This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನಕಾರವು ವಿಷ್ಣುವಾಚಕವು. ಹೀಗೆ ತಾನ ಎಂಬಲ್ಲಿನ ಅಕ್ಷರಗಳ ಅಭಿಮಾನ

ದೇವತೆಗಳಾದ ತ್ರಿಮೂರ್ತಿಗಳು ಅಂಕಾರದ ಬಿಂದುವಿನಲ್ಲಿ ಏಕೀಭವಿಸುವುದರಿಂದ

ತಾನಂ ಎಂಬ ಶಬ್ದ ವು ವರಬ್ರಹ್ಮವಾಚ್ಯ ಬೀಜ ಮಂತ್ರವೆಂದೂ, ಆ ಮಂತ್ರವನ್ನು

ಜಪಿಸಿ ದೈವ ಸಾಕ್ಷಾತ್ಕಾರ ನಡೆಯುವುದು ತಾನಂ ಶಬ್ದ ದ ಉಪಯೋಗವೆಂದು

ಒಂದು ಅಭಿಪ್ರಾಯವಿದೆ. " ರಾಗವನ್ನು ಕೆಲವು ಗೊತ್ತಾದ ಸಂಖ್ಯೆಯ ಸ್ವರ ಸಂಖ್ಯೆ

ಯನ್ನು ಅನುಸರಿಸಿ ಗಣಿತರೀತ್ಯಾ ಅನೇಕ ಸಂಖ್ಯೆಯ ತಾನಗಳಾಗುತ್ತವೆ.

ಸ್ವರಗಳನ್ನು ಸೇರಿಸಿದ ಎಲ್ಲಾ ಪ್ರಸ್ತಾರಗಳ ಸಂಖ್ಯೆ ೭ (೭•೬x೫X೪ x ೩೨

•೧) = ೫೦೪೦, ಆರು ಸ್ವರಗಳಿಗೆ [೬=೭೨೦ ಇತ್ಯಾದಿ.
 
ಏಳು
 
೪೪
 
-
 

ತಾನಗಳು ಮುಖ್ಯವಾಗಿ ಎರಡು ವಿಧ - ಶುದ್ಧತಾನ ಮತ್ತು ಕೂಟತಾನ.

ಐದು ಅಧವಾ ಆರು ಸ್ವರಗಳನ್ನು ಆರೋಹಣ ಕ್ರಮದಲ್ಲಿ ಹಾಡುವುದು ಶುದ್ಧ ತಾನ.

ಸ್ವರಗಳನ್ನು ಬೇರೆ ಬೇರ ಸಂಖ್ಯೆಯಲ್ಲಿ ಹಾಡುವುದು ಕೂಟತಾನ ಇದರಲ್ಲಿ

ಸ್ವರಗಳನ್ನು ಅನುಸರಿಸುವ ರೀತಿಗೆ ನಿವೆಂದೂ, ಅವುಗಳ ಸಂಖ್ಯಾನುಕ್ರಮಕ್ಕೆ

ಉದ್ದಿಷ್ಟವೆಂದೂ ಹೆಸರು.

ರೂಪವೆಂದು ಹೇಳುತ್ತಾರೆ.
 
ಎಂಬ
ತಾನಂ ಎಂಬುದು ಅನಂತ
 

ಪದದ
 

ಒಂದು
 

ತಾನವನ್ನು ತ್ರಿಕಾಲದಲ್ಲಿ ಹಾಡುವುದು ಸಂಪ್ರದಾಯ. ಇದರಲ್ಲಿ ದ್ರುತಕಾಲದ

ಸಂಚಾರಗಳು ಪ್ರಮುಖವಾಗಿದ್ದು ರಾಗಭಾವವನ್ನು ಹೊರಗೆಡಹಲು ಕೆಲವು ವೇಳೆ

ಮಧ್ಯಮ ಮತ್ತು ವಿಳಂಬ ಕಾಲದ ಸಂಚಾರಗಳನ್ನು ಬಳಸುತ್ತಾರೆ. ದ್ರುತಕಾಲದ

ತಾನಕ್ಕೆ ಘನಂ ಎಂದು ಹೆಸರು. ತಾನದಲ್ಲಿ ಬರುವ ಸ್ವರ ಶ್ರೇಣಿಗಳನ್ನು ಎಂಟು

ವಿಧವಾಗಿ ವರ್ಗೀಕರಿಸಿ ಕೆಲವು ಪ್ರಾಣಿಗಳ ನಡಿಗೆಯ ಗತಿಗಳನ್ನು ಹೋಲುವ

ಸ್ವರಸಮೂಹಗಳಿಗೆ ಆ ಪ್ರಾಣಿಗಳ ಹೆಸರುಗಳನ್ನು ಕೊಡಲಾಗಿದೆ. ಇವು ಯಾವುವೆಂದರೆ

ಮಾನವತಾನ, ಗಜತಾನ, ಮರ್ಕಟತಾನ, ಮಯೂರತಾನ, ಕುಕ್ಕುಟತಾನ,

ಮಂಡೂಕತಾನ ಮತ್ತು ಚಕ್ರತಾನ, ಇವಲ್ಲದೆ ಮಿಶ್ರತಾನ, ಮಾಲಿಕಾತಾನ,

ಗಂಭೀರತಾನ ಮತ್ತು ವಿದ್ಯುತ್‌ತಾನಗಳಿವೆ. ಇವು ತಾನದ ಸ್ವರೂಪವನ್ನು

ಸೂಚಿಸುತ್ತವೆ ಕಳೆದ ಶತಮಾನದಲ್ಲಿದ್ದ ಸಾತ್ತನೂರು ಪಂಜು ಅಯ್ಯರ್‌ರವರು

ಈ ಎಲ್ಲ ಬಗೆಯ ತಾನಗಳನ್ನು ಹಾಡುವುದರಲ್ಲಿ ನಿಸ್ಸಿಮರಾಗಿದ್ದರು.
 

 
ತಾನವರ್ಣ-
ರಾಗ ಮಾಧುರ್ಯ, ಭಾವ ಮತ್ತು ಪಾಂಡಿತ್ಯ, ಪ್ರತಿಭೆಗಳನ್ನು

ತೋರಿಸತಕ್ಕ, ತಾನರೂಪದ ಮತ್ತು ತಾನ ಜತಿ ರೂಪದ ಸ್ವರಗಳ ಜೋಡಣೆಯು

ಪ್ರಮುಖ ಅಂಗವಾಗಿರುವ ರಚನೆಗೆ ತಾನವರ್ಣವೆಂದು ಹೆಸರು ಇದನ್ನು ಸಂಗೀತ

ಕಚೇರಿಯ ಪ್ರಾರಂಭದಲ್ಲಿ ಹಾಡುತ್ತಾರೆ. ಸಾಮಾನ್ಯವಾಗಿ ಇದು ಆದಿತಾಳದಲ್ಲಿಯೂ,

ಅಪರೂಪವಾಗಿ ಇತರ ಸುಳಾದಿ ತಾಳಗಳಲ್ಲಿಯೂ ಮಧ್ಯಲಯದಲ್ಲಿ ನಿಬದ್ಧವಾಗಿದ್ದು,

ಪ್ರಭು, ಆಶ್ರಯದಾತ ಅಥವಾ ಇಷ್ಟದೇವತೆಯ ಸ್ತುತಿ ಅಥವಾ ಪ್ರಾರ್ಥನೆಯನ್ನು

ಒಳಗೊಂಡಿರುತ್ತದೆ. ಇದರಲ್ಲಿ ಪಲ್ಲವಿ, ಅನುಪಲ್ಲವಿ ಮತ್ತು ಚರಣ ಎಂಬ