This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತಿರುಗಣೆ ಕಂಬಿಗಳನ್ನು ಅಳವಡಿಸುವ ಅಭ್ಯಾಸ ಬಂದಿದೆ ಇವುಗಳ ಸಹಾಯದಿಂದ

ಜಾಗ್ರತೆಯಾಗಿ ತಬಲಾವನ್ನು ಶ್ರುತಿಗೂಡಿಸಬಹುದು.
 

 

ಈಗ ಹಿತ್ತಾಳೆ,

ಇದಕ್ಕೆ ಚರ್ಮದ

ಮುಚ್ಚಳಿಕೆಯಲ್ಲಿ
 

ಬಾಯಾವನ್ನು ಮೊದಲು ಮರದಿಂದ ಮಾಡುತ್ತಿದ್ದರು.

ತಾಮ್ರ ಅಧವಾ ಉಕ್ಕು ಇತ್ಯಾದಿ ಧಾತುವಿನಿಂದ ಮಾಡುತ್ತಾರೆ.

ಮುಚ್ಚಳಿಕೆ ಹಾಳಿ ಹಗ್ಗಗಳಿಂದ ಬಿಗಿಯುವ ಝಾಢಿಯಾಗಿದೆ.

ಅಂಚಿನ ರೆಪ್ಪೆಯಿಂದ ಒಂದು ಅಂಗುಲ ಬಿಟ್ಟು, ಒಂದು ಪಕ್ಷಕ್ಕೆ ಕರಣೆ ಹಾಕಿದೆ.

ಸುಲಭವಾಗಿ ಶ್ರುತಿಗೂಡಿಸಲು, ಬಿಗಿಯುವ ಹತ್ತಿಯ ಹಗ್ಗಗಳಿಗೆ ಉಂಗುರಗಳು

ಅಳವಡಿಸಲ್ಪಟ್ಟಿವೆ
 

ತಬಲಾವಾದನದ ಕೌಶಲ್ಯವು ಪಖಾವಜ್ರನ ಪದ್ಧತಿಗಿಂತ ಭಿನ್ನವಾದುದು.

ಪಖಾವಜ್‌ನಲ್ಲಿ ಖುಲ್ಲಾ ಬೋಲ್‌ಗಳಿದ್ದರೆ ತಬಲಾದಲ್ಲಿ ಬಂದ್ ಬೋಲ್‌ಗಳಿರುತ್ತವೆ.

ಇದಕ್ಕೆ ಕಿನಾರ ಅಥವಾ ಚಾಟಗಳ ಮೇಲೆ ನುಡಿಯುವ ಬೋಲ್‌ಗಳೆಂದು ಹೆಸರು.

ಕಾಯದಾ, ವೇಶಕಾರ್, ಗತ್, ತುಕಡಾ, ಮುಖಡಾ, ಮೊಹರಾ ಇತ್ಯಾದಿ ವಾದನ

ವೈವಿಧ್ಯತೆಗಳಿಂದ ತುಂಬಿದ ತಬಲಾ ವಾದನವು ಆಕರ್ಷಕವಾಗಿರುತ್ತದೆ. ದಿಲ್ಲಿಬಾಜ,

ಪೂರಬ, ಅಜಾಡ್, ಪಂಜಾಬಿ, ಬನಾರನ್ ಎಂಬ ಪರಂಪರಾಗತವಾದ ವಾದನ

ಶೈಲಿಗಳು ಕಂಡು ಬರುತ್ತವೆ.
 

ಅನೋಖಲಾಲ್ ಮಿಶ್ರ, ಅಮೀರ್ ಹುಸೇನ್‌ಖಾನ್, ಅಲ್ಲಾರ್‌ಖಾನ್,

ಅಹಮದ್‌ಜಾನ್ ತಿರಕ್ಷಾ ಅಬೀದ್ ಹುಸೇನ್ ಖಾನ್, ಕಂರೆ ಮಹಾರಾಜ್,

ಕರಾಮತ್ತುಲ್ಲಾಖಾನ್, ಕಿಶನ್ ಮಹಾರಾಜ್, ಗಣೇಶ ಚತುರ್ವೇದಿ, ಜೋರಾವರ್

ಸಿಂಹ, ನಧೂಖಾನ್, ನನ್ನೂ ಸಹಾಯ, ನನ್ನೆಖಾನ್, ಪ್ರಸನ್ನ ಕುಮಾರ್

ವಾಣಿಕ್ಯ, ಬಾಜಾಮಿಶ್ರ, ಬಾಬುರಾವ್ ಗೋಖಲೆ, ಬೀರುಮಿಶ್ರ, ಭೈರವಪ್ರಸಾದ್,

ಭೈರವ್ ಸಹಾಯ್, ಮಹಬೂಬ್‌ಖಾನ್ ಮಿರಜ್‌ಕರ್, ಮುನೀರ್‌ಖಾನ್,

ಮೌಲವಿರಾಮ್ ಮಿಶ್ರ, ಮೌಲಾಬಖ್ಯ, ರಾಮಸಹಾಯ್, ಶಾಂತಾ ಪ್ರಸಾದ್‌ಮಿಶ್ರ,

ಸಖದೇವ ಸಿಂಹ, ಹಬೀಬುದ್ದೀನ್ ಖಾನ್, ಚರ್ತುಲಾಲ್ ಮುಂತಾದವರು
 
ಹೆಸರಾಂತ ತಬಲಾವಾದಕರು.
 

 
ತಬಲಾತರಂಗ್
ನುಡಿಸಬೇಕಾದ ರಾಗ ಮತ್ತು ರಚನೆಗೆ ಬೇಕಾಗುವಷ್ಟು

ಸ್ವರಗಳನ್ನು ಮಾತ್ರ ನುಡಿಯುವ ಸಂಖ್ಯೆಯಲ್ಲಿ ತಬಲಾಗಳನ್ನು ಬೇಕಾದ ಆಧಾರ

ಶ್ರುತಿಗೆ ಹೊಂದಿಸಿಕೊಂಡು ನುಡಿಸುತ್ತಾರೆ.

ಈ ರೀತಿ ತಬಲಾಗಳ ನುಡಿಕೆ
 
ಯಿಂದಲೇ ಸಂಗೀತ ರಚನೆ ನುಡಿಸುವುದಕ್ಕೆ ತಬಲಾತರಂಗ್' ಎಂದು ಹೆಸರು.

ಸ್ವರ ವೈವಿಧ್ಯಕ್ಕೆ ತಕ್ಕಂತೆ ತಬಲಾಗಳು ಗಾತ್ರದಲ್ಲಿ ಕರಣೆಗಳಲ್ಲಿ ವ್ಯತ್ಯಾಸ

ಹೊಂದಿರುತ್ತವೆ.
 

 
ತಮಸ್ಸಿವಿನಿ -
(೧) ಈ ರಾಗವು ೪ನೆ ಮೇಳಕರ್ತ ವನಸ್ಪತಿಯ ಒಂದು

ಜನ್ಯರಾಗ,