This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಹೆಸರುಂಟು.
 
ಗಾಂಧಾರವು
 
ಇದು ಏಳನೆ ಋಷಿಚಕ್ರದ ಮೂರನೆಯರಾಗ, ಇದಕ್ಕೆ ಧಾಲಿವರಾಳಿ ಎಂಬ

ರಾಗಾಂಗರಾಗ, ಶುದ್ಧ ರಿಷಭ, ಶುದ್ಧ ಗಾಂಧಾರ, ಪ್ರತಿಮದ್ಯಮ,

ಶುದ್ಧ ಧೈವತ ಮತ್ತು ಕಾಕಲಿನಿಷಾದವು ಈ ರಾಗದ ಸ್ವರಸ್ಥಾನಗಳು.

ಈ ರಾಗದ ಸ್ವರಸ್ಥಾನಗಳು, ಗಾಂಧಾರವು ಈ ರಾಗದ ಜೀವ ಮತ್ತು ಛಾಯಾಸ್ವರ,

ಷಡ್ಡವು ಗ್ರಹಾಂಶನ್ಯಾಸ, ಸಾರ್ವಕಾಲಿಕ ಮತ್ತು ಭಕ್ತಿರಸ ಪ್ರಧಾನವಾದ ರಾಗ,

ಕೋಟೀಶ್ವರ ಅಯ್ಯರ್ ಮತ್ತು ಬಾಲಮುರಳಿಕೃಷ್ಣ ಈ ರಾಗದಲ್ಲಿ ಕೃತಿಗಳನ್ನು

ರಚಿಸಿದ್ದಾರೆ.
 

 
ಝೀ
ನಾವಳಿ-
ಈ ರಾಗವು ೩೯ನೆ ಮೇಳಕರ್ತ ರುಲವರಾಳಿಯ ಒಂದು
 

ಜನ್ಯರಾಗ,
 

ಸ ಗ ರಿ ಗ ಮ ಪ ದ ನಿ ದ ನಿ

ಸ ನಿ ದ ಪ ಮ ಗ ರಿ ಸ
 
p4
 
ರಂ

 
ಝೋಂ
ಪಟತಾಳ-
ಮಧ್ಯಯುಗದ ಸಂಗೀತ ಶಾಸ್ತ್ರಗ್ರಂಧಗಳಲ್ಲಿ ಆದಿತಾಳಕ್ಕೆ

ಈ ಹೆಸರನ್ನು ಹೇಳಿದೆ. ಆದಿತಾಳವನ್ನು ತಿರುಗು ಮಾಡಿದರೆ ರೋಂಪಟತಾಳ
ವಾಗುತ್ತದೆ. ಕಥಕಳಿ ಹಾಡುಗಳಲ್ಲಿ ಇದಕ್ಕೆ ಛಂಪಟವೆಂದು ಹೆಸರು.
ರೈಂ

 
ಝೋಂ
ಬಕ-
ಕತ್ತಿನ ನರಗಳು ಉಬ್ಬಿ ಕಾಣುವಂತೆ ಕಷ್ಟ ಪಟ್ಟು ಹಾಡುವ

ಗಾಯಕ. ಇದು ಗಾಯಕನ ದೋಷಗಳಲ್ಲಿ ಒಂದು ವಿಧ.
 

 
ಝೋ
ಮಾರ್
ಬಂಗಾಳದ ಒಂದು ವಿಧವಾದ ಜನಪದಗೀತೆ,
ರರ-

 
ಝೋರ
ಇದು ಉತ್ತರ ಪ್ರದೇಶದ ಕುಮಾವ್ ಬೆಟ್ಟಗಳ ಪ್ರದೇಶದಲ್ಲಿ

ಪ್ರಚಲಿತವಾಗಿರುವ ಒಂದು ಬಗೆಯ ಜನಪದ ನೃತ್ಯ ಇದರಲ್ಲಿ ಎಲ್ಲಾ ಜಾತಿಗಳ

ಸ್ತ್ರೀ ಪುರುಷರು ಭಾಗವಹಿಸುತ್ತಾರೆ ಅವರು ವರ್ತುಲಾಕಾರದಲ್ಲಿ ಕುಣಿಯುತ್ತಾರೆ.
ಟ-

 

ಕಾಪಾಲೀ, ಪೃಥ್ವಿ, ವೈಷ್ಣವೀ, ವಾರುಣೀ ಇತ್ಯಾದಿ ನಾನಾರ್ಥಗಳಿವೆ.

 
ಟಕ್ಕರಾಗ-
ಇದು ಪುರಾತನ ತಮಿಳು ಸಂಗೀತದ ಒಂದು ಪಣ್ (ರಾಗ)

ಇದು ಈಗಿನ ಕಾಂಭೋಜಿರಾಗಕ್ಕೆ ಸಮನಾದುದು.
 

 
ಟಕ್ಕಾ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು

ಜನ್ಯರಾಗ,
 

 

ಸ ರಿ ಗ ಮ ಗ ಗ ಮ ದ ನಿ ಸ

ಸ ನಿ ಪ ಮ ಗ ಮ ಸ ರಿ ಗ ಸ
 

 
ಟಾದಿನವ-
ಪೂರ್ವೀಕರು ೭೨ ಮೇಳಕರ್ತ ರಾಗಗಳ ಸಂಖ್ಯೆಯನ್ನು ಕಂಡು

ಹಿಡಿಯಲು ಕಟಪಯಾದಿ ಸೂತ್ರವನ್ನು ಬಳಸಿದ್ದಾರೆ.

ಈ ಸೂತ್ರವು ವರರುಚಿಯ

ಸೂತ್ರ. ಟಾದಿನವ ಎಂದರೆ ಟ ಇಂದ ಒಂಭತ್ತು ಅಕ್ಷರಗಳು-ಟ ಠ ಡ ಢ ಣ

ತ ದ ದ ಧ.
 
28