

ತಾನ್‌ಸೇನನ ಸಮಾಧಿಯು ಒಂದು ಪವಿತ್ರ ಯಾತ್ರಾಸ್ಥಳವಾಗಿದೆ.

ಈಗ ಪ್ರತಿ

ವರ್ಷವೂ ಇಲ್ಲಿ ತಾನ್‌ಸೇನ್ ಉರುಸ್ ಎಂಬ ಜಾತ್ರೆ ನಡೆದು ದೇಶದ ನಾನಾ

ಕಡೆಗಳಿಂದ ಗಾಯಕರು ಮತ್ತು ವಾದ್ಯವಾದಕರು ಯಾವ ಭೇದಭಾವವಿಲ್ಲದೆ

ಭಾಗವಹಿಸಿ, ಹಾಡಿ, ವಾದ್ಯಗಳನ್ನು ನುಡಿಸಿ ತನ್ಮೂಲಕ ಸಂಗೀತ ಸಾಮ್ರಾಟನಿಗೆ

ತಮ್ಮ ಭಕ್ತಿಯ ಅಂಜಲಿಯನ್ನು ಸಮರ್ಪಿಸುತ್ತಾರೆ. ತಾನ್‌ಸೇನನನ್ನು ಕುರಿತು

ಅವನ ಸಮಕಾಲೀನರಾಗಿದ್ದ ಸೂರ್‌ದಾಸ್ (ಅಧವ ಕವಿಗಂಗ) ಈ ರೀತಿ ಉದ್ಧರಿಸಿ

ದ್ದಾರೆ. "ಸೃಷ್ಟಿಕರ್ತನು ಶೇಷನಿಗೆ ಕಿವಿಗಳನ್ನು ಕೊಟ್ಟಿಲ್ಲ. ಅದಕ್ಕೆ ನಾವು

ಕೃತಜ್ಞರಾಗಿರಬೇಕು.

ಏಕೆಂದರೆ ತಾನ್‌ಸೇನನ ತಾನ್‌ಗಳನ್ನು ಕೇಳಿ ಶೇಷನು

ಆನಂದದಿಂದ ತಲೆ ತೂಗಿದ್ದರೆ ಇಡೀ ಭೂಲೋಕ ಮತ್ತು ಮೇರುಪರ್ವತ ಉರುಳಿ

ಹೋಗುತ್ತಿದ್ದುವು."
 

 
ತಾಮಸುರಂಜಿನಿ-
ಈ ರಾಗವು ೧೨ನೆಯ ಮೇಳಕರ್ತ ರೂಪವತಿಯ

ಒಂದು ಜನ್ಯರಾಗ
 

ಸ ರಿ ಗ ದ ನಿ ಸ
 

ಸ ನಿ ದ ಗ ರಿ ಸ
 

 
ತಾಮಲಕಿ-
ಈ ರಾಗವು ೨೯ನೆಯ ಮೇಳಕರ್ತ ಶಂಕರಾಭರಣದ ಒಂದು
 
ಜನ್ಯರಾಗ
ಸ ಮ ಪ ದ ನಿ ಸ

ಸ ನಿ ದ ಪ ಮ ಸ
 
ಮತ್ತು
ಇವಲ್ಲದೆ