2023-06-25 23:30:29 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಮಧ್ಯಮಕಾಲದ ಸಂಗತಿಗಳನ್ನು ಕೇಳಲು ಚೆನ್ನಾಗಿರುತ್ತದೆ. ದ್ವಂದ ಗಾಯನದ
ಸೊಗಸನ್ನು ತಿಳಿದಿದ್ದ ಶ್ರೀ ತ್ಯಾಗರಾಜರು ತಮ್ಮ ಶಿಷ್ಯರನ್ನು ಸೂಕ್ತವಾದ ರೀತಿಯಲ್ಲಿ
ಜೋಡಿಗಳಾಗಿ ಮಾಡಿದ್ದರು. ರಾಮಾಯಣವನ್ನು ಹಾಡಿದ ಲವಕುಶರು ಚರಿತ್ರೆಯ
ಪ್ರಧಮ ದ್ವಂದ್ವಗಾಯಕರು. ಮುತ್ತು ಸ್ವಾಮಿ ದೀಕ್ಷಿತರ ಸಹೋದರರಾದ ಚಿನ್ನ ಸ್ವಾಮಿ
ಮತ್ತು ಬಾಲುಸ್ವಾಮಿ ದೀಕ್ಷಿತರ ಜೋಡಿಗಾಯನವು ಆ ಕಾಲದಲ್ಲಿ ಬಹಳ ಜನಪ್ರಿಯ
ವಾಗಿತ್ತು. ಇತ್ತೀಚಿನ ದಿನಗಳಲ್ಲಿ ದ್ವಂದಗಾಯನಕ್ಕೆ ಹೆಸರಾದವರು ಆಲತ್ತೂರು
ಸಹೋದರರು, ಡಿ ಕೆ. ಪಟ್ಟಮ್ಮ ಮತ್ತು ಅವರ ಸಹೋದರ ಡಿ. ಕೆ ಜಯರಾಮನ್,
ಬಿ ವಿ. ರಾಮನ್ ಮತ್ತು ಬಿ ವಿ. ಲಕ್ಷ್ಮಣನ್, ಬಳ್ಳಾರಿ ಸಹೋದರರು, ರುದ್ರ
ಪಟ್ಟಣಂ
ಣಂ ಸಹೋದರರು, ಬೊಂಬಾಯಿ ಸಹೋದರಿಯರು, ರಾಧಾ ಮತ್ತು ಜಯಲಕ್ಷ್ಮಿ,
ಜಿ. ಎಸ್. ರಾಜಲಕ್ಷ್ಮಿ ಮತ್ತು ಕಮಲ. ಗಂಗೂಬಾಯಿ ಹಾನಗಲ್ ಮತ್ತು
ಕೃಷ್ಣಾಕ
ಹಾನಗಲ್.
೪೨೫
ಜೋಡಿ ತಂಬೂರಿ ಕೆಲವು ಸಂಗೀತ ವಿದ್ವಾಂಸರು ಒಂದು ತಂಬೂರಿಗೆ
ಬದಲು ಎರಡು ತಂಬೂರಿಗಳನ್ನು ಶ್ರುತಿಗಾಗಿ ಬಳಸುತ್ತಾರೆ. ಹಿಂದೂಸ್ಥಾನಿ
ಗಾಯಕರೆಲ್ಲರೂ ಸಾಮಾನ್ಯವಾಗಿ ಎರಡು ತಂಬೂರಿಗಳನ್ನು ಬಳಸುತ್ತಾರೆ. ಒಂದು
ತಂಬೂರಿಯನ್ನು ರೂಢಿಯಂತೆ ಅಂದರೆ ಮಂದ್ರ ಪಂಚಮ, ಎರಡು ಮಧ್ಯಸ್ಥಾಯಿ
ಷಡ್ವಗಳು ಮತ್ತು ಮಂದ್ರ ಷಡ್ಡಕ್ಕೆ ಶ್ರುತಿ ಮಾಡುತ್ತಾರೆ. ಮತ್ತೊಂದರಲ್ಲಿ ಸಾರಣಿ
ಮತ್ತು ಮಂದರವನ್ನು ಮೊದಲಿನಂತೆ ಶ್ರುತಿಮಾಡಿ, ಪಂಚಮದ ತಂತಿಯನ್ನು ಕಾಕಲಿ
ನಿಷಾದಕ್ಕೆ ಶ್ರುತಿಮಾಡುತ್ತಾರೆ. ಎರಡು ತಂಬೂರಿಗಳು ಒಂದೇ ಆಕಾರವಾಗಿದ್ದು
ಇಬ್ಬರು ಮಾಡುತ್ತಾರೆ.
ಜೋಡಣಿ-ಇದು ಪುರಾತನ ಸಂಗೀತ ಗ್ರಂಧಗಳಲ್ಲಿ ಉಕ್ತವಾಗಿರುವ ಒಂದು
ಬಗೆಯ ವಾದ್ಯ ಪ್ರಬಂಧ.
8
ಜೋಡಿನಾಟ್ಯ ಅಥವಾ ನಟನ-ಇಬ್ಬರು ಕಲಾವಿದರಿಂದ ಪ್ರದರ್ಶಿ
ಸಲ್ಪಡುವ ನಾಟ್ಯ.
ಜೋಡಿಮಾಟು-ವೀಣೆಯ ತಂತಿಯನ್ನು ತೋರುಬೆರಳು ಮಧ್ಯದ ಬೆರಳಿ
ನಿಂದ ಮೇಲಕ್ಕೆ ಅಥವಾ ಕೆಳಕ್ಕೆ ಮಾಟುವುದಕ್ಕೆ ಜೋಡಿ ಮಾಟು ಎಂದು ಹೆಸರು.
ಹೀಗೆ ಮಾಟುವಾಗ ತಂತಿಗಳನ್ನು ಸೇರಿಸಿ ಮಾಡಿದಾಗ ಕ್ರ, ತ್ರ. ಶ್ರೀ ಎಂಬಂತೆ
ಶಬ್ದಗಳುಂಟಾಗುತ್ತವೆ. ಜೋಡಿ ಮಾಟಿಗೆ ಸಮಮಾಟೆಂದು ಹೆಸರು.
ಮಾಟಿನಲ್ಲಿ ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಒಂದಾದನಂತರ ಇನ್ನೊಂದ
ರಂತೆ ಮಾಟುವುದು.
ಜೋಡಿವಾದ-ಒಂದೇ ವಿಧವಾದ ಎರಡು ವಾದ್ಯಗಳ ಕಚೇರಿಗೆ ಜೋಡಿ
ವಾದ್ಯ ಕಚೇರಿ ಎಂದು ಹೆಸರು. ಎರಡು ನಾಗಸ್ವರಗಳು, ಎರಡು ವೀಣೆಗಳು,
ಎರಡು ಪಿಟೀಲುಗಳು ಅಥವಾ ಎರಡು ಮೃದಂಗಗಳಿರುವ ಕಚೇರಿ ಇದಕ್ಕೆ ನಿದರ್ಶನ.