This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಇರುವ
 
ತಾನಸೇನನು ಯಾವ ವರ್ಷ ಜನಿಸಿದನು ಎಂಬ ವಿಚಾರದಲ್ಲಿ ಭಿನ್ನಾಭಿ
ಪ್ರಾಯವಿದೆ.
ಈಗಿನ ಮಧ್ಯ ಪ್ರದೇಶದ ಗ್ವಾಲಿಯರ್ ನಗರದ ಬಳಿ
ಬೇಹಟ್ ಎಂಬ ಗ್ರಾಮದಲ್ಲಿ ಇವನ ಜನನವಾಯಿತು. ಇವನ ನಿಜವಾದ ಹೆಸರು
ತನ್ನಾಮಿಶ್ರ, ತ್ರಿಲೋಚನ, ತನುಸುಖ ಮತ್ತು ರಾಮತನು ಮುಂತಾದುವೆಂದು
ಹೇಳುತ್ತಾರೆ. ತಾನ್‌ಸೇನ್ ಎಂಬುದು ಅವನ ತಾನಗಳ ವೈಭವವನ್ನು ಮೆಚ್ಚಿ
ರಾಜರು ನೀಡಿದ ಬಿರುದು. ಇವನ ತಂದೆ ಗೌಡಬ್ರಾಹ್ಮಣ ವಂಶದ ಮಕರಂದ
ಪಾಂಡೇ
ವಿದ್ವಾಂಸನಾಗಿದ್ದನು. ತಾನ್‌ಸೇನನು ಗ್ವಾಲಿಯರ್‌ನಲ್ಲಿ
 
ಸಂಗೀತ
 
ತೋಮರನ
 
ತನ್ನ ಬಾಲ್ಯವನ್ನು ಕಳೆದನು. ಆ ನಗರವು ರಾಜಾಮಾನಸಿಂಗ
ಈ ರಾಜನು ಸಂಗೀತಗಾರನೂ,
 
ರಾಜಧಾನಿಯಾಗಿತ್ತು.
 
ವಾಗ್ಗೇಯಕಾರನೂ
 
ಆಗಿದ್ದು ಅನೇಕ ಸಂಗೀತಗಾರರಿಗೆ ತನ್ನ ಆಸ್ಥಾನದಲ್ಲಿ ಆಶ್ರಯವನ್ನು ಕೊಟ್ಟಿದ್ದನು.
ನಾಯಕ ಬಕ್ಕೂ, ನಾಯಕ ಬೈಜೂ, ನಾಯಕ ಕರ್ಣ ಮತ್ತು ನಾಯಕ ಮಹಮದ್
ಎಂಬುವರು ಇವನ ಆಸ್ಥಾನದ ಪ್ರಸಿದ್ಧ ವಿದ್ವಾಂಸರಾಗಿದ್ದರು. ಬಾಲಕ ತನ್ನಾ
ಮಿಶ್ರನು ನಾಯಕ ಬಕ್ಕೂ ಅಥವಾ ಮಹಮದ್ ಇವರಲ್ಲಿ ಸಂಗೀತ ಕಲಿತಿರಬಹುದು.
ರಾಜಾಮಾನಸಿಂಗನ ಮರಣಾನಂತರ ಗ್ವಾಲಿಯರ್‌ನ
ದೊರೆ ವಿಕ್ರ
ಮಾದಿತ್ಯನ ಮಾಂಡಲಿಕನಾಗಬೇಕಾಗಿ, ಗ್ಯಾಲಿಯನ ಹಿಂದಿನ ವೈಭವವು
ಹಾಳಾಗಿ ಸಂಗೀತಗಾರರು ಬೇರೆ ಬೇರೆ ರಾಜ್ಯಗಳಿಗೆ ತೆರಳಿದರು.
 
೧೫೭೬
 
ಸಂಗೀತ ಶಿಕ್ಷಣವನ್ನು ಮುಂದುವರಿಸಲು ತನ್ನಾ ಮಿಶ್ರನು ಆಗ್ರಾಕ್ಕೆ ಹೋದನು.
ಅಲ್ಲಿದ್ದ ಸೂಫೀ ಫಕೀರ ಮಹಮದ್ ಗೌಸನ ಪಾದಕ್ಕೆರಗಿದನು. ಆತನು ಇವನ
ಇಚ್ಛೆಯನ್ನು ತಿಳಿದು ನಿನ್ನ ಗುರು ಬೃಂದಾವನದಲ್ಲಿದ್ದಾನೆ ಮಧುರಾಕ್ಕೆ ಹೊರಡು
ಎಂದು ಹೇಳಿ ಆಶೀರ್ವದಿಸಿದನು. ಬೃಂದಾವನದ ಸ್ವಾಮಿ ಹರಿದಾಸರು ಭಗವದ್ಭಕ್ತರೂ,
ಸಂಗೀತದ ಮಹಾವಿದ್ವಾಂಸರೂ ಆಗಿದ್ದರು. ಮಥುರಾಕ್ಕೆ ಹೋಗಿ
ಮೆಚ್ಚಿಗೆಯನ್ನು ಪಡೆದು ಶಿಷ್ಯನಾಗಿ, ನಿಷ್ಠೆ ಯಿಂದ ಭಕ್ತಿಯಿಂದ ಗುರುಸೇವೆ ಮಾಡಿ
ಸಂಗೀತ ಶಿಕ್ಷಣ ಪಡೆದನು. ಹರಿದಾಸ ಸ್ವಾಮಿಯು ಧ್ರುಪದ್ ಶೈಲಿಯ ಗಾಯನ
ಸಂಪ್ರದಾಯದವರು. ಅವರಿಂದ ಧ್ರುಪದ ಸಂಗೀತವನ್ನೂ ಕಲಿತುದಲ್ಲದೆ ಗೋಕುಲ
 
ಅವರ
 
စစ
 
ಎಂಬ ಆಶ್ರಮ ಸ್ಥಾನದಲ್ಲಿದ್ದ ಗೋವಿಂದ ಸ್ವಾಮಿಗಳೆಂಬ ಸಂಗೀತ ವಿದ್ವಾಂಸರಲ್ಲಿ
ಕೀರ್ತನ ಪದ್ಧತಿಯ ಗಾಯನವನ್ನು ಕಲಿತನು ತರುವಾಯ ಸ್ವಾಮಿಗಳ ಆಶೀರ್ವಾದ
ವನ್ನು ಪಡೆದು ಷೇರ್ ಷಾ ಸೂರಿಯ ಮಗನಾದ ದೌಲತ್‌ಖಾನನ ಆಶ್ರಯದಲ್ಲಿ
ಒಂದೆರಡು ವರ್ಷಗಳ ಕಾಲವಿದ್ದು ತರುವಾಯ ಬಾಂಧವಗಡದ ದೊರೆ ರಾಮಚಂದ್ರನ
ಆಸ್ಥಾನ ವಿದ್ವಾಂಸನಾದನು. ಅಲ್ಲಿ ಇವನ ತಾನಗಳ ಅನಂತ ವೈವಿಧ್ಯಕ್ಕೆ ಬೆರಗಾಗಿ
(ತಾನಸೇನ' ಎಂಬ ಬಿರುದನ್ನಿತ್ತನು. ಈ ಹೆಸರೇ ಎಲ್ಲೆಡೆಗೂ ಹಬ್ಬಿತು ಮತ್ತು
ಇವನ ಕೀರ್ತಿಯು ದೆಹಲಿಗೂ ಮುಟ್ಟಿತು.
 
ಮೊಗಲ್ ಚತ್ರವರ್ತಿ ಅಕ್ಷರನಿಗೆ ತನ್ನ ಆಸ್ಥಾನದ ನವರತ್ನ ಗಳಲ್ಲಿ ಸಂಗೀತದ