This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಯಾಭಾಗವತರ್ ತ್ಯಾಗರಾಜರ ಒಬ್ಬ ಮುಖ್ಯ ಶಿಷ್ಯರು.
ಪಲ್ಲವಿ ಹಾಡುವುದರಲ್ಲಿ ಅದ್ವಿತೀಯ ವಿದ್ವಾಂಸರಾಗಿದ್ದರು. ಪಿಟೀಲು ಮತ್ತು
ವೀಣೆಯ ವಿದ್ವಾಂಸರಾಗಿದ್ದರು.
 

 
ಅಯ್ಯರ್‌ವಾಳ್ ತಮಿಳುನಾಡಿನಲ್ಲಿ ತ್ಯಾಗರಾಜರನ್ನು ಅಯ್ಯರ್‌ವಾಳ್
ಎಂದು ಕರೆಯುತ್ತಾರೆ. ಅಯ್ಯರ್‌ವಾಳ್ ಕೃತಿ ಎಂದರೆ ತ್ಯಾಗರಾಜರ ಕೃತಿ.
 
ಅಯ್ಯಾ ಸಾಮಿ ಮುತ್ತು ಸ್ವಾಮಿ ದೀಕ್ಷಿತರ ಶಿಷ್ಯರು, ತಾನವರ್ಣಗಳು
ಮತ್ತು ಪದಗಳನ್ನು ರಚಿಸಿರುವ ವಾಗ್ಗೇಯಕಾರರು.
 
ಅಯಾವಾಳ್ (೧೮ನೇ ಶ.)-ಶ್ರೀಧರವೆಂಕಟೇಶ್ವರ ದೀಕ್ಷಿತರು ತಮಿಳು
ನಾಡಿನ ತಿರುವಿಶೈನಲ್ಲಿರು ಅಥವಾ ತಿರುವೈಯಲೂರಿನವರು. ಜನರು ಇವರನ್ನು
ಅಯ್ಯಾವಾಳ್ ಎಂದು ಸಂಬೋಧಿಸುತ್ತಿದ್ದರು. ಇವರು ಸದಾಶಿವ ಬ್ರಹ್ಮಂದ್ರ
ಮತ್ತು ಬೋಧೇಂದ್ರ ಸದ್ಗುರು ಸ್ವಾಮಿಯ ಸಮಕಾಲೀನರು. ಇವರು ಹಲವು
ಗ್ರಂಥಗಳನ್ನು ರಚಿಸಿ ಪ್ರಖ್ಯಾತರಾಗಿರುವರು. ಆಖ್ಯಾಷಷ್ಟಿ, ಸಾಹೇಂದ್ರವಿಲಾಸ
ಕಾವ್ಯ, ಶಿವಭಕ್ತಿ ಕಲ್ಪಲತಿಕಾ, ಆರ್ಧಿಹರಸ್ತೋತ್ರ, ಜಂಬುನಾಧಾಷ್ಟಕ, ಗಂಗಾಶತಕ
ಇವು ಅವರ ಕೃತಿಗಳು. ಇವರು ಶ್ರೇಷ್ಠ ದೈವಭಕ್ತರಾಗಿದ್ದರು. ಹಲವು ಭಕ್ತಿ
ಗೀತಗಳನ್ನು ರಚಿಸಿದರು. ನಾಮ ಸಂಕೀರ್ತನೆ ಮತ್ತು ಭಜನ ಪದ್ಧತಿಯನ್ನು
ಜನಪ್ರಿಯವನ್ನಾಗಿಸಿ ಅವುಗಳಿಗೆ ನವಚೈತನ್ಯ ನೀಡಿದರು ಭಕ್ತ ಶ್ರೀಧರವೆಂಕಟ
ಗುರುವರ್ಯ ಎಂಬ ಕೇದಾರಗೌಳರಾಗ ಆದಿತಾಳದ ಕೃತಿಯು ಇವರ ಸ್ತುತಿರೂಪವಾದ
ಕೃತಿ, ಪ್ರತಿವರ್ಷವೂ ತಿರುವಿಶೈನಲ್ಲೂರಿನಲ್ಲಿ ಇವರ ಸ್ಮರಣ ಮತ್ತು ಗೌರವಾರ್ಥವಾಗಿ
ಉತ್ಸವಗಳು ನಡೆಯುತ್ತವೆ. ಇವುಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ.
ಉತ್ಸವದ ೧೦ ದಿನಗಳಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸರ ಕಚೇರಿಗಳಾಗುತ್ತವೆ.
ಜೀವಿತ ಕಾಲದಲ್ಲಿ ಕಾರ್ತಿಕಮಾಸದ (ನವೆಂಬರ್) ಅಮಾವಾಸ್ಯೆಯ ದಿನ ಒಂದು
ಪವಾಡವು ನಡೆಯಿತೆಂದು ಹೇಳುತ್ತಾರೆ. ಅಂದು ಅವರ ತಂದೆಯ ಪುಣ್ಯತಿಧಿ.
ಅದಕ್ಕಾಗಿ ಸಿದ್ಧತೆಗಳಾಗುತ್ತಿದ್ದುವು ಹಸಿವಿನಿಂದ ಕಂಗಾಲಾಗಿದ್ದ ಒಬ್ಬ ಚಂಡಾಲನು
ಬಂದು ಊಟ ಬೇಡಿದ. ದೀಕ್ಷಿತರು ಸ್ವಲ್ಪವೂ ಹಿಂದು ಮುಂದು ನೋಡದೆ ಅವನಿಗೆ
ಊಟ ಹಾಕುವಂತೆ ತಮ್ಮ ಪತ್ನಿಗೆ ಹೇಳಿದರು ಅವನಿಗೆ ಊಟವಾಯಿತು.
ಇದರಿಂದ ಆ ಊರಿನ ವೈದಿಕ ಬ್ರಾಹ್ಮಣರಿಗೆ ಕೋಪ ಬಂದಿತು. ಅವರು ದೀಕ್ಷಿತರಿಗೆ
ಬಹಿಷ್ಕಾರ ಹಾಕುವುದಾಗಿ ಹೆದರಿಸಿದರು. ಶ್ರಾದ್ಧ ಮಾಡಕೂಡದೆಂದು ಹೇಳಿದರು.
ದೀಕ್ಷಿತರು ಗಂಗಾಸ್ನಾನ ಮಾಡುವುದೊಂದೇ ದಾರಿಯೆಂದು ಕೆಲವರು ಹೇಳಿದರು.
ತಾವು ಮಾಡಿದ ಕೆಲಸವು ಧಾರ್ಮಿಕವಾದುದೆಂದು ದೀಕ್ಷಿತರಿಗೆ ದೃಢ ವಿಶ್ವಾಸವಿತ್ತು.
ಮರುಮಾತಾಡದೆ ತಮ್ಮ ಮನೆಯ ಹಿತ್ತಲಿನ ಬಾವಿಯ ಮುಂದೆ ಕುಳಿತು
ಗಂಗಾಷ್ಟಕವನ್ನು ಹಾಡಿದರು.
ಕೂಡಲೇ ಆ ಬಾವಿಯ ನೀರು ಉಕ್ಕಿ ಹರಿದು,
ಅವರ ಮನೆ ಮತ್ತು ಆ ಊರಿನ ಬೀದಿಗಳಲ್ಲಿ ತುಂಬಿ ಹರಿಯಿತು. ಅವರ ಪತ್ನಿಯು
 
ಇವರ