This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಜೇಡಿಮಣ್ಣಿನಿಂದ ತಯಾರಿಸುವುದುಂಟು. ಮಧ್ಯದ ಸುತ್ತು ದಾರದ ಬದಿಯಲ್ಲಿ

ದಪ್ಪನಾಗಿ ಗಂಟುಬಿಗಿದು, ವಾದ್ಯವನ್ನು ಸೊಂಟದಂತಿರುವ ಭಾಗದಲ್ಲಿ ಹಿಡಿದು

ಅಲ್ಲಾಡಿಸಿದಾಗ, ಈ ಗಂಟು ಎರಡು ಮುಚ್ಚಳಿಕೆಗಳ ಮೇಲೆ ಬಡಿದು ನಾದವುಂಟು
ಮಾಡುತ್ತದೆ. ಇದಕ್ಕೆ ಡಮರುಕವೆಂದೂ ಹೆಸರಿದೆ.

 
ಡಮರುಕಪ್ರಿಯ-
ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು
 
ಜನ್ಯರಾಗ
 
3 :
 

ಸ ರಿ ಗ ಪ ದ ನಿ ಸ

ಸ ನಿ ದ ಸ ಗ ರಿ ಸ
 
೪೩೫
 
ಯತಿ.
 
ಡಮರುಯತಿ -

 
ಡಮರುಯತಿ
ಇದು ತಾಳ ದಶ ಪ್ರಾಣಗಳಿಗೆ ಸೇರಿದ ಒಂದು ಬಗೆಯ

ಇದಕ್ಕೆ ವೇದಮಧ್ಯಮಯತಿ ಎಂದೂ ಹೆಸರು ಡವರು ವಾದ್ಯದಲ್ಲಿ

ಮಧ್ಯಭಾಗವು ಸೂಕ್ಷ್ಮವಾಗಿಯೂ ಎರಡು ವಕ್ಕಗಳ ಭಾಗಗಳು ವಿಶಾಲವಾಗಿರುವ

ತಾಳದ ಆವರ್ತದಲ್ಲಿ ಮಧ್ಯ ಕಡಿಮೆಯಾಗಿದ್ದು ಎರಡು

ಕಡೆಗಳಲ್ಲಿ ಹೆಚ್ಚಾದ ಅಂಗಗಳಿರುತ್ತವೆ. ಇದು ಚಿಕ್ಕ ಮತ್ತು ದೊಡ್ಡ ಅಂಗಗಳ

ಮಿಶ್ರಯತಿ,
 
ರೀತಿಯಲ್ಲಿರುವ ಯತಿ,
 

 
ಡವಸಂ-
ಇದೊಂದು ಬಗೆಯ ಅವನದ್ಧವಾದ್ಯ
 

 
ಡಪ್ಪು-
ಇದು ಸುಮಾರು ಎರಡು ಅಡಿ ವ್ಯಾಸವಿರುವ ಗುಂಡಾದ ಒಂದು

ತಮಟೆ ಗುಂಡಾಗಿರುವ ಬಳೆಯ ಒಂದು ಮುಖಕ್ಕೆ ಹಸುವಿನ ಚರ್ಮವನ್ನು ಎಳೆದು

ಕಟ್ಟಲಾಗಿದೆ.
 

 
ಡಮಾರ-
ಇವು ಕೋನಾಕಾರವಿರುವ ಒಂದು ಜೊತೆ ನಗಾರಿಗಳು, ಮರದ

ತುಂಡನ್ನು ಕೊರೆದು ತಯಾರಿಸುತ್ತಾರೆ. ಚರ್ಮವನ್ನು ಬಾಯಿಗೆ ಪಸರಿಸಿ ಚರ್ಮದ

ಪಟ್ಟಿಗಳಿಂದ ಎಳೆದು ಕಟ್ಟಿರುತ್ತಾರೆ.

ಕಡ್ಡಿ ಮತ್ತು ಬಾಗಿರುವ

ಮತ್ತೊಂದು ಕಡ್ಡಿಯಿಂದ ಇವುಗಳನ್ನು ಬಾರಿಸುತ್ತಾರೆ. ಇವುಗಳನ್ನು ಒಂದು ಎತ್ತಿನ

ಹೆಗಲಿನ ಮೇಲಿಟ್ಟು ಎತ್ತಿನ ಮೇಲೆ ಕುಳಿತವನ್ನು ಬಾರಿಸುತ್ತಾನೆ.

ಈ ಎತ್ತು

ದಕ್ಷಿಣ ಭಾರತದ ದೇವಾಲಯದ ಉತ್ಸವಗಳ ಮುಂಭಾಗದಲ್ಲಿರುತ್ತದೆ.
 
ನೇರವಾದ ಒಂದು
 
ಡಲ್ಲಿ

 
ಡಲ್ಸಿ
ಮರ್-
ಇದೊಂದು ತಂತಿವಾದ್ಯ. ತಂತಿಗಳನ್ನು ಒಂದು ಅನುರಣನ

ಪೆಟ್ಟಿಗೆಯ ಮೇಲೆ ಕಟ್ಟಿರುತ್ತಾರೆ. ಇವುಗಳನ್ನು ಎರಡು ಸಣ್ಣ ಸುತ್ತಿಗೆಗಳಿಂದ

ತಾಡಿಸಿ ನುಡಿಸುತ್ತಿದ್ದರು. ಸ್ವರಮಂಡಲವೆಂಬ ಪುರಾತನ ವಾದ್ಯವು ಇದಕ್ಕೆ
 
ನಿದರ್ಶನ.
 

 
ಡಾಕ್-
ಇದು ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ ಡೋಲಿನಂತಹ

ಒಂದು ದೊಡ್ಡವಾದ್ಯ.
 

 
ಡಾಕ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,