2023-07-05 05:58:13 by jayusudindra
This page has been fully proofread once and needs a second look.
ತಗ್ಗು ಸ್ಥಾಯಿಯಿಂದ ಹೆಚ್ಚು ಸ್ಥಾ ಯಿಯ ಸ್ವರಗಳವರೆಗೆ, ಏರಿಕೆಯ ಕ್ರಮದಲ್ಲಿ
ಸುಸ್ವರಗಳನ್ನು ಕೊಡುವ ಪಿಂಗಾಣಿ ಬಟಲುಗಳಿರುತ್ತವೆ. ಸ್ಥಾಯಿಗಳಲ್ಲಿ ಬರುವ
ಸ್ವರಸ್ಥಾನಗಳ ಶುದ್ಧಿಗೆ ತಕ್ಕಂತೆ ಬಟ್ಟಲುಗಳಿಗೆ ನೀರನ್ನು ಹಾಕುತ್ತಾನೆ. ಮಂದ್ರ
ಸ್ಥಾಯಿ ಸ್ವರಗಳನ್ನು ನುಡಿಯುವ ಬಟ್ಟಲುಗಳು ಗಾತ್ರದಲ್ಲಿ ದೊಡ್ಡದಾಗಿವೆ.
ತಾರಸ್ಥಾಯಿಯ ಕಡೆಗೆ ಹೋಗುತ್ತ ಇವು ಚಿಕ್ಕದಾಗಿರುತ್ತವೆ.
ಎರಡು ಕೈಗಳಲ್ಲಿ
ಕಡ್ಡಿಗಳನ್ನು ಹಿಡಿದು ಬಟ್ಟಲುಗಳನ್ನು ತಾಡನ ಮಾಡಿ ನುಡಿಸುತ್ತಾರೆ ಬಟ್ಟಲುಗಳನ್ನು
ಮೆದುವಾಗಿರುವ ರತ್ನಗಂಬಳಿ ಅಥವಾ ಮರಳಿನ ಮೇಲೆ ರತ್ನಗಂಬಳಿ ಹಾಸಿ ಬಟ್ಟಲು
ಗಳನ್ನಿಟ್ಟು ನುಡಿಸುವುದುಂಟು. ಕಚೇರಿಗೆ ನುಡಿಸುವ ಮುನ್ನ ಬಟ್ಟಲುಗಳನ್ನು
ಸ್ವರಜ್ಞಾನವಿರಬೇಕು.
ಶ್ರುತಿಮಾಡಿಕೊಂಡ ನಂತರ ನುಡಿಸಬೇಕಾಗಿರುವ ರಾಗ
ಮತ್ತು ಕೃತಿಗೆ ತಕ್ಕ ಆಯಾ ಸ್ವರಗಳನ್ನು ಕೊಡುವ ಬಟ್ಟಲುಗಳನ್ನು ಮಂದ್ರ
ಮಧ್ಯಮದಿಂದ ತಾರವಂಚಮದವರೆಗೆ ಮುಂದಿನ ಸಾಲಿನಲ್ಲಿಟ್ಟು ಸಣ್ಣ ಬಿದಿರುಕಡ್ಡಿ
ಗಳಿಂದ ತಾಡಿಸಿ ನುಡಿಸುತ್ತಾರೆ. ಸಂಪೂರ್ಣ ರಾಗವನ್ನು ನುಡಿಸುವಾಗ ಮೊದಲ
ಸಾಲಿನಲ್ಲಿ ಹದಿನಾರು ಬಟ್ಟಲುಗಳಿರುತ್ತವೆ. ನೀರನ್ನು ಹೆಚ್ಚಿಸುವುದು ಅಧವಾ
ಕಡಿಮೆ ಮಾಡಿಕೊಳ್ಳುವುದರ ಮೂಲಕ ಸ್ವರಸ್ಥಾನಗಳನ್ನು ಶುದ್ಧವಾಗಿ ಅನುಗೊಳಿಸಿ
ಕೊಳ್ಳಲಾಗುವುದು ಬಟ್ಟಲಿನ ಅಂಚು ಮತ್ತು ಒಳಗಿನ ನೀರಿಗೂ ತಾಗುವಂತೆ
ಕಡ್ಡಿಯಿಂದ ತಾಡನ ಮಾಡಿದಾಗ ಸ್ವರವು ದೀರ್ಘವಾಗಿ ಕಂಪಿಸಿ ಹೆಚ್ಚು ಕಾಲ
ಕೇಳಿಬರುತ್ತದೆ. ಕಂಪಿತ ಗಮಕವನ್ನು ನುಡಿಸುವಾಗ ವಾದಕನು ಬಲಗೈಯ
ಎಡಗೈಯಲ್ಲಿ ಹಿಡಿದ ಒಂದು ಮರದ
ತುಂಡಿನಿಂದ ನೀರನ್ನು ಮೆಲ್ಲನೆ ಕಲಕುತ್ತಾನೆ
ಬರುತ್ತದೆ.
ಅವರೋಹಣ ಕ್ರಮದಲ್ಲಿ ನುಡಿಯುವ ಸ್ವರಗಳನ್ನು ಎಡಗೈಯ ಕಡ್ಡಿಯಿಂದ ಬಲದಿಂದ
ಎಡಕ್ಕೆ ಬಟ್ಟಲುಗಳನ್ನು ತಾಡಿಸಿ, ಆರೋಹಣ ಕ್ರಮದಲ್ಲಿ ನುಡಿಯಬೇಕಾದ
ಸ್ವರಗಳನ್ನು ಎಡದಿಂದ ಬಲಕ್ಕೆ ತಾಡಿಸುತ್ತ ನುಡಿಸುತ್ತಾರೆ.
ದಲ್ಲಿ ಆಲಾಪನೆಯು
ಕಾಲದ ಕೃತಿಗಳಿಗಿಂತ ಮಧ್ಯಮ ಕಾಲದ ಕೃತಿಗಳು ಇದರಲ್ಲಿ ಬಹಳ ಸೊಗಸಾಗಿ
ಇರುತ್ತವೆ.
ರಾವ್ ರಮಣಯ್ಯ ಚೆಟ್ಟಿಯಾರ್ ಮುಂತಾದವರು ಬಹುಪ್ರಸಿದ್ಧರಾದ ಜಲತರಂಗ್
ವಾದಕರಾಗಿದ್ದರು.
ಮೈಸೂರಿನ ಬಿ
ದೇವೇಂದ್ರಪ್ಪ, ಮಧುರೈ ಶ್ರೀನಿವಾಸ