This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗಾನ ಕಾಲವನ್ನನುಸರಿಸುವ ರಾಗಗಳು ರಾಗಗಳನ್ನು ಸಾರ್ವಕಾಲಿಕ

ರಾಗಗಳು, ಸಂಧ್ಯಾಕಾಲದ ರಾಗಗಳು, ಪೂರ್ವ ಸೂರ್ಯೋದಯ ರಾಗಗಳೆಂಬ
 

ಮೂರು ಬಗೆಗಳಾಗಿ ವಿಂಗಡಿಸಲಾಗಿದೆ.
 

ಉದಾ : ಸಾರ್ವಕಾಲಿಕರಾಗ
 
೪೦೦
 

ಶಂಕರಾಭರಣ, ಬಿಲಹರಿ
 

ಸಂಧ್ಯಾ ಕಾಲದರಾಗ

ಪ್ರಾತಃಕಾಲದ ರಾಗ
 

ಪೂರ್ವಿಕಲ್ಯಾಣಿ, ಕಾನಡ
 

ಅಪರಾಹ್ನದರಾಗ
 

ರೇವಗುಪ್ತಿ, ಮಾಯಾಮಾಳವಗೌಳ

ಮಧ್ಯಮಾವತಿ, ಅಸಾವೇರಿ

ಮೂರ್ಛನ ಕಾರಕ ಜನ್ಮರಾಗ-ಗ್ರಹಭೇದದಿಂದ ನೂತವರಾಗಗಳುಂಟಾ

ಗುವ ರಾಗ. ಉದಾ : ಮೋಹನ.
 
-
 
-
 

ಕೆಲವು ರಾಗಗಳನ್ನು ಗ್ರಹಭೇದಕ್ಕೆ ಒಳಪಡಿಸಲಾಗುವುದಿಲ್ಲ. ಉದಾ : ವಿಜಯ ಶ್ರೀ

ಇಂತಹ ರಾಗಗಳು ಅಮೂರ್ಛನ ಕಾರಕ ಜನ್ಯರಾಗಗಳು.
 

 

ಮಿತ್ರರಾಗಗಳು ರಾಗದ ಹೆಸರಿನ ಅಂತ್ಯದಲ್ಲಿ ಶಬ್ದ ಸಾಮ್ಯವು ಕಂಡು

ಬಂದರೆ ಆ ರಾಗಗಳನ್ನು ಮಿತ್ರ ರಾಗಗಳೆಂದು ಹೇಳುವುದು ಪದ್ಧತಿ. ಉದಾ-ಸಿಂಧು

ರಾಮಕ್ರಿಯ, ಗುಂಡಕ್ರಿಯ ಇತ್ಯಾದಿ ಆದರೆ ಜನಕ-ಜನ್ಯರಾಗಗಳು ಸುವ್ಯಸ್ಥಿತವಾದ

ಕ್ರಮಕ್ಕೆ ಒಳಪಟ್ಟ ಮೇಲೆ ಮಿತ್ರರಾಗಗಳೆಂಬದು ರೂಢಿಯಲ್ಲಿಲ್ಲ
 

 
ಜನಾವರಾಳಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ ಗೌಳದ

ಒಂದು ಜನ್ಯರಾಗ.
 

ಸ ಗ ರಿ ಗ ಮ ದ ನಿ ಸ ಸ
 

ಸ ನಿ ದ ಪ ಮ ಗ ಮ ರಿ ಗ ಮ ರಿ ಸ
 

 
ಜನಸಮ್ಮೋದಿನಿ-
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ

ಒಂದು ಜನ್ಯರಾಗ,
 

ಸ ರಿ ಗ ಪ ದ ನಿ ಸ

ಸ ನಿ ದ ಪ ಗ ರಿ ಸ
 

 
ಜಮಿಡಿಕ-
ಇದು ಆಂಧ್ರ ಪ್ರದೇಶದ ಒಂದು ಗ್ರಾಮಾಣ ಅವನದ್ಧವಾದ್ಯ

೯ ಅಂಗುಲ ಉದ್ದ, ೬ ಅಂಗುಲ ಅಗಲ, ೧/೨ ಅಂಗುಲ ಮಂದವಿರುವ

ಮರದಿಂದ ಮಾಡಲ್ಪಟ್ಟ ಹೊಳವಿನ ಕೆಳಮುಖದ ಮೇಲೆ ಜಿಂಕೆಯ

ಮುಚ್ಚಳಿಕೆಯನ್ನು ಕಟ್ಟಿದೆ. ಈ ಚರ್ಮದ ಮಧ್ಯಭಾಗದಲ್ಲಿ ಸಣ್ಣ ರಂಧ್ರವಿದೆ.

ಒಂದು ಸಣ್ಣ ಹಿಡಿ ಅಥವಾ ಕಡ್ಡಿಗೆ ೧೫ ಅಂಗುಲವುದ್ದವಿರುವ ನರವನ್ನು ಕಟ್ಟಿದೆ.

ಈ ನರವನ್ನು ಒಂದು ನಾಣ್ಯದ ಸಣ್ಣ ರಂಧ್ರದ ಮೂಲಕ ಮತ್ತು ಚರ್ಮದ ರಂಧ್ರದ

ಮೂಲಕ ಹಾದು ಹೋಗಿಸಿ, ಅದರ ಮತ್ತೊಂದು ತುದಿಯನ್ನು ಒಂದು ಸಣ್ಣ ಮರದ

ತುಂಡಿಗೆ ಕಟ್ಟಿದೆ. ಈ ತುಂಡನ್ನು ಹಿಡಿದು ಕೊಂಡಾಗ ಅದು ಹೊಳವಿನ

ಮೇಲ್ಬಾಗದಲ್ಲಿ ನಾಲ್ಕು ಅಂಗುಲ ಮೇಲಕ್ಕೆ ಬರುತ್ತದೆ. ಮರದ ತುಂಡು, ನಾಣ್ಯ
 
ಹಲಸಿನ
 
ಚರ್ಮದ