This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
(೨) ಜಾತಿ ಎಂದರೆ ತಾಳದ ದಶಾಂಗಗಳಲ್ಲಿ ಒಂದು ಅಂಗ ಇದು ಚತುರಶ್ರ ಜಾತಿ
ಲಘು, ತಿಶ್ರಜಾತಿಲಘು, ಮಿಶ್ರಜಾತಿಲಘು, ಖಂಡಜಾತಿ ಲಘು ಮತ್ತು ಸಂಕೀರ್ಣ
ಜಾತಿ ಎಂಬ ಐದು ಬಗೆಯ ಲಘುಗಳಿಗೆ ಅನ್ವಯಿಸುತ್ತದೆ.
 
೪೪
 
(೩) ಪುರಾತನ ಕಾಲದಲ್ಲಿ ಜಾತಿ ಎಂದರೆ ರಾಗವೆಂದರ್ಥವಿತ್ತು. ರಾಮಾಯಣದಲ್ಲಿ
ಇದು ಉಕ್ತವಾಗಿದೆ. ಗ್ರಹ, ಅಂಶ, ತಾರ, ಮಂದ್ರ, ನ್ಯಾಸ, ಅಪನ್ಯಾಸ, ಅಲ್ಪತ್ವ,
ಬಹುತ್ವ, ವಾಡವ ಮತ್ತು ಔಡವ ಎಂಬ ಜಾತಿಯ ಹತ್ತು ಲಕ್ಷಣಗಳನ್ನು ಒಳಗೊಂಡಿದೆ.
ಈಗ ರಾಗವನ್ನು ೭೨ ಲಕ್ಷಣಗಳಿಗನುಸಾರವಾಗಿ ವಿಮರ್ಶೆ ಮಾಡುವಷ್ಟು ಶಾಸ್ತ್ರಜ್ಞಾನವು
ಬೆಳೆದಿದೆ. ಪುರಾತನ ಸಂಗೀತ ಪದ್ಧತಿಯಲ್ಲಿ ಏಳು ಶುದ್ಧ ಜಾತಿಗಳನ್ನು ಹೇಳಿದೆ :-
ಪಾಡ್ಡಿ, ನೈಷದಿ, ಧೈವತಿ, ಆರ್ಷೋಭಿ-ಇವು ಷಡ್ಡ ಗ್ರಾಮಕ್ಕೆ ಸೇರಿವೆ.
ಮಧ್ಯಮ ಮತ್ತು ಪಂಚಮವು ಮಧ್ಯಮ ಗ್ರಾಮಕ್ಕೆ ಸೇರಿವೆ.
 
ಗಾಂಧಾರಿ,
 
ಎತ್ತಿಸ್ಟರ ಸಾಹಿತ್ಯಗಳು ತಮಿಳುನಾಡು ಸರ್ಕಾರದ ಪ್ರಾಚ್ಯ ಹಸ್ತ
ಪ್ರತಿಗಳ ಭಂಡಾರದಲ್ಲಿ ಡಿ. ನಂ. ೨೫೩೬ನೆ ತೆಲುಗು ಹಸ್ತಪ್ರತಿಯಲ್ಲಿ ಪ್ರಸಿದ್ಧ ವಾಗ್ಗೇಯ
ಕಾರರಾದ ಮುತ್ತು ಸ್ವಾಮಿ ದೀಕ್ಷಿತರು ಕೆಲವು ಜನಪ್ರಿಯವಾದ ಪಾಶ್ಚಾತ್ಯರಾಗ
ಗಳಿಗೆ ರಚಿಸಿರುವ ಸಂಸ್ಕೃತ ಸಾಹಿತ್ಯವನ್ನು ಕೊಟ್ಟಿದೆ. ಇವುಗಳಲ್ಲಿ ಅವರ
ಗುರುಗುಹ ಎಂಬ ಅಂಕಿತವಿದೆ ಯಾವ ಯಾವ ಇಂಗ್ಲಿಷ್ ಮತ್ತು ಫ್ರೆಂಚ್
ಹಾಡುಗಳಿಗೆ ಸಂಸ್ಕೃತ ವದಗಳನ್ನು ನೀಡಿದರೋ ಆ ಹಾಡುಗಳ ಹೆಸರನ್ನು
ಕೊಡಲಾಗಿದೆ. ಆ ಹಾಡುಗಳಲ್ಲಿ ಕೆಲವು, ಪಾಶ್ಚಾತ್ಯ ಮತ್ತು ಭಾರತೀಯ
ಸ್ವರಲಿಪಿ ಸಹಿತ ಇರುವುದರಿಂದ ಅವುಗಳ ಸಂಸ್ಕೃತ ಸಾಹಿತ್ಯವನ್ನು ಹಾಡುವುದು
ಸುಲಭ. ಈ ಸಾಹಿತ್ಯವನ್ನು ದೀಕ್ಷಿತರು ೧೮೩೩ಕ್ಕೂ ಹಿಂದೆಯೇ ರಚಿಸಿದರು
ಹಸ್ತಪ್ರತಿಯನ್ನು ಬಹು ಸುಂದರವಾಗಿ ಬರೆದವರು ವಾಲಾಜಪೇಟೆ ವೆಂಕಟರಮಣ
ಭಾಗವತರ ಮನೆತನಕ್ಕೆ ಸೇರಿದ ಸಪ್ಪಯ್ಯ ಮತ್ತು ಶೇಷಯ್ಯ ಎಂಬುವರು.
ಸ್ವರ ಸಾಹಿತ್ಯವಲ್ಲದೆ ಈ ಹಸ್ತಪ್ರತಿಯಲ್ಲಿ ಕೆಲವು ರಚನೆಗಳಿವೆ. ಅವು :-
ಜಾನಕಿರಾಘವಮು, ಆದಿಲಕ್ಷ್ಮಿವಿಲಾಸಮು, ಆನಂದ ಸುಂದರಿ ಚಾತುರ್ಯಲೀಲಾ
ವಿಲಾಸಮು, ಸದಾನಂದಯೋಗಿ ಶತಕನು, ಕಾಳಹಸ್ತಿ ಶತಕಮು, ಮತ್ತು
ಶಿವಮುಕುಂದ ಶತಕವು, ಈ ಹಸ್ತಪ್ರತಿಯಲ್ಲಿ ಹೆಸರಿಸಿರುವ ಬ್ರೌನ್ ಎಂಬ
ಆಂಗ್ಲವಿದ್ವಾಂಸನು ತೆಲುಗು ನಿಘಂಟಿನ ಪ್ರಸಿದ್ಧ ಕರ್ತೃ.
 

 
ದೀಕ್ಷಿತರು ತಮ್ಮ ಕಿರಿಯ ಸೋದರ ಬಾಲುಸ್ವಾಮಿ ದೀಕ್ಷಿತರಿಂದ ಪಾಶ್ಚಾತ್ಯ
ಸಂಗೀತದ ಪರಿಚಯವನ್ನು ಪಡೆದರು. ಬಾಲು ಸ್ವಾಮಿಯು ಮದ್ರಾಸಿನ ಸೇಂಟ್
ಜಾರ್ಜ್ ಕೋಟೆಯ ಬ್ಯಾಂಡ್ ಮಾಸ್ಟರನಿಂದ ಪಾಶ್ಚಾತ್ಯ ರೀತಿಯ ಪಿಟೀಲು
ವಾದನವನ್ನು ಕಲಿತು ಅದನ್ನು ಕರ್ಣಾಟಕ ಸಂಗೀತಕ್ಕೆ ಪಕ್ಕವಾದ್ಯವನ್ನಾಗಿ
ನುಡಿಸಲು ಅಳವಡಿಸಿಕೊಂಡು, ಈ ವಾದ್ಯದ ಉಪಯೋಗ ಮತ್ತು ಸಾಧ್ಯತೆಯನ್ನು
ಪ್ರಪ್ರಥಮವಾಗಿ ತೋರಿಸಿಕೊಟ್ಟರು.