2023-07-05 06:08:58 by jayusudindra
This page has been fully proofread once and needs a second look.
ಮಧ್ಯಭಾಗವು ಉಬ್ಬಾಗಿದ್ದು ಮಧ್ಯದಲ್ಲಿ ರಂಧ್ರವಿರುತ್ತದೆ. ಈ ರಂಧ್ರದಲ್ಲಿ ವಾದ್ಯವನ್ನು
ಬೆರಳುಗಳಿಂದ ಹಿಡಿದು ನುಡಿಸಲು ಅನುಕೂಲವಾಗುವಂತೆ ದಪ್ಪನಾದ ಹತ್ತಿಯ
ದಾರವನ್ನು ಗಂಟು ಹಾಕಿರುತ್ತದೆ. ಓಲಗದೊಂದಿಗೆ ಬಳಸುವ ತಾಳದ ಬಿಲ್ಲೆಗಳು
ಮಧ್ಯದಲ್ಲಿ ಬಟ್ಟಲಿನಂತಿದ್ದು ಅಂಚಿನಲ್ಲಿ ಚಪ್ಪಟೆಯಾಗಿರುತ್ತದೆ. ನೃತ್ಯಗೋಷ್ಠಿಗಳಲ್ಲಿ
ಜಾಲರಾ ಬಳಸುತ್ತಾರೆ. ಮೃದಂಗದೊಡನೆ ತಾಳಜತಿಗಳನ್ನು ಜಾಲಾದಲ್ಲಿ ಸೋಸಲೆ
ರಾಮದಾಸರು
ನುಡಿಸುತ್ತಿದ್ದರು. ರಲ್ಲರಿ ದೊಡ್ಡ
ತಮಿಳುನಾಡಿನ ತಂಜಾವೂರು ಜಿಲ್ಲೆಯ ನಾಗಪಟ್ಟಣದ ಜಾಲಾ
ಗೋಪಾಲಯ್ಯರ್ ಈ ವಾದ್ಯವನ್ನು ನುಡಿಸುವುದರಲ್ಲಿ ಪ್ರವೀಣರಾಗಿದ್ದರು.
ಜಾವಡ-ಇದೊಂದು ದೇಶ್ಯ ಪದ ಮಧ್ಯಯುಗದ ಗೀತೆಗಳ ಎರಡನೆಯ
ಭಾಗವನ್ನು ಸೂಚಿಸುತ್ತದೆ. ರಾಗಾಂಗರಾಗ ಲಕ್ಷಣ ಗೀತೆಗಳಲ್ಲಿ ಸೂತ್ರ ಖಂಡದ
ಅಥವಾ ಪ್ರಥಮ ಭಾಗದ ನಂತರ ಅಂತರಿಯ ತರುವಾಯ ಕಂಡು ಬರುವ ವಿಭಾಗ,
ಜಾವಡಿ
ಕನ್ನಡದ ಪ್ರೇಮಗೀತೆ. ಇದೊಂದು ಹಾಡಿನ ವದ್ಧತಿ ಎಂದು
ಕನಕದಾಸರು ಮೋಹನ ತರಂಗಿಣಿಯಲ್ಲಿ ಹಾಡಿದ್ದಾರೆ. ಶೃಂಗಾರರಸ ಪ್ರಧಾನವಾದ
೪೦೮
ಜಾವಳಿ
ಜಾವಳಿಯು ಕನ್ನಡದಲ್ಲಿ ಹದಿನೈದನೆಯ ಶತಮಾನದಲ್ಲಿ ಈಗಿನ
ರೂಪನ್ನು ಪಡೆದು ಕೊಂಡಿತ್ತು. ಇದು ಕನ್ನಡದ ಜಾವಡಿ ಎಂಬ ಲಘುವೋಮ
ಪದಗಳಂತೆಯೇ ಶೃಂಗಾರ ರಸ ಪ್ರಧಾನವಾದ
ತಿಳಿಯಾದ ಸಾಹಿತ್ಯವುಳ್ಳ ರಚನೆಗಳು. ಪದಗಳ ಸಾಹಿತ್ಯವು ದೈವಿಕ ಪ್ರೇಮದ
ವಿಷಯವಾಗಿದೆ. ಜಾವಳಿಯ ಸಾಹಿತ್ಯದ ವಿಷಯವು ಐಹಿಕ,
ರಂಜನೀಯವಾಗಿಯೂ ಮಾತು ಭಾವಪೂರ್ಣವಾಗಿರುತ್ತದೆ. ಇವು ಸಾಮಾನ್ಯವಾಗಿ
ಮಧ್ಯಮ ಕಾಲದ ರಚನೆಗಳು, ರಂಜಕವಾದ ದೇಶ್ಯರಾಗಗಳಲ್ಲಿ ಮತ್ತು ಆದಿ,
ರೂಪಕ ಮತ್ತು ಛಾಪುತಾಳಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಇವು ಪಲ್ಲವಿ,
ಅನುಪಲ್ಲವಿ ಮತ್ತು ಚರಣಗಳಿಂದ ಕೂಡಿವೆ. ಕನ್ನಡ ಮತ್ತು ತೆಲುಗು ಭಾಷೆಗಳೆರಡ
ರಲ್ಲೂ ಹಲವು ಜಾವಳಿಗಳಿವೆ. ಇವುಗಳನ್ನು ಹಿಂದೂಸ್ಥಾನಿ ಪದ್ಧತಿಯ ಗಜಲ್‌ಗಳಿಗೆ
ರಾಗಕ್ಕೆ ವಿಶೇಷ ಮೆರುಗನ್ನು ಕೊಡಲು ಕೆಲವು ರಚನಕಾರರು ಲಕ್ಷಣಶಾಸ್ತ್ರದ
ನಿಯಮಗಳನ್ನು ಮಾರಿರುವುದುಂಟು. ಬೇರೊಂದು ರಾಗದ ಛಾಯೆಯನ್ನು
ಉದಾ : ಮುಖಾರಿರಾಗದ
ಏಮಂದುನೆ ಮುದ್ದು ಬಾಲಾಮಣಿ ಎಂಬ ಜಾವಳಿಯ ಚರಣದಲ್ಲಿ ಹಿಂದೂಸ್ಥಾನಿ
ಕಾಪಿರಾಗದ ಛಾಯೆಯನ್ನು ಕೊಡುವ ಸ್ವರಸಮೂಹವನ್ನು ಸೇರಿಸಿದೆ. ಇದೇ ರೀತಿ
ಖಮಾಜ್‌ರಾಗದ ಅಪದೂರು ಕುಲೊನೈತಿನೇ ಎಂಬ ಜಾವಳಿಯಲ್ಲಿ ಚರಣದ