This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಜಯಶ್ರೀಕಂಠಿ-ಈ ರಾಗವು ೪೬ನೆ ಮೇಳಕರ್ತ ಷಡ್ತಿಧಮಾರ್ಗಿಣಿಯ
ಒಂದು ಜನ್ಯರಾಗ.
 
ಸ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ಸ
 

 
ಜಯಶ್ರೀ ಭಾಸ್ಕರಮಟ್ಟ-೧೭ನೆ ಶತಮಾನದ ರಾಗತಾಳ ಚಿಂತಾಮಣಿ
ಎಂಬ ತೆಲುಗು ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ.
 
ಜಯಶೃಂಗ-ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಗೆದ್ದ ಸೈನ್ಯವು ತನ್ನ
ವಿಜಯವನ್ನು ಪ್ರಕಟಿಸಲು ಜಯಶೃಂಗ ಎಂಬ ಕೊಂಬನ್ನು ಯುದ್ಧ ಭೂಮಿಯಲ್ಲಿ
ಊದುವ ಪದ್ಧತಿ ಇದ್ದಿತು.
 
ಜಯಶುಕ-ಈ ರಾಗವು ೭೧ನೆ ಮೇಳಕರ್ತ ಕೋಸಲದ ಒಂದು
 
ಜನ್ಯರಾಗ
 
ಅ :
 
೪೦೯
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ಮ ರಿ ಸ
 
ಜನ್ಯರಾಗ,
 
ಆ :
 
ಜಯಶುದ್ಧಮಾಳವಿ ಅಸಂಪೂರ್ಣ ಮೇಳಪದ್ಧತಿಯಲ್ಲಿ ಕಟಪಯಾದಿ
ಸಂಜ್ಞಾಸೂಚಕ ಪದಗಳಿರುವ ಮೇಳಗಳಲ್ಲಿ ೧೮ನೆ ಮೇಳದ ಹೆಸರು.
 
ಜಯಂತಸೇನ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
ಸ ಗ ಮ ಪ ದ ಸ
ಸ ನಿ ದ ಪ ಮ ಗ ಸ
 
ಉಪಾಂಗರಾಗ, ಷಡ್ಡವು ಗ್ರಹಾಂಶನ್ಯಾಸ, ಗಾಂಧಾರ, ಧೈವತಗಳು ರಾಗ ಛಾಯಾ
ಸ್ವರಗಳು, ಸಾರ್ವಕಾಲಿಕ ರಾಗ ತಂಜಾವೂರಿನ ದೊರೆ ರಘುನಾಥನಾಯಕನು
ಈ ರಾಗವನ್ನು ಸೃಷ್ಟಿಸಿದನೆಂದು ಪ್ರತೀತಿ, ಶ್ರೀ ತ್ಯಾಗರಾಜರ ವಿನತಾ ಸುತವಾಹನ
ಶ್ರೀ ಎಂಬುದು ಈ ರಾಗದ ಪ್ರಸಿದ್ಧ ಕೃತಿ.
 
ಜಯಂತಶ್ರೀ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಜನ್ಯರಾಗ,
 
ಸ ಗ ಮ ದ ನಿ ಸ
 
ಸ ನಿ ದ ಮ ಪ ಮ ಗ ಸ
 
ಉಪಾಂಗರಾಗ ಗಾಂಧಾರ ಮತ್ತು ದೈವತಗಳು ವಾದಿಸಂವಾದಿಗಳು ಮತ್ತು
ರಾಗಛಾಯಾಸ್ವರಗಳು. ಶಾಂತರಸ ಪ್ರಧಾನ ರಾಗ, ಸಾರ್ವಕಾಲಿಕ ರಾಗ, ಶ್ರೀ ತ್ಯಾಗ
ರಾಜರ ಮರುಗೇಲರಾ, ಗರ್ಭಪುರಿಯವರ ನಿನ್ನು ನಮ್ಮಿತಿ ವಿನುತ ಪಾಲಿನಿ ಎಂಬ
ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.