This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪ್ರಕಟಿಸಿದರು. ಇದು ಒಂದು ಮುಖ್ಯವಾದ ಶಾಸ್ತ್ರ ಗ್ರಂಧವೆಂದು ಮನ್ನಣೆ
ಪಡೆಯಿತು. ಲವಿನ ಭಾತ್ಸಂಡೆ ಸಂಗೀತ ವಿಶ್ವವಿದ್ಯಾನಿಲಯವು ಇವರಿಗೆ
ಮಾಸ್ಟರ್ ಆಫ್ ಮ್ಯೂಸಿಕ್, ವಾದ್ಯ ನಿಪುಣ ಎಂಬ ಗೌರವ ಪದವಿಯನ್ನು ನೀಡಿ
ಗೌರವಿಸಿತು ಅದೇ ವಿಶ್ವವಿದ್ಯಾಲಯದಲ್ಲಿ ೧೯೩೮ ರಿಂದ ಹದಿನೆಂಟು ವರ್ಷಗಳ
ಅಧ್ಯಾಪಕರಾಗಿ ಸೇವೆಸಲ್ಲಿಸಿ ೧೯೫೩ರಲ್ಲಿ ಆಕಾಶವಾಣಿಗೆ ಸೇರಿ ಲಕ್ಷ್ಮಿ, ಬೊಂಬಾಯಿ
ಮತ್ತು ಕಲ್ಕತ್ತ ಕೇಂದ್ರಗಳ ಸಂಗೀತ ನಿರ್ದೇಶಕರಾಗಿದ್ದಾರೆ.
ವಾದನವು ಮಿಂಚಿನಂತೆ
 
ಹೊಳಪುಳ್ಳದು
 
ಇವರ ಪಿಟೀಲು
ಲಲಿತವೂ ಮಧುರವೂ ಆಗಿದೆ.
ಬಿಸ್ಮಿಲ್ಲಾಖಾನರೊಡನೆ ಇವರು ನುಡಿಸಿರುವ ಪಿಟೀಲುವಾದನದ ಎಲ್. ಪಿ. ರೆಕಾರ್ಡು
ಗಳಿಗೆ ದೇಶವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಇವರು ಪಂಡಿತ್ ಓಂಕಾರ್‌ನಾಥ್
 
೪೨೪
 
ಠಾಕುರ್, ಬಡೇಗುಲಾಂ ಆರಿಖಾನ್, ಅಮಿರ್‌ಖಾನ್ ಮತ್ತು ಇತರ ಎಲ್ಲಾ
ಸಮಕಾಲೀನ ವಿದ್ವಾಂಸರಿಗೆ ಪಕ್ಕವಾದ್ಯ ನುಡಿಸಿದ್ದಾರೆ. ಇವರಿಗೆ ಕರ್ಣಾಟಕ
ಸಂಗೀತದಲ್ಲಿ ಪಾಂಡಿತ್ಯವಿದೆ. ೧೯೪೮ರಲ್ಲಿ ಹೀರಾಬಾಯಿ ಬರೋಡೆಕರ್‌ರವರೊಂದಿಗೆ
ಪೂರ್ವ ಆಫ್ರಿಕಾದ ದೇಶಗಳಿಗೂ, ಭಾರತ ಸರ್ಕಾರದ ನಿಯೋಗದ ಸದಸ್ಯರಾಗಿ
ನೇಪಾಳಕ್ಕೆ ಹೋಗಿ ಕಚೇರಿಗಳಲ್ಲಿ ನುಡಿಸಿದರು. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ
ಭೇಟಿನೀಡಿದ ಪಿಟೀಲು ವಿದ್ವಾಂಸರಲ್ಲಿ ಇವರೇ ಮೊದಲಿಗರು. ೧೯೬೮ರಲ್ಲಿ
 
ಕ್ಯಾಲಿಫೋರ್ನಿಯಾದ ಆಲಿ ಅಕ್ಟರ್‌ಖಾನರ ಸಂಗೀತ ಕಾಲೇಜಿನ ಅಧ್ಯಾಪಕರಾಗಿ
ಗಾಯನ, ಪಿಟೀಲು ಮತ್ತು ಕೊಳಲುವಾದನದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ
ನೀಡಿದರು. ೧೯೭೦ರಲ್ಲಿ ಯು. ಕೆ., ಯೂರೋಪ್ ಮತ್ತು ಯು. ಎಸ್. ಎ ಗೆ
ಎರಡನೆಯ ಸಲ ಭೇಟಿಕೊಟ್ಟರು. ಇವರು ಪಿಟೀಲು ವಾದ್ಯದ ಮಾಂತ್ರಿಕರು.
ಜೋಗಿ-ಈ ರಾಗವು ೧೫ನೆ ಮೇಳಕರ್ತ ಮಾಯಾ ಮಾಳವಗೌಳದ
ಒಂದು ಜನ್ಯರಾಗ,
 
ಸ ರಿ ಮ ಪ ದ ಸ
 
ಸ ದ ನಿ ದ ಸ ಮ ರಿ ಮ ಗ ರಿ ಸ
 
ಜೋಗಿಭೈರವಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ನಿ ದ ನಿ ಸ
ಸ ದ ಪ ಮ ರಿ ಗ ರಿ ಸ
 

 
ಜೋಗಿಯಾ-ಇವು ಹಿಂದೂಸ್ಥಾನಿ ಸಂಗೀತ ಪದ್ಧತಿಯ ಭೈರವಿ ಥಾಟ್‌
(ಮಾಯಾಮಾಳವ ಗೌಳ ಮೇಳ) ಒಂದು ಜನ್ಯರಾಗ, ಇದು ಕರ್ಣಾಟಕ ಸಂಗೀತದ
ಸಾವೇರಿ ರಾಗಕ್ಕೆ ಸಮನಾದ ರಾಗ,
 
ಜೋಡಿಗಾಯನ (ದ್ವಂದ್ವ ಗಾಯನ)-ಇಬ್ಬರು ಗಾಯಕರು ಕೂಡಿ
ಹಾಡುವುದಕ್ಕೆ ದ್ವಂದ್ವಗಾಯನವೆಂದು ಹೆಸರು. ದ್ವಂದ್ವ ಗಾಯನದಲ್ಲಿ ಕೃತಿಗಳನ್ನೂ,