This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಜಯಶ್ರೀಕಂಠಿ-
ಈ ರಾಗವು ೪೬ನೆ ಮೇಳಕರ್ತ ಷಡ್ತಿಧಮಾರ್ಗಿಣಿಯ

ಒಂದು ಜನ್ಯರಾಗ.
 

ಸ ಗ ಮ ಪ ದ ನಿ ಸ
 

ಸ ನಿ ದ ಪ ಮ ಗ ಸ
 

 

 
ಜಯಶ್ರೀ ಭಾಸ್ಕರಮಟ್ಟ-
೧೭ನೆ ಶತಮಾನದ ರಾಗತಾಳ ಚಿಂತಾಮಣಿ

ಎಂಬ ತೆಲುಗು ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ.
 

 
ಜಯಶೃಂಗ-
ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಗೆದ್ದ ಸೈನ್ಯವು ತನ್ನ

ವಿಜಯವನ್ನು ಪ್ರಕಟಿಸಲು ಜಯಶೃಂಗ ಎಂಬ ಕೊಂಬನ್ನು ಯುದ್ಧ ಭೂಮಿಯಲ್ಲಿ

ಊದುವ ಪದ್ಧತಿ ಇದ್ದಿತು.
 

 
ಜಯಶುಕ-
ಈ ರಾಗವು ೭೧ನೆ ಮೇಳಕರ್ತ ಕೋಸಲದ ಒಂದು
 
ಜನ್ಯರಾಗ
 
ಅ :
 
೪೦೯
 

ಜನ್ಯರಾಗ
ಸ ರಿ ಗ ಮ ಪ ದ ನಿ ಸ

ಸ ದ ಪ ಮ ಗ ಮ ರಿ ಸ
 
ಜನ್ಯರಾಗ,
 
ಆ :
 

 
ಜಯಶುದ್ಧಮಾಳವಿ
ಅಸಂಪೂರ್ಣ ಮೇಳಪದ್ಧತಿಯಲ್ಲಿ ಕಟಪಯಾದಿ

ಸಂಜ್ಞಾಸೂಚಕ ಪದಗಳಿರುವ ಮೇಳಗಳಲ್ಲಿ ೧೮ನೆ ಮೇಳದ ಹೆಸರು.
 

 
ಜಯಂತಸೇನ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
ಸ ಗ ಮ ಪ ದ ಸ

ಸ ಗ ಮ ಪ ದ ಸ
ಸ ನಿ ದ ಪ ಮ ಗ ಸ
 

ಉಪಾಂಗರಾಗ, ಷಡ್ಡವು ಗ್ರಹಾಂಶನ್ಯಾಸ, ಗಾಂಧಾರ, ಧೈವತಗಳು ರಾಗ ಛಾಯಾ

ಸ್ವರಗಳು, ಸಾರ್ವಕಾಲಿಕ ರಾಗ ತಂಜಾವೂರಿನ ದೊರೆ ರಘುನಾಥನಾಯಕನು

ಈ ರಾಗವನ್ನು ಸೃಷ್ಟಿಸಿದನೆಂದು ಪ್ರತೀತಿ, ಶ್ರೀ ತ್ಯಾಗರಾಜರ ವಿನತಾ ಸುತವಾಹನ

ಶ್ರೀ ಎಂಬುದು ಈ ರಾಗದ ಪ್ರಸಿದ್ಧ ಕೃತಿ.
 

 
ಜಯಂತಶ್ರೀ-
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಜನ್ಯರಾಗ,
 

ಜನ್ಯರಾಗ,
ಸ ಗ ಮ ದ ನಿ ಸ
 

ಸ ನಿ ದ ಮ ಪ ಮ ಗ ಸ
 

ಉಪಾಂಗರಾಗ ಗಾಂಧಾರ ಮತ್ತು ದೈವತಗಳು ವಾದಿಸಂವಾದಿಗಳು ಮತ್ತು

ರಾಗಛಾಯಾಸ್ವರಗಳು. ಶಾಂತರಸ ಪ್ರಧಾನ ರಾಗ, ಸಾರ್ವಕಾಲಿಕ ರಾಗ, ಶ್ರೀ ತ್ಯಾಗ

ರಾಜರ ಮರುಗೇಲರಾ, ಗರ್ಭಪುರಿಯವರ ನಿನ್ನು ನಮ್ಮಿತಿ ವಿನುತ ಪಾಲಿನಿ ಎಂಬ

ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.