2023-06-25 23:30:24 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಎಲ್ಲವೂ ನರದ ಬಿಗಿತದಿಂದ ಒಂದೇ ನೇರದಲ್ಲಿರುತ್ತದೆ. ಈ ವಾದ್ಯವನ್ನು ಹೊಟ್ಟೆ
ಮತ್ತು ಎಡಗೈಯ ಮೊಳಕ್ಕೆ ಮಧ್ಯೆ ಇಟ್ಟು ಕೊಂಡು ನುಡಿಸುತ್ತಾರೆ. ಮರದ
ತುಂಡನ್ನು ಎಳೆದು ಎಡಗೈಯಲ್ಲಿ ಹಿಡಿದು ಬಲಗೈ ಬೆರಳಿನಿಂದ ಅದನ್ನು ಮಾಡಿದಾಗ
ಆಕರ್ಷಕವಾಗಿ ನುಡಿಯುತ್ತದೆ. ದಾರದ ಬಿಗಿಯನ್ನು ಹೆಚ್ಚು ಕಡಿಮೆ ಮಾಡುತ್ತಾ
ನಾನಾ ರೀತಿಯ ನುಡಿಕಾರವನ್ನುಂಟು ಮಾಡಿ ಸಂಗೀತಕ್ಕೆ ತಾಳವಾದ್ಯವನ್ನಾಗಿ
ನುಡಿಸುವರು.
೪೦೧
ಜಯ-(೧) ಕೊಳಲಿನ ಜಾತಿಗೆ ಸೇರಿದ ಒಂದು ವಾದ್ಯ ವಿಶೇಷ
(೨) ಪುರಾತನ ೧೦೮ ತಾಳಗಳಲ್ಲಿ ೪೮ನೆ ತಾಳ, ಇದರ ಒಂದಾವರ್ತಕ್ಕೆ ಆರು
ಮಾತ್ರೆಗಳು ಅಧವಾ ೨೪ ಅಕ್ಷರ ಕಾಲ. ಇದರ ಅಂಗಗಳು ಒಂದು ಲಘು,
ಒಂದು ಗುರು, ಎರಡು ಲಘು, ಎರಡು ದ್ರುತ (೩) ಭಾರತದ ಒಂದು ಮಹಾಕಾವ್ಯ
ವಾದ ಮಹಾಭಾರತದ ಹೆಸರು. ಈ ಹೆಸರು ಪ್ರಾರಂಭದ ಪ್ರಾರ್ಥನಾ ಶ್ಲೋಕದಲ್ಲಿದೆ
(ವ್ಯಾಸೋ ಜಯುಮುದೀರಯೇತ್), ಇದು ೧೮ ಪರ್ವಗಳನ್ನೂ, ೧೮ ದಿನಗಳ
ಯುದ್ಧವನ್ನೂ, ೧೮ ಅಕೋಹಿಣಿ ಸೈನ್ಯವನ್ನೂ, ಭಗವದ್ಗೀತೆಯ ೧೮ ಅಧ್ಯಾಯ
ಗಳನ್ನೂ ಸೂಚಿಸುತ್ತದೆ.
ಜಯಾ-ಸಂಗೀತ ದಾಮೋದರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಧೈವತದ
ಪ್ರಥಮ ಶ್ರುತಿಯ ಹೆಸರು. ಇದು ೨೨ ಶ್ರುತಿಗಳಲ್ಲಿ ೧೮ನೆ ಶ್ರುತಿಯಾಗಿದೆ.
ಕಟವಯಾದಿ ಸೂತ್ರದಂತೆ ಜಯ ಎಂಬ ಪದವು ೧೮ನ್ನು ಸೂಚಿಸುತ್ತದೆ.
ಜಯ ಜಯವಂತಿ-ಈ ರಾಗವು ಹಿಂದೂಸ್ಥಾನಿ ಸಂಗೀತ ಪದ್ಧತಿಯ
ಒಂದು ರಾಗ. ಕರ್ಣಾಟಕ ಸಂಗೀತದ ದ್ವಿಜಾವಂತಿ ರಾಗಕ್ಕೆ ಸಮನಾದುದು.
ಮುತ್ತು ಸ್ವಾಮಿ ದೀಕ್ಷಿತರ ಆ ಚೇತಶ್ರೀ ಬಾಲಕೃಷ್ಣಂ ಭಜರೇ " ಎಂಬ ರಚನೆಯು
ಈ ರಾಗದ ಪ್ರಸಿದ್ಧ ಕೃತಿ.
6
ಜಯ ಜಯಂತಿ-ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು
ಇದು ಮಲ್ಲಾರ ರಾಗದ ಒಂದು ರಾಗಿಣಿ ಎಂದು ಹೇಳಿದೆ
ಜಯಢಕ್ಕಾ ಇದು ಪುರಾತನ ಕಾಲದ ಒಂದು ಮದ್ದಲೆ, ಯುದ್ಧದಲ್ಲಿ
ಗೆದ್ದ ಸೈನ್ಯವು ಯುದ್ಧಭೂಮಿಯಲ್ಲಿ ಇದನ್ನು ಬಾರಿಸುತ್ತಿತ್ತೋ.
ಜಯತಾಳ-ತಮಿಳಿನ ಪುರಾತನ ನಿಘಂಟಾದ ಪಿಂಗಳ ನಿಘಂಟು ಮತ್ತು
ಭರತ ಶಾಸ್ತಿರಂ ಎಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ.
ಜಯದೇವ-ಸುಂದರವೂ ಭಾವ ಪೂರ್ಣವೂ ಜಗದ್ವಿಖ್ಯಾತವೂ ಆದ
ಈತನ
ಗೀತಗೋವಿಂದ ಸಂಸ್ಕೃತ ಕಾವ್ಯವನ್ನು ರಚಿಸಿದವನು ಕವಿ ಜಯದೇವ. ಕತೆಗಳು
ಜೀವಿತವೇ ಒಂದು ಕಾವ್ಯ, ಅವನ ವಿಚಾರವಾಗಿ ಅನೇಕ ದಂತ
ಪ್ರಚಾರದಲ್ಲಿವೆ. ಖಚಿತವಾಗಿ ವಿವರಗಳು ದೊರೆಯುವುದಿಲ್ಲ. ಗೀತ ಗೋವಿಂದವು
ರಾಗ.