This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಪ್ರಾರಂಭ ಭಾಗವು ಹಿಂದುಸ್ಥಾನಿ ಬೇಹಾಗ್ ರಾಗದಲ್ಲಿದೆ. ಈ ಬಗೆಯ ಸ್ವಾತಂತ್ರ್ಯಕ್ಕೆ

ಜಾವಳಿಯಲ್ಲಿ ಮಾತ್ರ ಅವಕಾಶವುಂಟು.
 
೪೧೯
 

ಪದಗಳಲ್ಲಿರುವಂತೆ ಜಾವಳಿಗಳಲ್ಲಿ ನಾಯಿಕಾ, ನಾಯಕ ಮತ್ತು ಸಖಿ ಎಂಬ

ಮೂರು ಪಾತ್ರಗಳಿವೆ.

ಇವು ಸಾಹಿತ್ಯದ ಭಾವವನ್ನು ಅನುಭವಿಸಲು ಯಾರು

ಯಾರನ್ನು ಕುರಿತು ಸಂಬೋಧಿಸುತ್ತಾರೆ ಎಂಬುದನ್ನು ತಿಳಿಯುವುದು ಅತ್ಯವಶ್ಯಕ.

ಪದಗಳಲ್ಲಿರುವ ಗಂಭೀರವಾದ ನಾಯಿಕಾ-ನಾಯಕ ಭಾವವು ಜಾವಳಿಗಳಲ್ಲಿರುವುದಿಲ್ಲ.

ಕೆಲವು ಜಾವಳಿಗಳ ಸಾಹಿತ್ಯವೂ ಗ್ರಾಮ್ಯವಾಗಿದೆ. ಪಾರಿಪೋವಲೇರಾ ಎಂಬ ಬಿಲಹರಿ

ರಾಗದ ಜಾವಳಿಯ ಸಾಹಿತ್ಯವು ಸ್ವರಸಾಹಿತ್ಯಾಲಂಕಾರಗಳಿಂದ ಕೂಡಿದೆ.

ಗಳಲ್ಲಿ ಚಿಟ್ಟೆ ಸ್ವರಗಳಿರುವುದಿಲ್ಲ ಆದರೆ ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ಯರು

ರಚಿಸಿರುವ ಸುರಟರಾಗದ ವೇಗ ನೀವು ನಾನಿರಮ್ಮನವೇ ಎಂಬ ಜಾವಳಿಯಲ್ಲಿ ಚಿಟ್ಟೆ

ಸ್ವರವನ್ನು ಅಳವಡಿಸಿದ್ದಾರೆ. ಮಣಿ ಪ್ರವಾಳ ಸಾಹಿತ್ಯವನ್ನು ಹೊಂದಿರುವ ಕೃತಿ

ಗಳಂತೆ ಕರೂರು ಶಿವರಾಮಯ್ಯನವರು ತೆಲುಗು ಭಾಷೆಯೊಡನೆ ಆಂಗ್ಲ ಭಾಷೆಯನ್ನು

ಬಳಸಿ ಜಾವಳಿಯೊಂದನ್ನು ರಚಿಸಿದ್ದಾರೆ.
 
ಜಾವಳಿ
 
2
 

ಜಾವಳಿಗಳು ಕಮಾಚ್, ಬೇಹಾಗ್, ಫರಜು, ಕಾಸಿ, ಜಂಜೂಟ, ಹಮಾರ್

ಕಲ್ಯಾಣಿ, ಸಾರಂಗ, ಆನಂದ ಭೈರವಿ, ನಾದನಾಮಕ್ರಿಯೆ, ಹುಸೇನಿ, ಬೇಗಡೆ,

ಸಿಂಧು ಭೈರವಿ, ಮಾಂಜಿ, ಸುರಟ, ದೇಶೀಕಾಪಿ, ಭೈರವಿ, ಕಾನಡಾ, ಮೋಹನ,

ಆಹಿರಿ, ಮುಖಾರಿ, ಕೇದಾರ, ದೇಶೀತೋಡಿ, ವಸಂತ, ಯಮುನಾ ಕಲ್ಯಾಣಿ,

ಆಭೇರಿ, ದರ್ಬಾರ್, ಪೂರ್ವಿ, ನೀಲಾಂಬರಿ, ಪಂತುವರಾಳಿ, ಅಠಾಣ, ಧನ್ಯಾಸಿ,

ಶಹನಾ, ಷಣ್ಮುಖಪ್ರಿಯ, ಸಿಂಹೇಂದ್ರ ಮಧ್ಯಮ, ಕಾಂಭೋಜಿ, ರೇಗು, ಶ್ರೀ

ಬಿಲಹರಿ ಇತ್ಯಾದಿ ರಾಗಗಳಲ್ಲಿವೆ ತೆಲುಗಿನಲ್ಲಿ ಧರ್ಮಪುರಿ ಸುಬ್ಬರಾಯರು ಪಟ್ಟಾಭಿ

ರಾಮಯ್ಯ, ಸ್ವಾತಿತಿರುನಾಳ್ ಮಹಾರಾಜರು, ಚಂದ್ರಶೇಖರಶಾಸ್ತ್ರಿ, ವೆಂಕಟ

ರಾಮಯ್ಯ, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ರಾಮನಾಡ್ ಶ್ರೀನಿವಾಸ

ಅಯ್ಯಂಗಾರ್, ವಿದ್ಯಾಲ

ತಳ್ಳೂರು ಶಿಂಗ್ರಾಚಾರ

ಸಹೋದರರು ದಾಸುಶ್ರೀರಾಮುಲು, ಯಜ್ಞನಾರಾಯಣಶಾಸ್ತ್ರಿ ಮುಂತಾದುವರು

ರಚಿಸಿರುವ ಜಾವಳಿಗಳು ಪ್ರಸಿದ್ಧವಾಗಿವೆ.
 
ನಾರಾಯಣಸ್ವಾಮಿ,
 

ಕನ್ನಡದಲ್ಲಿ ಹಲವು ಜಾವಳಿಗಳಿವೆ. ಸುಮಾರು ೧೬-೧೭ನೆ ಶತಮಾನದಲ್ಲಿ

ಕನ್ನಡದಲ್ಲಿ ಜಾವಳಿಗಳ, ಬಳಕೆ ಪ್ರಾರಂಭವಾಯಿತೆನ್ನಬಹುದು.

ಮೈಸೂರಿನ

ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವತಃ ವಿದ್ವಾಂಸರಾಗಿದ್ದು ಸಾಹಿತ್ಯ, ಸಂಗೀತ,

ನೃತ್ಯ ಕಲಾರಾಧಕರೂ ಪೋಷಕರೂ ಆಗಿದ್ದರು. ಇವರೂ ಇವರ

ಲಿಂಗರಾಜರು ಅನೇಕ ತತ್ವ ಮತ್ತು ಶೃಂಗಾರ ಜಾವಳಿಗಳನ್ನು ರಚಿಸಿದರು.

ರಾಯರು, ವ್ಯಾಸರಾಯರು, ಪುರಂದರದಾಸರು ವಾದಿರಾಜರು ಕನ್ನಡದ ಜಾವಳಿಗಳ

ಆದಿಪುರುಷರು. ಇವು ಕೃತಿಯಂತಿದ್ದರೂ ನಿರೂಪಣೆಗಳು ಬೇರೆ. ಕನ್ನಡನಾಡಿನ
 
ಅಳಿಯ
 
ಶ್ರೀಪಾದ