We're performing server updates until 1 November. Learn more.

This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಹೆಸರುಂಟು.
 
ಗಾಂಧಾರವು
 
ಇದು ಏಳನೆ ಋಷಿಚಕ್ರದ ಮೂರನೆಯರಾಗ, ಇದಕ್ಕೆ ಧಾಲಿವರಾಳಿ ಎಂಬ
ರಾಗಾಂಗರಾಗ, ಶುದ್ಧ ರಿಷಭ, ಶುದ್ಧ ಗಾಂಧಾರ, ಪ್ರತಿಮದ್ಯಮ,
ಶುದ್ಧ ಧೈವತ ಮತ್ತು ಕಾಕಲಿನಿಷಾದವು ಈ ರಾಗದ ಸ್ವರಸ್ಥಾನಗಳು.
ಈ ರಾಗದ ಸ್ವರಸ್ಥಾನಗಳು, ಗಾಂಧಾರವು ಈ ರಾಗದ ಜೀವ ಮತ್ತು ಛಾಯಾಸ್ವರ,
ಷಡ್ಡವು ಗ್ರಹಾಂಶನ್ಯಾಸ, ಸಾರ್ವಕಾಲಿಕ ಮತ್ತು ಭಕ್ತಿರಸ ಪ್ರಧಾನವಾದ ರಾಗ,
ಕೋಟೀಶ್ವರ ಅಯ್ಯರ್ ಮತ್ತು ಬಾಲಮುರಳಿಕೃಷ್ಣ ಈ ರಾಗದಲ್ಲಿ ಕೃತಿಗಳನ್ನು
ರಚಿಸಿದ್ದಾರೆ.
 
ನಾವಳಿ-ಈ ರಾಗವು ೩೯ನೆ ಮೇಳಕರ್ತ ರುಲವರಾಳಿಯ ಒಂದು
 
ಜನ್ಯರಾಗ,
 
ಸ ಗ ರಿ ಗ ಮ ಪ ದ ನಿ ದ ನಿ
ಸ ನಿ ದ ಪ ಮ ಗ ರಿ ಸ
 
p4
 
ರಂಪಟತಾಳ-ಮಧ್ಯಯುಗದ ಸಂಗೀತ ಶಾಸ್ತ್ರಗ್ರಂಧಗಳಲ್ಲಿ ಆದಿತಾಳಕ್ಕೆ
ಈ ಹೆಸರನ್ನು ಹೇಳಿದೆ. ಆದಿತಾಳವನ್ನು ತಿರುಗು ಮಾಡಿದರೆ ರೋಂಪಟತಾಳ
ವಾಗುತ್ತದೆ. ಕಥಕಳಿ ಹಾಡುಗಳಲ್ಲಿ ಇದಕ್ಕೆ ಛಂಪಟವೆಂದು ಹೆಸರು.
ರೈಂಬಕ-ಕತ್ತಿನ ನರಗಳು ಉಬ್ಬಿ ಕಾಣುವಂತೆ ಕಷ್ಟ ಪಟ್ಟು ಹಾಡುವ
ಗಾಯಕ. ಇದು ಗಾಯಕನ ದೋಷಗಳಲ್ಲಿ ಒಂದು ವಿಧ.
 
ಮಾರ್ ಬಂಗಾಳದ ಒಂದು ವಿಧವಾದ ಜನಪದಗೀತೆ,
ರರ-ಇದು ಉತ್ತರ ಪ್ರದೇಶದ ಕುಮಾವ್ ಬೆಟ್ಟಗಳ ಪ್ರದೇಶದಲ್ಲಿ
ಪ್ರಚಲಿತವಾಗಿರುವ ಒಂದು ಬಗೆಯ ಜನಪದ ನೃತ್ಯ ಇದರಲ್ಲಿ ಎಲ್ಲಾ ಜಾತಿಗಳ
ಸ್ತ್ರೀ ಪುರುಷರು ಭಾಗವಹಿಸುತ್ತಾರೆ ಅವರು ವರ್ತುಲಾಕಾರದಲ್ಲಿ ಕುಣಿಯುತ್ತಾರೆ.
ಟ-ಕಾಪಾಲೀ, ಪೃಥ್ವಿ, ವೈಷ್ಣವೀ, ವಾರುಣೀ ಇತ್ಯಾದಿ ನಾನಾರ್ಥಗಳಿವೆ.
ಟಕ್ಕರಾಗ-ಇದು ಪುರಾತನ ತಮಿಳು ಸಂಗೀತದ ಒಂದು ಪಣ್ (ರಾಗ)
ಇದು ಈಗಿನ ಕಾಂಭೋಜಿರಾಗಕ್ಕೆ ಸಮನಾದುದು.
 
ಟಕ್ಕಾ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು
ಜನ್ಯರಾಗ,
 

 
ಸ ರಿ ಗ ಮ ಗ ಗ ಮ ದ ನಿ ಸ
ಸ ನಿ ಪ ಮ ಗ ಮ ಸ ರಿ ಗ ಸ
 
ಟಾದಿನವ-ಪೂರ್ವೀಕರು ೭೨ ಮೇಳಕರ್ತ ರಾಗಗಳ ಸಂಖ್ಯೆಯನ್ನು ಕಂಡು
ಹಿಡಿಯಲು ಕಟಪಯಾದಿ ಸೂತ್ರವನ್ನು ಬಳಸಿದ್ದಾರೆ.
ಈ ಸೂತ್ರವು ವರರುಚಿಯ
ಸೂತ್ರ. ಟಾದಿನವ ಎಂದರೆ ಟ ಇಂದ ಒಂಭತ್ತು ಅಕ್ಷರಗಳು-ಟ ಠ ಡ ಢ ಣ
ತ ದ ದ ಧ.
 
28