This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪಿಟೀಲು ವಿದ್ವಾಂಸರಾಗಿದ್ದರು. ಹಿರಿಯ ಶಿಂಗರಾಚಾರ್ಲು ಮದ್ರಾಸಿನ ಪಚ್ಚಯಪ್ಪ
ಕಾಲೇಜಿನಲ್ಲಿ ತೆಲುಗು ಪಂಡಿತರಾಗಿದ್ದರು.
 
ತತವಾದ್ಯಗಳು ಸಂಗೀತವಾದ್ಯಗಳನ್ನು ತಂತೀವಾದ್ಯಗಳು ಅಧವಾ
ತತವಾದ್ಯಗಳು, ಸುಷಿರವಾದ್ಯಗಳು ಅಥವಾ ಗಾಳಿಯ ಸಹಾಯದಿಂದ ನುಡಿಯುವ
ವಾದ್ಯಗಳು ಮತ್ತು ಅವನದ್ಧ ಅಥವಾ ತಾಡನವಾದ್ಯಗಳು ಎಂದರೆ ಮುಚ್ಚಳಿಕೆ
ಹೊಂದಿ ಅಥವಾ ಹೊಂದದೆ ತಾಳಗತಿಯನ್ನು ಅನುಸರಿಸಿ ತಾಡನದಿಂದ ನುಡಿಯುವ
ವಾದ್ಯಗಳೆಂದು ವರ್ಗೀಕರಣ ಮಾಡಲಾಗಿದೆ ತಂತೀವಾದ್ಯಗಳನ್ನು (೧) ಮಾಟಿನಿಂದ
ನುಡಿಯುವುವು (೨) ಕಮಾನಿನಿಂದ ನುಡಿಯುವುವು (೩) ಕಡ್ಡಿ ಅಥವಾ ಸುತ್ತಿಗೆ
ಯಿಂದ ನುಡಿಯುವುವು ಎಂದು ವರ್ಗೀಕರಿಸಬಹುದು. ಇವುಗಳು ಯಾವವೆಂದರೆ
ಏಕನಾದ ಅಧವಾ ಏಕ್ತಾರ್, ತಂಬೂರಿ, ತುಂತಿನ, ವೀಣೆ, ಸಿತಾರ್, ಕಿನ್ನರಿ,
ರುದ್ರ ವೀಣೆ, ಸ್ವರಬತ್, ಗೋಟುವಾದ್ಯ, ಸ್ವರಮಂಡಲ, ಬಾಲ ಸರಸ್ವತಿ, ದಿಲ್‌ರುಬಾ,
ರಬಾಬ್, ಸಾರಂಗಿ, ಪಿಟೀಲು, ಬೀನ್, ಸೂರ್‌ ಬಹಾರ್, ಸರೋಡ್, ಇಸರಾಜ್
(ಮಂದ್ರ ಬಹಾರ್), ಸಂತೂರ್.
 
ತತ್ಪುರುಷ ಶಿವನ ಪಂಚಮುಖಗಳಲ್ಲಿ ಇದೊಂದು ಮುಖ. ಸದ್ಯೋಜಾತ,
ತತ್ಪುರುಷ, ಈಶಾನ, ಅಘೋರ, ವಾಮದೇವ ಇವು ಈಶ್ವರನ ಪಂಚಮುಖಗಳು,
ತ್ಯಾಗರಾಜರು ತಮ್ಮ ಚಿತ್ತರಂಜನಿ ರಾಗದ 'ನಾದತನುಮನಿಶಂ' ಎಂಬ ಕೃತಿಯಲ್ಲಿ
ಸ ರಿ ಗ ಮ ಪ ದ ನಿ ಎಂಬ ವರಸಪ್ತ ಸ್ವರಗಳು (ಸದ್ಯೋಜಾತಾದಿ ವಂಚವಕ್ರಜ)
ಈಶ್ವರನ ಪಂಚಮುಖಗಳಿಂದ ಹುಟ್ಟಿದುವು ಎಂದಿದ್ದಾರೆ. ಅವಿಕೃತ ಸ್ವರಗಳಾದ
ಸ ಮತ್ತು ಪ ಗಳು ಪಾರ್ವತಿಯಿಂದಲೂ, ವಿಕೃತ ಸ್ವರಗಳಾದ ಮಿಕ್ಕ ಐದು ಸ್ವರಗಳು
ಶಿವನ ಪಂಚಮುಖಗಳಿಂದ ಹುಟ್ಟಿದುವು ಎಂದು ಇಲ್ಲಿ ತಿಳಿಯಬೇಕು
 
ತನುಕೀರ್ತಿ. -ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
 
ಜನ್ಯರಾಗ
 
ಸ ರಿ ಮ ಪ ನಿ ಸ
 
ಸ ನಿ ದ ನಿ ಪ ಮ ಗ ಮ ರಿ ಸ
 
ತಪಸ್ವಿನಿ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
ಸ ಗ ಮ ಪ ನಿ ಸ
 
ಸ ನಿ ದ ಪ ಮ ಗ ಸ
 
ತಪೋಲ್ಲಾಸಿನಿ ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು
 

 
ಜನ್ಯರಾಗ,
 
ಅ :
 
೪೩೯
 
ಜನ್ಯರಾಗ,
 
ಸ ಮ ರಿ ಗ ಮ ಪ ದ ನಿ ಸ
ಸ ದ ಪ ಗ ರಿ ಸ