This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತಬಲ-
ಪ್ರಾಚೀನ ಅರೇಬಿಯಾ ದೇಶದ ಖಂಜರಿಯ ಜಾತಿಗೆ ಸೇರಿದ ಡಫ್

ಎಂಬ ಚರ್ಮ ಅವನದ್ಧ ವಾದ್ಯವು ತಬಲದ ಮೂಲವೆಂದು ಹೇಳಬಹುದು. ಇದರೊಂದಿಗೆ

ಒಂದು ಮುಖದಲ್ಲಿ ಚರ್ಮಹೊದಿಸಿದ್ದ ಉದ್ದನಾದ ಇನ್ನೊಂದು ವಾದ್ಯವನ್ನು

ಉಪಯೋಗಿಸಿ ಅರೇಬಿಯದ ಹೆಂಗಸರು ತಮ್ಮ ಲಘು ಸಂಗೀತಕ್ಕೆ ಪಕ್ಕವಾದ್ಯವಾಗಿ

ಉಪಯೋಗಿಸುತ್ತಿದ್ದರು. ಡಪ್ ಮತ್ತು ತಬಲಾಗಳನ್ನು ಮೊದಲು ನಿರ್ಮಿಸಿದವನು

ಅರೇಬಿಯಾದ ಜೂಬಲ್ ಎಂಬುವನ ಮಗ ಟ್ಯೂಬಲ್ ಎಂಬುವನೆಂದು ಹೇಳುತ್ತಾರೆ.

ಹಿಂದೆ ಎಲ್ಲಾ ಚರ್ಮವಾದ್ಯಗಳನ್ನೂ ತಬಲ್ ಎಂದು ಕರೆಯುತ್ತಿದ್ದರು.

ತಬಲ್‌ ಕಡಾ, ತಬಲ್-ಅಲ್-ಮರ್ಕಾದ,

ತಬಲ್ ಅಲ್-ಮುಖನ್ನಾತ್
 
ಉದಾ :
 
ಇತ್ಯಾದಿ.
 
೪೪೦
 
ಮರದ
 
ಉತ್ತರ ಭಾರತದಲ್ಲಿ ತಬಲಾ ಅತಿಮುಖ್ಯವಾದ ತಾಳವಾದ್ಯ. ವಖಾವನ್ನು

ಇಬ್ಬಾಗಿಸಿ ಎದ್ದು ನಿಲ್ಲಿಸಲು ತಬಲಾ ವಾದ್ಯದ ಕಲ್ಪನೆಯುಂಟಾಗುತ್ತದೆ. ಎಡಗೈ

ಯಿಂದ ನುಡಿಸಲ್ಪಡುವ ಭಾಗಕ್ಕೆ ಡಗ್ಗಾ ಅಧವಾ ಬಾಯಾ ಎಂದೂ, ಬಲಗೈಯಿಂದ

ನುಡಿಸುವ ವಾದ್ಯಕ್ಕೆ ತಬಲಾ ಎಂದೂ ಹೆಸರು, ೧೩ನೆ ಶತಮಾನದಲ್ಲಿದ್ದ ಅಮಾರ್

ಖುಸ್ರೋವಿನ ಮುಖಾಂತರವಾಗಿ ಈ ವಾದ್ಯವು ಪ್ರಚಾರದಲ್ಲಿ ಬಂದಿತು.

ದಿಮ್ಮಿಯನ್ನು ಅಳತೆಗೆ ಸರಿಯಾಗಿ ಕೊಯ್ದು, ಎರಡು ಹೋಳುಗಳನ್ನು ಕೊರೆದು,

ಈ ಎರಡು ಭಾಗಗಳೂ ಕೊಳಗದ ರೂಪಕ್ಕೆ ತಯಾರಾಗುತ್ತವೆ. ಬಲಗೈಯಿಂದ

ನುಡಿಸಲ್ಪಡುವ ಕೊಳಗದ ತೆರೆದ ಬಾಯಿ ಸ್ವಲ್ಪ ಚಿಕ್ಕದಾಗಿದ್ದು ಕುರಿಯ ಚರ್ಮದ

ಹೊದಿಕೆ ಹೊಂದುತ್ತದೆ. ಇದರ ಮೇಲೆ ಇನ್ನೂ ಸ್ವಲ್ಪ ದಪ್ಪ ಚರ್ಮದ ಅಂಚುರೆಪ್ಪೆ

ಸುತ್ತಲೂ ಇರುತ್ತದೆ. ಮೇಲ್ಬಾಗದ ಸುತ್ತಲೂ ಚರ್ಮದ ಪಟ್ಟಿಗಳಿಂದ ಹೆಣೆದ

ಚರ್ಮದ ಬಳೆ ಜೋಡಿಸಿ, ಈ ಚರ್ಮದ ಬಳೆಯ ಸುತ್ತಲೂ ಸುಮಾರು ಎಂಟು

ಸ್ಥಳಗಳಲ್ಲಿ ಚರ್ಮದ ಪಟ್ಟಿಗಳು ತೂರಿ ಬರುತ್ತವೆ. ಈ ಪಟ್ಟಿಗಳನ್ನು ಹೊಳವಿನ

ಮುಚ್ಚಿದ ಕೆಳಭಾಗಕ್ಕೆ ಅಳವಡಿಸಿದ ಕಬ್ಬಿಣದ ಬಳಕೆಗೆ

ಪಟ್ಟಿಗಳ ಕೆಳಗೆ ಹೊಳವಿನ ಹೊಟ್ಟೆಯ ಮೇಲೆ, ಮರದ ಸಣ್ಣ ಸಣ್ಣ ತುಂಡುಗಳನ್ನು

ಸಿಕ್ಕಿಸಲಾಗಿದೆ. ಈ ತುಂಡುಗಳಿಗೆ ಗಟ್ಟಿಗಳೆಂದು ಹೆಸರು. ಇವುಗಳನ್ನು ಮೇಲಕ್ಕೆ

ಕೆಳಕ್ಕೆ ಸಣ್ಣ ಸುತ್ತಿಗೆಯಿಂದ ಜರುಗಿಸಿ, ಶ್ರುತಿಯನ್ನು ಸರಿಮಾಡಿಕೊಳ್ಳಲು

ಹೊಳವಿನ ಮೇಲ್ಬಾಗದ ಚರ್ಮದ ಮುಚ್ಚಳಿಕೆಯ ಸುತ್ತಲೂ

ಅಂಚಿನಲ್ಲಿ ಸುಮಾರು ಒಂದು ಕಾಲು ಅಂಗುಲ ಅಗಲವಿರುವ ಭಾಗಕ್ಕೆ ರೆಪ್ಪೆ ಎಂದು

ಬೆರಳಿನಿಂದ ಈ ರೆಪ್ಪೆಯ ಮೇಲೆ ನುಡಿಸುವ ಕ್ರಿಯೆಗೆ ಮಾಟು ಎಂದು

ಹೆಸರು. ಮೇಲ್ಬಾಗದ ಮುಚ್ಚಳಿಕೆಯ ಮಧ್ಯಭಾಗದಲ್ಲಿ ರೆಪ್ಪೆಯಿಂದ ಸುಮಾರು

ಮುಕ್ಕಾಲು ಅಂಗುಲಬಿಟ್ಟು ಪೂರ್ಣಚಂದ್ರಾಕಾರದ ಕಪ್ಪು ಕರಣೆ ಹಾಕಿರುತ್ತಾರೆ.

ಕೈಯನ್ನು ಈ ಭಾಗದ ಮೇಲೆ ತಾಡಿಸುವ ಕ್ರಿಯೆಗೆ ಛಾಪು ಎಂದು ಹೆಸರು.

ಬಿಗಿತ ಬರಲು ಹಾಕುವ ಸುತ್ತು ಚರ್ಮದ ಪಟ್ಟಿಗಳ ಬದಲಾಗಿ ಈಚೆಗೆ ಲೋಹದ
 
ಬಿಗಿಯಲಾಗಿದೆ.
 


 
ಅನುಕೂಲವಾಗಿದೆ.
 
ಹೆಸರು