2023-07-05 06:07:40 by jayusudindra
This page has been fully proofread once and needs a second look.
ಈ ಲಘುಗೀತಗಳನ್ನು ರಚಿಸಿರುವುದರಿಂದ ಇವುಗಳಿಗೆ ಒಂದು ಮಹತ್ತಾದ ಸ್ಥಾನವಿದೆ.
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಲಘು ಸಂಗೀತವು ತನ್ನದೇ ಆದ ವಿಶಿಷ್ಟ
ಸ್ಥಾನವನ್ನು ಪಡೆದಿದೆ
ಇದು ಜಾನಪದ ಮತ್ತು ಶಾಸ್ತ್ರೀಯ ಸಂಗೀತದ ಮಧ್ಯದ
ಸ್ಥಾನವನ್ನು ಪಡೆದಿದೆ. ಇದು ಸಕಲ ಜನರಂಜನೀಯವಾದುವು.
ಕುಪ್ಪಯ್ಯರ್ ವಿರಚಿತ ಬಿಲಹರಿ ರಾಗದ (ಆದಿ) ಇಂತಚೌಕ ಮತ್ತು ಸ್ವಾತಿ ತಿರುನಾಳ್
ಮಹಾರಾಜರ ಶಂಕರಾಭರಣ ರಾಗದ (ಆಟತಾಳ) ಚಲಮೇಲ ಎಂಬ ವರ್ಣದ
ಕೊನೆಯ ಎತ್ತುಗಡೆ ಸ್ವರಗಳನ್ನು ಈ ಸಂಬಂಧದಲ್ಲಿ ಪರಿಶೀಲಿಸಬಹುದು.
ಜಾನುದ್ವಯ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಸ ರಿ ಗ ಮ ನಿ ಸ
ಸ ದ ಪ ಮ ಗ ರಿ ಸ
೪೧೭
ಅ :
ಸ ದ ಪ ಮ ಗ ರಿ ಸ
ಜಾರುವಾ
ಜಾರು ಅಧವಾ ವರಿಕ ಶೈಲಿಯಲ್ಲಿ ವಾದ್ಯವನ್ನು
ನುಡಿಸುವುದು ಜಾರುವಾದ್ಯ. ಬೆರಳುಗಳಿಂದ ಸ್ವರಸ್ಥಾನಗಳನ್ನು ಮುಟ್ಟಿ ಶುದ್ಧ
ಸ್ವರಗಳನ್ನು ನುಡಿಸುವ ಪಿಡಿವಾದನ ಶೈಲಿಗೆ ವಿರುದ್ಧವಾದ ಶೈಲಿಯು ಜಾರುಶೈಲಿ.
ಇವೆರಡು ಶೈಲಿಗಳು ಪಿಟೀಲು ವಾದನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿವೆ.
ಜಾಲಪ್ರಬಲ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ, ಇದು ಮಧ್ಯಮಾಂತರಾಗ
ಮ ಪ ದ ನಿ ಸ ರಿ ಗ ಮ
ಮ ಗ ರಿ ಸ ನಿ ದ ಪ ಮ
ಜಾಲಿಬಿಂಚಿ
ಜಾಲಿಬಿಂಚಿಯವರು
ಸುಮಾರು ೫೪ ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಜಾಲಿಬಿಂಚಿಯಲ್ಲಿ ಜನಿಸಿದರು.
ಇವರ ತಂದೆ ವೀರಭದ್ರಯ್ಯ ಕಲಾಪ್ರೇಮಿಯಾಗಿದ್ದರು. ಪ್ರಾರಂಭದಲ್ಲಿ ಮಡಿವಾಳ
ಗಂಗಪ್ಪ ಮತ್ತು ಕೊರೀ ಸುಗರಪ್ಪ ಎಂಬುವರಲ್ಲಿ ಅಭ್ಯಾಸಮಾಡಿ ೧೩ನೆ ವಯಸ್ಸಿನಿಂದ
ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿ ಅವರಲ್ಲಿ ೧೯೪೮ರ ವರಗೆ
ಸಂಗೀತ ವಿದ್ಯಾಭ್ಯಾಸ ಮಾಡಿ ವಿದ್ವಾಂಸರಾದರು ಅನೇಕ ಪ್ರಮುಖ ಕೇಂದ್ರಗಳಲ್ಲಿ
ಕಚೇರಿ ಗಾಯನಮಾಡಿ ಹೆಸರುವಾಸಿಯಾಗಿದ್ದಾರೆ. ಖ್ಯಾಲ್, ಠುಮರಿ,
ದೇವರನಾಮ ಮತ್ತು ವಚನಗಳನ್ನು ಬಹಳ ಭಾವಪೂರ್ಣವಾಗಿ ಹಾಡುತ್ತಾರೆ
P
ಜಾ
ಇದು ಹರಿಕಧಾವಿದ್ವಾಂಸರೂ, ಭಜನಗೋಷ್ಠಿಯವರೂ ತಾಳ
ನಿರ್ಣಯಕ್ಕಾಗಿ ಉಪಯೋಗಿಸುವ ವಾದ್ಯ. ಸಮ ಅಳತೆಯ ಎರಡು ಕಂಚಿನ
ಬಿಲ್ಲೆಗಳೇ ಈ ವಾದ್ಯ. ಒಂದನ್ನೊಂದು ತಟ್ಟಿದಾಗ ಇವು ಇಂಪಾದನಾದವನ್ನು