2023-07-05 07:19:41 by jayusudindra
This page has been fully proofread once and needs a second look.
ವೆಂದು ಹೇಳಿದೆ.
ಡೌಮ್ಯ
ಈ ರಾಗವು ೩೨ನೆ ಮೇಳಕರ್ತರಾಗ ವರ್ಧನಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ ಸ
ಆ .
ಸ ನಿ ದ ಪ ಮ ಗ ರಿ ಸ
ಡೌರೇಯಣಿ
ಈ ರಾಗವು ೫೩ನೆ ಮೇಳಕರ್ತ ಗಮನ ಶ್ರಮದ ಒಂದು
ಜನ್ಯರಾಗ,
ಆ .
9 :
೪೩೭
ಸ ರಿ
ಸ ರಿಮ ದ ನಿ ಸ
ಸ ನಿ ದ ಮ ಗ ರಿ ಸ
ಡೌಲಿಕ
ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ದ ಸ
.
ಸ ನಿ ದ ಮ ಗ ರಿ ಸ
ಡಂಕಾ
ಇವು ಕುದುರೆಯ ಬೆನ್ನಿನ ಮೇಲೆ ಇರಿಸಿ ಹೊಡೆಯುವ ಕೋನಾ
ಕಾರವಾಗಿರುವ ಎರಡು ನಗಾರಿಗಳು. ಇದರ ಮಧ್ಯ ಗುಂಡಾಗಿರುವ ಬಳೆ
ಹಾಕಿರುತ್ತಾರೆ. ಕುದುರೆಯ ಮೇಲೆ ಕುಳಿತು ಈ ನಗಾರಿಗಳನ್ನು ಬಾರಿಸುತ್ತಾರೆ.
ಕುದುರೆಯನ್ನು ಚೆನ್ನಾಗಿ ಅಲಂಕರಿಸುತ್ತಾರೆ. ದೇವಾಲಯಗಳ ಉತ್ಸವಗಳಲ್ಲಿ
ಈ ಕುದುರೆಯು ಮುಂಭಾಗದಲ್ಲಿರುತ್ತದೆ.
ಡಿಂಡಿಮ
ಇದು ರಾಮಾಯಣದಲ್ಲಿ ಉಕ್ತವಾಗಿರುವ ಒಂದು ಚಿಕ್ಕಮದ್ದಲೆ.
ಇದು ಪರೈವಾದ್ಯದ ಗುಂಪಿಗೆ ಸೇರಿದೆ.
ಢ
ಪೂರ್ವ, ಅರ್ಧನಾರೀಶ್ವರ, ವಿನಾಯಕ, ವಿಷ್ಟೇಶ ಇತ್ಯಾದಿ
ನಾನಾರ್ಥಗಳಿವೆ.
ಢಕ್ಕ
ಇದು ಎರಡು ಮುಖಗಳಿರುವ ದೊಡ್ಡ ಡೋಲಿನಂತಹ ವಾದ್ಯ.
ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಇದು ಉಕ್ತವಾಗಿದೆ.
ಢಾಲು
ಇದು ದಶವಿಧ ಗಮಕಗಳಲ್ಲಿ ಒಂದು ವಿಧ-(ನೋಡಿ-ಗಮಕಗಳು)
ಡೌಲಿ-.-
ಢೌಲಿ
ಎರಡು ಮುಖಗಳಿರುವ ಒಂದು ಅವನದ್ಧವಾದ್ಯ
ಡೇಂಕ-
ಢೇಂಕ
ದಕ್ಷಿಣ ಭಾರತದ ಗ್ರಾಮಾಣ ಪ್ರದೇಶಗಳಲ್ಲಿ ಪ್ರಚಲಿತವಿರುವ
ಒಂದು ಬಗೆಯ ಕಿನ್ನರಿ. ಇದರ ಎರಡು ಕಡೆಗಳಲ್ಲಿ ಅನುರಣನಕ್ಕಾಗಿ ತೆಂಗಿನಕಾಯಿ
ಚಿಪ್ಪುಗಳನ್ನು ಅಳವಡಿಸಲಾಗಿದೆ.
ಢಂ
ಢೇಂಕಿಕ
ಪ್ರಾಚೀನ ಪ್ರಸಿದ್ಧವಾದ ಅಷ್ಟೋತ್ತರ ಶತತಾಳಗಳಲ್ಲಿ ಇದು
೬೦ನೆಯ ತಾಳ. ಇದರ ಅಂಗಗಳು. ಗುರು, ಲಘು ಮತ್ತು ಗುರು. ಇದರ ಒಂದಾ
ವರ್ತಕ್ಕೆ ೫ ಮಾತ್ರೆಗಳು ಅಧವಾ ೨೦ ಅಕ್ಷರ ಕಾಲ. ಈ ತಾಳದ ರಚನೆಯು
ರಗಣಕ್ಕೆ ಸಮನಾಗಿದೆ.