2023-06-25 23:30:24 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಅಷ್ಟಪದಿಯೆಂದು ಬಹು ಪ್ರಸಿದ್ಧ ಇಂದಿಗೂ ಇದನ್ನು ಹಾಡದೆ ಸಂಗೀತ ಕಚೇರಿಯು
ಪೂರ್ಣವಾಗುವುದಿಲ್ಲವೆಂಬ ಭಾವನೆಯಿದೆ. ಅಷ್ಟ ಪದಿಯೆಂದರೆ ಎಂಟು ಪಾದಗಳುಳ್ಳ
ಹಾಡು. ಸಾಮಾನ್ಯವಾಗಿ ಅಷ್ಟಪದಿಗಳ ವಿಷಯವು ಶೃಂಗಾರ. ಇದಕ್ಕೆ ಕಾರಣ
ವುಂಟು. ಸಪ್ತಪದಿ ಎಂಬುದು ಗೃಹಸ್ಥ ಆಶ್ರಮಕ್ಕೆ ಪೂರ್ವದ ಸಂಸ್ಕಾರ, ನವಪದೀ
ಎಂಬುದು ವಾನಪ್ರಸ್ಥಾಶ್ರಮಕ್ಕೆ ಸಂಬಂಧಿಸಿದ್ದು. ಅಷ್ಟಪದಿಯು ಸಾಂಸಾರಿಕ
ಜೀವನಕ್ಕೆ ಸಂಬಂಧಿಸಿರುವುದು. ಇದರ ರಸವು ಶೃಂಗಾರವೇ ಆಗಿರುತ್ತದೆ. ಗೀತ
ಗೋವಿಂದವು ಶ್ರೀಕೃಷ್ಣ ಪ್ರಣಯ ಕಥಾಮೃತ,
ಇದ್ದಾರೆ.
ಜಯದೇವನು ಬಂಗಾಳವನ್ನು ಆಳುತ್ತಿದ್ದ ಸೇನವಂಶದ ಬಲ್ಲಾಳ ಲಕ್ಷಣ
ನೇನನ (೧೧೭೦-೧೨೦೦) ಆಸ್ಥಾನ ಕವಿಯಾಗಿದ್ದನು. ಪ್ರಸಿದ್ಧರಾದ ಗೋವರ್ಧನಾ
ಚಾರ್ಯ, ಶಾರಣ, ಉಮಾಪತಿ, ಜಯದೇವ ಮತ್ತು ಧೋಯಿ ಎಂಬ ಪಂಚರತ್ನ
ಹೆಸರು ರಾಜನ ಅರಮನೆಯ ದ್ವಾರದ ಕಂಬದ ಮೇಲಿರುವ ಶಾಸನದಲ್ಲಿ ಕೆತ್ತಲಾಗಿದೆ.
ಜಯದೇವನು ದೇವಕುಟುಂಬದವನು. ಈ ಕುಟುಂಬದವರು ಈಗಲೂ ಒರಿಸ್ಸಾದಲ್ಲಿ
ಇವನ ತಂದೆ ಭೋಜದೇವ ಮತ್ತು ತಾಯಿ ರಾಮಾದೇವಿ (ರಮಾದೇವಿ)
ಇವನ ಜನ್ಮಸ್ಥಳವು ಕಿಂದುಬಿಲ್ವ (ಬಿಂದು ಬಿಲ್ವ). ಈ ಹೆಸರಿನ ಊರು ಬಂಗಾಳದಲ್ಲೂ
ಒರಿಸ್ಸದಲ್ಲಿ ಇವೆ. 'ಭಕ್ತ ಮಾಲೆ' ಯನ್ನು ಬರೆದ ಚಂದ್ರದತ್ತನು ಒರಿಸ್ಸದ ಜಗನ್ನಾಥ
ಪುರಿಯ ಸಮೀಪದಲ್ಲಿರುವ ಕಿಂದು ಬಿಲ್ವವೆಂಬ ಹಳ್ಳಿಯು ಇವನ ಜನ್ಮಸ್ಥಳ
ಎಂದು ಹೇಳಿದ್ದಾನೆ. ಇವನು ಮಧಿಲಾನಗರದವನೆಂದೂ ಒಂದು ನಂಬಿಕೆಯುಂಟು.
ಇದೇ ಕಾಲದಲ್ಲಿ ಜಯದೇವ ಎಂಬ ಹೆಸರಿನ ಇನ್ನೂ ಇಬ್ಬರು ಕವಿಗಳಿದ್ದರು. ಅವರಲ್ಲಿ
ಒಬ್ಬನು ಪ್ರಸನ್ನ ರಾಘವ ಎಂಬ ಸಂಸ್ಕೃತ ನಾಟಕವನ್ನು ರಚಿಸಿದ್ದಾನೆ. ಮತ್ತೊಬ್ಬನು
ಶೃಂಗಾರಮಾಧವೀಯಚಂಪೂ ಎಂಬ ಕಾವ್ಯವನ್ನು ರಚಿಸಿದ್ದಾನೆ.
ಗೀತ
ಪರಾಶರನೆಂಬ
ಗೋವಿಂದದ ಜಯದೇವನಿಗೂ ಮಿಕ್ಕ ಇಬ್ಬರಿಗೂ ಏನೂ ಸಂಬಂಧವಿಲ್ಲವೆನ್ನಬಹುದು.
ಜಯದೇವನು ಚಿಕ್ಕಂದಿನಲ್ಲಿ ಪಾಂಡಿತ್ಯವನ್ನು ಗಳಿಸಿದನು.
ಗೆಳೆಯನೊಂದಿಗೆ ಮಥುರಾ, ಬೃಂದಾವನಗಳಿಗೆ ಹೋದನು. ಯಮುನಾನದಿ
ತೀರದಲ್ಲಿ ರಾಧಾಕೃಷ್ಣರ ರಾಸಕೇಳಿ ಕಥೆಗಳನ್ನು ಕೇಳಿ ಅವನಲ್ಲಿ ಕೃಷ್ಣ ಭಕ್ತಿ
ಉತ್ತೇಜಿತವಾಯಿತು. ಕ್ಷೇತ್ರಾಟನೆ ಮಾಡುತ್ತಾ ಜಗನ್ನಾಥಪುರಿಗೆ ಬಂದು ದೇವರ
ದರ್ಶನ ಮಾಡಿ ದೇವಾಲಯದ ಬಳಿ ಮರದ ಕೆಳಗೆ ಮಲಗಿದ್ದಾಗ ದೇವಶರ್ಮನೆಂಬ
ಬ್ರಾಹ್ಮಣನು ಬಂದು ಅವನನ್ನು ಎಬ್ಬಿಸಿ ತನ್ನ ಮಗಳನ್ನು ಅವಳಿಗೆ ಕೊಟ್ಟು ಮದುವೆ
ಮಾಡುವಂತೆ ತನಗೆ ಹಿಂದಿನ ರಾತ್ರಿ ಸ್ವಪ್ನ ಸೂಚನೆ ಆಯಿತೆಂದು ಹೇಳಿದನು.
ಜಯದೇವನು ಇದಕ್ಕೆ ಒಪ್ಪದಿರಲು ಆ ಬ್ರಾಹ್ಮಣನು ಮಗಳನ್ನು ಅವನ ಬಳಿಯೇ
ಬಿಟ್ಟು ಹೊರಟುಹೋದನು. ಬೇರೆ ದಾರಿಯಿಲ್ಲದೆ ಜಯದೇವನು ಆಕೆಯನ್ನು
ಮದುವೆಯಾದನು. ಹೀಗೆ ದೈವದತ್ತವಾಗಿ ಬಂದ ಅವನ ಹೆಂಡತಿ
ಭಾವುಕಳು, ಭಕ್ತಳು, ನಾಟ್ಯದಲ್ಲಿ ವಿಶೇಷವಾದ ವ್ಯುತ್ಪತ್ತಿಯಿದ್ದವಳು. ಜಯದೇವನು
ಪದ್ಮಾವತಿ
೪೦೨