This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ತವಿಲ್-ನಾಗಸ್ವರದ ಪ್ರಮುಖ ತಾಳವಾದ್ಯವಾದ ಡೋಲ್ ವಾದ್ಯಕ್ಕೆ
ತಮಿಳಿನಲ್ಲಿ ತವಿಲ್ ಎನ್ನುತ್ತಾರೆ.
 
83.
 
ತಾತಾಚಾರ್ ಟ. ಎಸ್. (೧೯೧೭)-ತಾತಾಚಾರರು ಪಾವಗಡದಲ್ಲಿ
ಪಿಟೀಲು ವಿದ್ವಾಂಸರಾಗಿದ್ದ ಟಿ. ಶ್ರೀನಿವಾಸಾಚಾರರ ಪುತ್ರನಾಗಿ ೧೯೧೭ರಲ್ಲಿ
ಜನಿಸಿದರು. ಇವರ ಚಿಕ್ಕಪ್ಪ ಟಿ. ಶೇಷಾಚಾರರೂ ಪಿಟೀಲುವಾದಕರಾಗಿದ್ದರು.
ತಾತಾಚಾರರು ಪಾವಗಡದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯನ್ನು ಮಾಡಿ
ಬೆಂಗಳೂರಿಗೆ ಬಂದು ಕೋಟೆ ಹೈಸ್ಕೂಲಿನಲ್ಲ, ಅನಂತರ ಕಾಲೇಜಿನಲ್ಲಿ ಇಂಟ‌
ಮಾಡಿಯೇಟ್ ಶಿಕ್ಷಣವನ್ನು ಪಡೆದರು. ಬೆಂಗಳೂರು ಗಾಯನ ಸಮಾಜದಲ್ಲಿ
ನಡೆಯುತ್ತಿದ್ದ ಸಂಗೀತ ಕಚೇರಿಗಳನ್ನು ಕೇಳಿ ಇವರ ಸಂಗೀತದ ಹಂಬಲ
ಬಲವಾಯಿತು. ಮೊದಲು ವೀಣೆ ಕೃಷ್ಣಮಾಚಾರರ ಆರಗಾನ ವಿದ್ಯಾಲಯದಲ್ಲಿ
ಸಂಗೀತ ಶಿಕ್ಷಣ ಪಡೆದು ನಂತರ ೧೯೩೫ರಲ್ಲಿ ಮೈಸೂರಿಗೆ ಹೋಗಿ ರಾಳದಲ್ಲಿ ಅನಂತ
ಕೃಷ್ಣಶರ್ಮರ ಶಿಷ್ಯರಾದರು. ೧೯೩೮ರಲ್ಲಿ ಮದ್ರಾಸಿನ ಬಾನುಲಿ ಕೇಂದ್ರದಿಂದ
ಪಿಟೀಲು ಕಚೇರಿಗಳನ್ನು ಮಾಡಲಾರಂಭಿಸಿ, ಅಲ್ಲಿಯ ವಿದ್ವಾಂಸರಾಗಿ ನೇಮಕ
ಗೊಂಡರು. ಎರಡನೆ ಮಹಾಯುದ್ಧದ ಕಾಲದಲ್ಲಿ ಮದ್ರಾಸನ್ನು ಬಿಟ್ಟು ಮೈಸೂರಿಗೆ
ಬಂದು ಡಾ ಗೋಪಾಲಸ್ವಾಮಿಯವರ ಆಕಾಶವಾಣಿಯಲ್ಲಿ ೧೯೪೨ರಲ್ಲಿ ಕಲಾವಿದ
ರಾದರು ಇಲ್ಲಿ ಅರಿಯಕುಡಿ, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಚಂಬೈ
ಮುಂತಾದ ಹಿರಿಯ ಕಲಾವಿದರೊಡನೆ ಕಲೆಯುವ ಸುಯೋಗದಿಂದ ಸಂಪೂರ್ಣ
ಪ್ರಯೋಜನ ಪಡೆದರು ಆಕಾಶವಾಣಿಯ ಕೇಂದ್ರವು ಬೆಂಗಳೂರಿಗೆ ವರ್ಗಾಯಿಸಲ್ಪಟ್ಟ
ಮೇಲೆ ಬೆಂಗಳೂರಿನಲ್ಲಿ ನೆಲೆಸಿದರು. ಅಲ್ಲಿಯ ಕಲಾವಿದರಾಗಿ ದೀರ್ಘಕಾಲ ಸೇವೆ
ಸಲ್ಲಿಸಿ ವಿಶ್ರಾಂತರಾಗಿದ್ದಾರೆ. ಇವರು ಸರಳರು, ಸಹೃದಯರು. ಉತ್ತಮ
ಭಾವಜ್ಞರಾದ ಹಿರಿಯ ಪಿಟೀಲು ವಿದ್ವಾಂಸರಾಗಿದ್ದಾರೆ.
 
ತಾನ-ತನ್ಯತೇ ವಿಸ್ತಾರತೇ ಇತಿತಾನಃ ತಾನವು ರಾಗಾಲಾಪನೆಯ
ಒಂದು ಮುಖ್ಯಭಾಗ, ರಾಗವರ್ಧಿನಿಯ ನಂತರ ಮಧ್ಯಮ ಕಾಲ ಅಥವಾ ತಾನವು
ಬಹಳ ಕುತೂಹಲಕಾರಿಯಾದ ಭಾಗ, ಯಾವುದು ಕೆಲವು ಸ್ವರಗಳ ಬೇರೆ ಬೇರೆ
ಸಮೂಹಗಳಿಂದ ರಾಗವಿಸ್ತಾರ ಮಾಡಲ್ಪಡುತ್ತದೋ ಅದು ತಾನ ಇದರಲ್ಲಿ ಲಯ
ಮತ್ತು ನಾದಗಳೆರಡರ ಸೌಂದರ್ಯವಿದೆ. ಕರ್ಣಾಟಕ ಸಂಗೀತದಲ್ಲಿ ತಾನ ಎಂಬ ಪದವು
ತೆನ್ನಾ ಎಂಬ ಪದದಿಂದ ಬಂದಿದೆ ಎಂದು ಕೆಲವರ ಅಭಿಪ್ರಾಯ. ನಮ್ಮಾಳ್ವಾರರು
ತಮ್ಮ ತಿರುವಾಯಿ ಮೊಳೆಯನ್ನು ತಿರುಪತಿ ಶ್ರೀನಿವಾಸನ ಮುಂದೆ ತೇನ್ನಾ ತೇನ್ನಾ
ಎಂದು ಹಾಡಿ, "ತೇನಾ ತೇನ್ನಾವೇನನಂಡು ಮುರಲ್ ತಿರುವೇಂಗಡತ್ತು" ಎಂಬ
ಸ್ತೋತ್ರವನ್ನು ರಚಿಸಿದರು. ತೇನಾ ಎಂಬ ಪದವು ಕ್ರಮೇಣ ತಾನಂ ಎಂದಾಯಿತು
ಎಂದು ಕೆಲವರ ಅಭಿಪ್ರಾಯ. ಮಂತ್ರ ಶಾಸ್ತ್ರಜ್ಞರ ಪ್ರಕಾರ (ತ+ಅ+ನ+ಅಂ=
ತಾನಂ) ಎಂಬುದರಲ್ಲಿ ತಕಾರವು ಶಂಕರವಾಚಕವು, ಅಕಾರವು ಬ್ರಹ್ಮವಾಚಕವು
 
೪೪೩