2023-07-05 05:39:19 by jayusudindra
This page has been fully proofread once and needs a second look.
ಜಯದೇವನು ತನ್ನನ್ನು ಪದ್ಮಾವತೀ ಚರಣ ಚಾರಣ ಚಕ್ರವರ್ತಿ ಎಂದು ವರ್ಣಿಸಿ
ಕೊಂಡಿದ್ದಾನೆ. ಕಥಕಂದಿ ಎಂಬ ಗ್ರಾಮದಲ್ಲಿದ್ದಾಗ ಗೀತಗೋವಿಂದವನ್ನು ಬರೆದು
ಮುಗಿಸಿದನೆಂದು ಪ್ರತೀತಿ. ಈ ಹಳ್ಳಿಯನ್ನು ಜಯದೇವಪುರವೆನ್ನುತ್ತಾರೆ ಈ
ಕಾವ್ಯದಿಂದ ಅವನ ಕೀರ್ತಿಯು ಹರಡಿ ರಾಜಾ ಲಕ್ಷಣ ಸೇನನ ಆಸ್ಥಾನಕವಿಯಾಗಿ
ಸನ್ಮಾನಿತನಾದನು. ಕಡೆಗಾಲದಲ್ಲಿ ಕೆಂಮಲಿ ಎಂಬ ಹಳ್ಳಿಗೆ ಬಂದು ಪತ್ನಿಯೊಂದಿಗೆ
ನಿಶ್ಚಿಂತೆಯಿಂದ ವಾಸಿಸುತ್ತಿದ್ದು ವಿಶ್ರಾಂತಿ ಸುಖವನ್ನನುಭವಿಸಿ ಕಾಲವಾದನು.
ಜಯದೇವನು ಗೀತಗೋವಿಂದ ಕಾವ್ಯವಲ್ಲದೆ ಚಂದ್ರಾಲೋಕ, ರತಿಮಂಜರಿ,
ತತ್ವಚಿಂತಾಮಣಿ, ಕಾರಕವಾದ ಎಂಬ ಶೃಂಗಾರ ಮತ್ತು ಶಾಸ್ತ್ರಗ್ರಂಧಗಳನ್ನು
ರಚಿಸಿದ್ದಾನೆ.
ಗೀತಗೋವಿಂದವು ಜಯದೇವನೇ ಹೇಳಿರುವಂತೆ ಶೃಂಗಾರ ಮಹಾಕಾವ್ಯ.
ವ್ಯಾಖ್ಯಾನಗಳನ್ನು ಹಲವರು ಬರೆದಿದ್ದಾರೆ
: ರಸಿಕಪ್ರಿಯಾ ?
(
ಆಂಧ್ರದ ಲಕ್ಷ್ಮೀಧರನ ಶ್ರುತಿಹಜನಿ, ಕೃಷ್ಣದತ್ತನ ಶಶಿಲೇಖಾ ಮತ್ತು ಜಗದ್ಧರನ
ಸಾರದೀಪಿಕಾ ಮುಂತಾದುವು ಇತರ ವ್ಯಾಖ್ಯಾನಗಳು,
ಜಯದೇವನು ಪವಾಡಪುರುಷ ಎನ್ನಲು ಹಲವು ನಿದರ್ಶನಗಳಿವೆ. ಗೀತ
ಗೋವಿಂದವನ್ನು ಬರೆಯಲು ತೊಡಗಿ ೧೦ನೆ ಸರ್ಗದ ೧೯ನೆ ಅಷ್ಟಪದಿಯ ೭ನೆ
ಚರಣವನ್ನು ಈ ರೀತಿ ಬರೆದನು :-
(6
ನಿನ್ನ ಗುಲಾಬಿ ಬಣ್ಣದ
ವಿಷವು ಕೆಳಕ್ಕೆ ಇಳಿಯುತ್ತದೆ".
ರಾಧೆಯ ಪಾದಗಳನ್ನು ಕೃಷ್ಣನ
ಹೊಡೆದು
ಅವನು
*
* ಎಲೈ ರಾಧೆ ! ಪ್ರೇಮವೆಂಬ ವಿಷವು ನನ್ನ ತಲೆಗೆ ಹತ್ತಿದೆ
ಪಾದಗಳನ್ನು ನನ್ನ ತಲೆಯ ಮೇಲಿಡು.
ಜಯದೇವನಿಗೆ ಈ ಭಾಗವು ಸರಿಬೀಳಲಿಲ್ಲ.
ಶಿರಸ್ಸಿನ ಮೇಲಿಡುವುದು ಮಹಾಪರಾಧ ಎಂದು ತಿಳಿದು ಈ
ಹಾಕಿ, ಪತ್ನಿ ಯ ಕೈಯಲ್ಲಿ ಪುಸ್ತಕವನ್ನಿತ್ತು ಅಭ್ಯಂಜನಕ್ಕೆ ಹೋದನು.
ಆ ಕಡೆ ಹೋದ ಕೂಡಲೇ ಈಕಡೆ ಜಯದೇವನ ರೂಪದಲ್ಲಿ ಶ್ರೀಕೃಷ್ಣನು ಬಂದನು.
ಒಂದು ಹೊಸ ಭಾವನೆ ಹೊಳೆದಿದೆ, ಅದನ್ನು ಬರೆಯ ಬೇಕೆಂದು ಪದ್ಮಾವತಿಯಿಂದ
ತನ್ನ ಪುಸ್ತಕವನ್ನು ತೆಗೆದುಕೊಂಡು, ಹೊಡೆದು ಹಾಕಿದ್ದ ಎರಡು ಸಾಲುಗಳನ್ನು
ಪುನಃ ಬರೆದು ಹಿಂದುಗಡೆಗೆ ಹೋಗಿ ಅಂತರ್ಧಾನನಾದನು. ಅಂದು ಮಧ್ಯಾಹ್ನ
ಬರವಣಿಗೆಯನ್ನು ಮುಂದುವರಿಸಲು ಜಯದೇವನು ಪುಸ್ತಕವನ್ನು ತೆಗೆದುಕೊಂಡು
ನೋಡಿದಾಗ ತಾನು ಹೊಡೆದು ಹಾಕಿದ್ದ ಎರಡು ಸಾಲುಗಳು ಪುನಃ ಬರೆಯಲ್ಪಟ್ಟರು
ವುದನ್ನು ನೋಡಿ ಆಶ್ಚರ್ಯಚಕಿತನಾಗಿ ಪದ್ಮಾವತಿಯನ್ನು ಕೇಳಿದನು.
ನಡೆದ ಸಂಗತಿಯನ್ನು ಹೇಳಿದಳು. ಅದನ್ನು ಕೇಳಿ ಪುಲಕಿತನಾಗಿ ಶ್ರೀಕೃಷ್ಣನೇ ಆ