This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಇದನ್ನು ಬೋಲ್ತಾನ್‌ಗೆ ಹೋಲಿಸಬಹುದು. ಮೂರನೆಯ ಭಾಗವು ಬ್ರಿಲಿಯೆನ್ಸ್,

ಇದರಲ್ಲಿ ತ್ವರಿತ ಲಯದಲ್ಲಿ ವಿವಿಧ ಭಾಗಗಳ ಹಾಗೂ ಧ್ವನಿಗಳ ವ್ಯತ್ಯಾಸದಿಂದ

ಹಾರ್ಮೋನಿಯಂ ಉತ್ಪತ್ತಿ ಯಾಗುತ್ತದೆ. ಇದನ್ನು ಹಿಂದೂಸ್ಥಾನಿ ಸಂಗೀತದ
 
ತಾನ್‌ಗೆ ಹೋಲಿಸಬಹುದು
 
ខ១ប
 

ಬಾಕ್‌ನ ಜೀವನದಲ್ಲಿ ಪ್ರಷ್ಯದ ದೊರೆ ಫ್ರೆಡರಿಕ್‌ನಿಂದ ದೊರಕಿದ ಆಹ್ವಾನ

ಮತ್ತು ಮನ್ನಣೆ ಮುಖ್ಯವಾದುದು. ಅವನು ಬದುಕಿದ್ದಾಗ ಜನರು ಅವನ

ಪ್ರತಿಭೆಗೆ ಮನ್ನಣೆ ಕೊಡಲಿಲ್ಲ. ಅವನ ಮರಣಾನಂತರ ೧೮೫೦ರಲ್ಲಿ ಅವನ ಕೃತಿಗಳ

ಸಂಗ್ರಹಕ್ಕಾಗಿ ಬಾಕ್ ಗೆಸೆಲ್ ಶಾಪ್ ಎಂಬ ಸಂಸ್ಥೆ ಜನ್ಮತಾಳಿತು. ಅವನು ನಿಧನ

ಹೊಂದುವ ಕೆಲವೇ ದಿನಗಳ ಹಿಂದೆ ಬಿಫೋರ್ ದೈ ಫೋನ್, ಮೈ ಗಾಡ್,

ಐ ಸ್ಟಾಂಡ್ ಎಂಬ ಕೃತಿಯನ್ನು

ರಚಿಸಿದ. ಅವನ ನಿಧನದೊಂದಿಗೆ

ಪಾಶ್ಚಾತ್ಯ ಸಂಗೀತದ ಬಾರೋಕ್ ಕಾಲ ಮುಗಿಯಿತು. ಅವನು ಸಂಗೀತದಲ್ಲಿ
 

 

 

 

ಯಾವ ಹೊಸ ಪದ್ಧತಿಯನ್ನು ಸೃಷ್ಟಿಸದಿದ್ದರೂ, ಹಳೆಯ ಪದ್ಧತಿಗಳಿಗೆ ಹೊಸ

ಸಂವೇದನಾ ಸಂಕೇತವನ್ನು ರೂಢಿಸಿದ

ಇವನ ಸಮಕಾಲೀನನಾಗಿದ್ದ ಹ್ಯಾಂಡೆಲ್

ನಿಂದ ಅಮೆರಾಗಳ ಸಂಗೀತ ಸಂಯೋಜನೆಗಳು ಆರಂಭವಾದುವು. ಪಿಯಾನೋ

ಮತ್ತು ವಯೊಲಿನ್ ನೋನಾಟಗಳು ಬಾಕಿನ ಗಮನೀಯ ಕೊಡುಗೆಗಳಾಗಿವೆ.

ಅವನು ಧೈಯಗಳ ಪ್ರತಿಪಾದಕನಾಗಿದ್ದನು ಹಾಗೂ ಅವುಗಳ ಪ್ರತೀಕವಾಗಿದ್ದು

ಮುಂದಿನ ಸಂಗೀತದ ಭದ್ರ ಅಡಿಪಾಯವನ್ನು ನಿರ್ಮಿಸಿದನು
 

 
ಜೋಹಿನಿ
ಇದು ಅರಭಟ್ಟನಾವಲರ್ ವಿರಚಿತ ಭರತಶಾಸ್ತಿರಂ ಎಂಬ

ತಮಿಳು ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗ
 

 
ಜೋಂಬಡಿ-
ಇದು ದ್ರುತಗಳಿರುವ ಒಂದು ದೇಶಿರಾಗ

 
ಜ್ಯಾ
(ಜಾಜ್ಯಾಕಾರ)-
ಇದು ಕಮಾನುವಾದ್ಯ.
 

ತಂತೀವಾದ್ಯಗಳಲ್ಲಿ ಅತ್ಯಂತ

ಪುರಾತನವಾದುದು. ಇದರಿಂದ ಹಾರ್ಪ್ ಮತ್ತು ಪುರಾತನ ಕಾಲದ ತಮಿಳು

ದೇಶದ ಯಾಳ್ ವಾದ್ಯವು ರೂಪು ಗೊಂಡಿತು. ಬಿಲ್ಲಿನ ಅಥವಾ ವಾದ್ಯದ

ಕಮಾನನ್ನು ಮಾಡುವವನು ಜ್ಯಾಕಾರ,
 

 
ಜ್ಯಾಘೋಷ-
ಇದು ಕಮಾನು ವಾದ್ಯದ ಶಬ್ದ. ತ್ಯಾಗರಾಜರು

ರಾಮಬಾಣಶ್ರಾಣ ಎಂಬ ಸಾವೇರಿರಾಗದ ಕೃತಿಯಲ್ಲಿ ರಾಮನ ಕೋದಂಡದ

ಟಂಕಾರವು ಎಷ್ಟು ಭಯೋತ್ಪಾತಕವಾಗಿತ್ತು ಎಂಬುದನ್ನು ವಿವರಿಸುವಾಗ ಜ್ಯಾಘೋಷ

ವೆಂಬ ಪದವನ್ನು ಉಪಯೋಗಿಸಿದ್ದಾರೆ.
 
ಜಾ

 
ಜ್ಯಾ
ಯಸೇನಾಪತಿ (೧೨೪೯)-
ಓರಂಗಲ್ ರಾಜಗಣಪತಿದೇವನ ದಂಡ

ನಾಯಕನಾಗಿದ್ದ ಜ್ಯಾಯ ಸೇನಾಪತಿ ವೃತ್ತ ರತ್ನಾವಲಿ, ವಾದ್ಯ ರತ್ನಾವಲಿ, ಗೀತ

ರತ್ನಾವಲಿ ಎಂಬ ಮೂರು ಕೃತಿ ರತ್ನಗಳನ್ನು ರಚಿಸಿದ್ದಾನೆ. ನೃತ್ಯ ರತ್ನಾವಲಿಯ

ಪೂರ್ವಾರ್ಧದಲ್ಲಿ ಮಾರ್ಗನೃತ್ಯ ಮತ್ತು ಉತ್ತರಾರ್ಧದಲ್ಲಿ ದೇಶೀ ನೃತ್ಯಗಳ ವಿಚಾರವಿದೆ.