2023-06-27 15:37:38 by jayusudindra
This page has been fully proofread once and needs a second look.
ಇವರ ಹಾಡುಗಾರಿಕೆ
ಇವರ ಹಾಡುಗಾರಿಕೆ ಯಲ್ಲಿ ಪ್ರತಿಯೊಂದು ಅಂಶವೂ ಅಚ್ಚುಕಟ್ಟಾಗಿರುತ್ತಿತ್ತು. ಇವರು ಕಚೇರಿಯಲ್ಲಿ
ಕುಳಿತುಕೊಳ್ಳುತ್ತಿದ್ದ ಶೈಲಿ, ಶಿಸ್ತು, ಹಾಡುತ್ತಿದ್ದ ರೀತಿ, ಹುಮ್ಮಸ್ಸು ಪ್ರಶಂಸನೀಯ
ವಾಗಿದ್ದು ವು
೩೯
ಅರಿಯಕುಡಿಯವರು ವಿವಿಧ ರೀತಿಯ ಸಂಗೀತ ರಚನೆಗಳನ್ನು ತಿಳಿದಿದ್ದರು.
ಇವರು ಸಂಪ್ರದಾಯಬದ್ದರಾದರೂ ಪ್ರಯೋಗ ಕುಶಲತೆಯುಳ್ಳವರು
ಅನೇಕ ಕೃತಿ
ಪೀಳಿಗೆಯವರಿಗೆ ಉಪಕಾರ ಮಾಡಿದ್ದಾರೆ. ಆಂಡಾಳ್ ದೇವಿಯ ತಿರುಪ್ಪಾವೈಯ
ಮೂವತ್ತು ಪದ್ಯಗಳನ್ನು ಸ್ವರಪಡಿಸಿ ಹಾಡಿ ಅವುಗಳ ಸೌಂದರ್ಯವನ್ನು ತೋರಿಸಿ
ಕೊಟ್ಟರು. ಅರುಣಾಚಲ ಕವಿರಾಯರ - ರಾಮನಾಟಕಂ' ಎಂಬ ಗೇಯನಾಟಕದ
ಕೃತಿಗಳನ್ನು ಸ್ವರಪಡಿಸಿ ಪ್ರಚುರಪಡಿಸಿದರು. ತ್ಯಾಗರಾಜರ ಹಲವು ಕೃತಿಗಳನ್ನು
ಹಾಡುವುದನ್ನು ತಮ್ಮದೇ ಆದ ಶೈಲಿ, ರೀತಿಯನ್ನು ಸ್ಥಾಪಿಸಿದರು.
ಅರಿಯಕುಡಿಯವರಿಗೆ ಸಂದ ಬಿರುದುಗಳು ಮತ್ತು ಸನ್ಮಾನಗಳು ಅನೇಕ.
ಇವರು ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದರು. ೧೯೩೯ರಲ್ಲಿ ಮದ್ರಾಸಿನ
ಮ್ಯೂಸಿಕ್ ಅಕಾಡೆಮಿಯ " ಸಂಗೀತಕಲಾನಿಧಿ' ಎಂಬ ಪ್ರಶಸ್ತಿಯನ್ನೂ ೧೯೫೮ರಲ್ಲಿ
ರಾಷ್ಟ್ರಾಧ್ಯಕ್ಷರಿಂದ ಪದ್ಮಭೂಷಣ ಎಂಬ ಪ್ರಶಸ್ತಿಯನ್ನೂ ಪಡೆದರು, ಪಾಲ್ಘಾಟ್
ಕೆ. ವಿ. ನಾರಾಯಣ ಸ್ವಾಮಿ, ಬಿ. ರಾಜಂ ಅಯ್ಯರ್, ಮಧುರೆ ಕೃಷ್ಣನ್ ಇವರ
ಪ್ರಮುಖ ಶಿಷ್ಯರು.
ಅರಿಯ ಕುಡಿ ಪಂಥ
ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ವಿದ್ವಾಂಸ
ರಾಗಿದ್ದ ಅರಿಯ ಕುಡಿ ರಾಮಾನುಜ ಅಯ್ಯಂಗಾರರ (೧೮೯೦-೧೯೬೭) ಗಾಯನ
ಶೈಲಿ. ಇವರು ತಮ್ಮದೇ ಆದ ಕಚೇರಿ ಶೈಲಿಯ ಪ್ರವರ್ತಕರು
ವಾಗಿ, ಗಮಕಯುಕ್ತವಾಗಿ, ವಿದ್ವತ್ತೂರ್ಣವಾಗಿ, ಕಲಾತ್ಮಕವಾಗಿ,
ವೈವಿಧ್ಯಮಯವಾಗಿರುವ ಗಾಯನ ಶೈಲಿಗೆ ಅರಿಯ ಕುಡಿ ಸಂಧವೆನ್ನುವುದು
ಹಾಗೂ
ಅರಿತಾಳ
ಅರಬಟ್ಟನಾವಲರ್ ವಿರಚಿತವಾದ
ತಮಿಳು ಗ್ರಂಧದಲ್ಲಿ ಉಕ್ತವಾಗಿರುವ ಒಂದು ತಾಳ
ಅರುಣಕಾಂತ
ಈ ರಾಗವು ೨೮ನೆಯ ಮೆ ಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ,
ಆ : ಸ ರಿ ಮ ಪ ಮ ದ ನಿ ಸ
ಅ : ಸ ನಿ ದ ಪ ಮ ದ ಮ ಗ ರಿ ಸ.
ಅರುಣಕ್ರಿಯ
ಈ ರಾಗವು ೫೭ನೆಯ ಮೇಳಕರ್ತ ಸಿಂಹೇಂದ್ರ ಮಧ್ಯಮದ
ಒಂದು ಜನ್ಯರಾಗ
ಎಂಬ