2023-07-05 07:21:50 by jayusudindra
This page has been fully proofread once and needs a second look.
ರಾಗ.
ಸಂಗೀತ ಪಾರಿಭಾಷಿ
ತೋರಿಕ-
ಇದು ಹಂಸವಿಲಾಸವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು
ಡೋ
ಢೋಲು
ಇದು ನಾಗಸ್ವರವಾದನದ ಪ್ರಮುಖ ತಾಳ ವಾದ್ಯ. ಇದಕ್ಕೆ
ತಮಿಳಿನಲ್ಲಿ ತವಿಲ್ ಎಂದು ಹೆಸರು. ದಕ್ಷಿಣ ಭಾರತದಲ್ಲಿ ಇದನ್ನು ಅದ್ಭುತವಾಗಿ
ನುಡಿಸುವ ವಾದಕರಿದ್ದಾರೆ. ದಪ್ಪನಾದ ಮರದ ತುಂಡನ್ನು ಕೊರೆದು ಹೊಳವು
ಮಾಡಿ ಅದರ ಎರಡು ಮುಖಗಳಿಗೆ ಎಮ್ಮೆ ಅಧವಾ ಕುರಿಯ ಚರ್ಮವನ್ನು ಬಿಗಿಯ
ಲಾಗಿದೆ ಎರಡು ಮುಖಗಳಿಗೂ ಮೊದಲು ಸೆಣಬು ನಾರಿನಲ್ಲಿ ದಪ್ಪನಾಗಿ ಬಳೆಗಳನ್ನು
ಚೆನ್ನಾಗಿ ನಿಲ್ಲಲು ಸೆಣಬು ನಾರಿನ ಬಳೆಗಳ ಮಧ್ಯೆ ಮಧ್ಯೆ ಚರ್ಮದ ಪಟ್ಟಿಗಳನ್ನು
ತೂರಿಸಿ ಬಿಗಿಯಲಾಗಿದೆ. ಇದರ ಸಹಾಯದಿಂದ ವಾದ್ಯವನ್ನು ಬೇಕಾದ ಸ್ವರ
ಮಟ್ಟಕ್ಕೆ ಶ್ರುತಿ ಮಾಡಿಕೊಳ್ಳಬಹುದು.
ಎಡಮುಖದ ಚರ್ಮವನ್ನು ಸಣ್ಣ
ಗಳಿಂದ ನುಡಿಸುತ್ತಾರೆ. ರಣತೋಲು ಯುದ್ಧದ ವಾದ್ಯ
ಢ-
ಢೋಲ್ಕಿ
ದಖನ್ನಿನ ಹೆಂಗಸರು ನುಡಿಸುವ ಒಂದು ಸಣ್ಣ ಪೋಲು.
ಢಂಕಾ
ದಕ್ಷಿಣ ಭಾರತದ ದೇವಾಲಯಗಳ ಉತ್ಸವಗಳಲ್ಲಿ ಈ ನಗಾರಿ
ಯನ್ನು ಕುದುರೆಯ ಬೆನ್ನಿನ ಮೇಲಿಟ್ಟು ಕೊಂಡು ಬಾರಿಸುತ್ತಾರೆ.
ಢಂಕಿ
ದಕ್ಷಿಣ ಭಾರತದ ದೇವಾಲಯಗಳಲ್ಲಿ ಮುಖವೀಣೆಗೆ ತಾಳವಾದ್ಯವಾಗಿ
ಬಳಸುವ ಒಂದು ಅವನದ್ದವಾದ್ಯ.
ತ-
ತ
ಹರಿ, ಶಕ್ತಿ, ಕಾಮಿನೀ, ವಾರಾಹೀ ಇತ್ಯಾದಿ ನಾನಾರ್ಥಗಳಿವೆ.
ತಮ್ಮೂ
ತಚ್ಚೂರು ಶಿಂಗರಾಚಾರ್ಲು ಸಹೋದರರು
ಇವರಿಬ್ಬರೂ ಆಂಧ್ರದ
ಶ್ರೀವೈಷ್ಣವ ಬ್ರಾಹ್ಮಣರು. ಆನಂದ ಗಜಪತಿ ಮಹಾರಾಜ ವಿಜಯನಗರದಲ್ಲಿ
ಆಳುತ್ತಿದ್ದಾಗ ಇದ್ದವರು ಶ್ಯಾಮಾಶಾಸ್ತ್ರಿಗಳ ಪುತ್ರ ಸುಬ್ಬರಾಯ ಶಾಸ್ತ್ರಿಗಳ
ದತ್ತು ಪುತ್ರ ಅಣ್ಣಾಸ್ವಾಮಿ ಶಾಸ್ತ್ರಿಗಳ ಶಿಷ್ಯರಾಗಿ ಸಂಗೀತ ವಿದ್ವಾಂಸರಾದರು.
ಇವರಿಬ್ಬರೂ ಪ್ರಸಿದ್ಧವಾಗ್ಗೇಯಕಾರರಾಗಿದ್ದ ಅನೇಕ ಕೃತಿಗಳನ್ನೂ ಜಾವಳಿಗಳನ್ನೂ
ರಚಿಸಿದ್ದಾರೆ. ಇದಲ್ಲದೆ ಅನೇಕ ವಾಗ್ಗೇಯಕಾರರ ರಚನೆಗಳನ್ನೂ, ಜಾವಳಿಗಳು,
ಸ್ವರಜತಿಗಳು, ವರ್ಣಗಳು ಮತ್ತು ತಮ್ಮ ಕೀರ್ತನೆಗಳನ್ನೂ ಹಲವು ಗ್ರಂಥಗಳಲ್ಲಿ
ಪಕಟಿಸಿದ್ದಾರೆ. ಗಾಯಕ ಪಾರಿಜಾತಂ, ಗಾಯಕಲೋಚನಂ, ಗಾನೇಂದುಶೇಖರಂ,
ಭಾಗವತ ಸಾರಾಮೃತಂ, ಸ್ವರಮಂಜರಿ, ಸಂಗೀತ ಕಲಾನಿಧಿ ಮುಂತಾದ ಗ್ರಂಥಗಳನ್ನು
ಪ್ರಕಟಿಸಿ ಸಂಗೀತಕ್ಕೆ ಉತ್ತಮ ಸೇವೆಸಲ್ಲಿಸಿದ್ದಾರೆ. ಇವರ ರಚನೆಗಳಲ್ಲಿ
సామి ನೆಡಬಾಸಿ (ದೇವಮನೋಹರಿ), ಎನ್ನಾಳು (ರುಂಟ)
ಜಾವಳಿಗಳೂ, ದೇವಿ ಮಾನಾಕ್ಷಿ (ಕಲ್ಯಾಣಿ), ಶ್ರೀಶಾರದೆ (ಶಹನಾ) ಪಾವನ
ಮಧುರಾನಿಲಯೇ (ಕಲ್ಯಾಣಿ) ಎಂಬ ಕೃತಿಗಳು ಪ್ರಸಿದ್ಧವಾದುವು. ಇವರು