This page has not been fully proofread.

೪೨೬
 
ಸಂಗೀತ ಪಾರಿಭಾಷಿಕ ಕೋಶ
 
ಜೋತಿರಾಗ-ಅಸಂಪೂರ್ಣ ಮೇಳಪದ್ಧತಿಯಲ್ಲಿ ೬೮ನೆಯ ಮೇಳದ ಹೆಸರು.
ಜೋತಿಷ್ಮತಿ-ಅಸಂಪೂರ್ಣ ಮೇಳಪದ್ಧತಿಯಲ್ಲಿ ೬೮ನೆ ಮೇಳದ ಮೊದಲಿನ
ಜೋತಿರಂಜನಿ ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
 
ಹೆಸರು.
 
ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ಮ ರಿ ಸ
 
ಜ್ಯೋತಿಸ್ವರೂಪಿಣಿ- ಈ ರಾಗವು ೬೮ನೆ ಮೇಳಕರ್ತರಾಗ
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಆ ಸಿ
 
ಅ :
 
ಈ ರಾಗವು ೧೨ನೆ ರವಿ ಚಕ್ರದ ಎರಡನೆ ಮೇಳ. ರಾಗಾಂಗರಾಗ, ಷಷ್ಟವು
ಗ್ರಹಾಂಶನ್ಯಾಸ ಷಟ್ ಶ್ರುತಿ ರಿಷಭ, ಅಂತರಗಾಂಧಾರ, ಪ್ರತಿಮಧ್ಯಮ, ಶುದ್ಧ
ಧೈವತ ಮತ್ತು ಕೈಶಿಕಿ ನಿಷಾದಗಳು ಈ ರಾಗದ ಸ್ವರಸ್ಥಾನಗಳು. ಸಾರ್ವಕಾಲಿಕ
ರಾಗ, ಶ್ರೀತ್ಯಾಗರಾಜರು ಪುದುಕೋಟೆ ಅರಮನೆಯಲ್ಲಿ ತಮ್ಮ ಗುರು ಸೊಂಟ
ವೆಂಕಟರಮಣಯ್ಯ ಮತ್ತು ಇತರ ವಿದ್ವಾಂಸರ ಸಮ್ಮುಖದಲ್ಲಿ ಈ ರಾಗವನ್ನು ಹಾಡಿ
ಒಂದು ದೀಪವು ಹತ್ತಿ ಕೊಳ್ಳುವಂತೆ ಮಾಡಿದರೆಂದು ಪುದುಕೋಟೆ ಸಂಸ್ಥಾನದ
ದರಿನ ಎರಡನೆ ಸಂಪುಟದ ಪ್ರಧಮ ಭಾಗದಲ್ಲಿ ಹೇಳಿದೆ. ಈ ರಾಗದಲ್ಲಿ ಮಹಾ
ವೈದ್ಯನಾದ ಅಯ್ಯರವರು ಬೃಹತ್ತರಮೇಳ ರಾಗಮಾಲಿಕೆಯಲ್ಲಿ ರಚಿಸಿದ್ದಾರೆ.
ಕೋಟೀಶ್ವರ ಅಯ್ಯರ್ ರವರು ತಮಿಳಿನಲ್ಲ, ಬಾಲಮುರಳಿಕೃಷ್ಣರವರು ತೆಲುಗಿನಲ್ಲಿ
ಈ ರಾಗದಲ್ಲಿ ಕೃತಿ ರಚಿಸಿದ್ದಾರೆ.
 
ಜ್ಯೋತಿಷ್ಮತಿ-ಈ ರಾಗವು ೬೮ನೆ ಮೇಳಕರ್ತ ಜ್ಯೋತಿಸ್ವರೂಪಿಣಿಯ
ಒಂದು ಜನ್ಯರಾಗ.
 
ಸ ರಿ ಗ ಮ ಮ ಪ ಸ
 
ಆ ಸ ನಿ ದ ಮ ಪ ಮ ಗ ರಿ ಸ
 
ಜ್ಯೋತಿಷ್ಯ-ಷಡ್ಡಗ್ರಾಮದ ಒಂದು ಬಗೆಯ ತಾನ. ಇದು
ದ ಪ ಮ ರಿ ಸ ಎಂಬ ಮಾದರಿಯಲ್ಲಿದೆ.
 
ಜ್ಯೋತೃ ಪ್ರಿಯ-ಈ ರಾಗವು ೫ನೆ ಮೇಳಕರ್ತ ಮಾನವತಿಯ ಒಂದು
ಜನ್ಯರಾಗ,
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
4
 
ಜೋನ್ಸುರಿ ಇದಕ್ಕೆ ಜಾನ್ಸುರಿ ಎಂದು ಹೆಸರು. ಇದು ಹಿಂದೂಸ್ಥಾನಿ
ಸಂಗೀತದ ಒಂದು ರಾಗ, ಇದು ೨೦ನೆ ಮೇಳಕರ್ತ ನಟಭೈರವಿಯ (ಹಿಂದೂಸ್ಥಾನಿ
 
-