This page has not been fully proofread.

೩೯೦
 
ಸಂಗೀತ ಪಾರಿಭಾಷಿಕ ಕೋಶ
 
ಇದು ಉಪಾಂಗರಾಗ, ರಿಷಭ, ಧೈವತ ಮತ್ತು ನಿಷಾದಗಳು ಜೀವ ಸ್ವರಗಳು.
ಮತ್ತು ಹಾಸ್ಯರಸ ಪ್ರಧಾನವಾದ
 
ಬಹುರಂಜಕವಾದ ಸಾರ್ವಕಾಲಿಕರಾಗ
 
ಶೃಂಗಾರ
 
ರಾಗ. ಅವರು ರಚಿಸಿರುವ ಸ್ಮರಣೇಸುಖಮು, ವಿಡಜಾಲದುರಾ, ನಾಡಾಡಿನ
ಮಾಟ ಮತ್ತು ಮಹಾವೈದ್ಯನಾಥ ಅಯ್ಯರ್‌ರವರ ಪಾಹಿಮಾಂ ಶ್ರೀರಾಜರಾಜೇಶ್ವರಿ
ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
 
ಜನ್ಮರಾಗವರ್ಗೀಕರಣ ರಾಗಗಳನ್ನು ಮುಖ್ಯವಾಗಿ ಜನಕ ಮತ್ತು
ಜನ್ಯರಾಗಗಳೆಂದು ವರ್ಗೀಕರಿಸಲಾಗಿದೆ ರಾಗಾಂಗವಲ್ಲದ ರಾಗಗಳಲ್ಲಿ ಸಪ್ತಸ್ವರಗಳಲ್ಲಿ
ಕೆಲವು ಸ್ವರಗಳು ವರ್ಷವಾಗಿರುವುದು, ಕ್ರಮ ಬದ್ಧವಾದ ಆರೋಹಣಾವರೋಹಣವು
ಇಲ್ಲದಿರುವುದು ಅನ್ಯಸ್ವರಗಳನ್ನು ಹೊಂದಿರುವುದು ಮುಂತಾದುವುಗಳನ್ನು ಜನ್ಯರಾಗ
ಗಳೆಂದೂ, ಉಪಾಂಗ ಮತ್ತು ಭಾಷಾಂಗರಾಗಗಳೆಂದೂ ವರ್ಗೀಕರಿಸಲಾಗಿದೆ.
ಒಂದು ರಾಗದ ಒಂದು ಜನಕರಾಗದ ಸ್ವರಗಳನ್ನು ಹೊಂದಿದ್ದರೆ ಅದು ಆ ಮೇಳದ
ಜನ್ಯರಾಗ ಉದಾ : ಕೇದಾರ ಗೌಳವು ಹರಿಕಾಂಭೋಜಿಯ ಜನ್ಯವೆಂದರೆ ಅದು
ಹರಿಕಾಂಭೋಜಿ ಮೇಳದ ಸ್ವರಗಳನ್ನು ಹೊಂದಿದೆ. ಆದರೆ ಗ ಮತ್ತು ಧ
ಆರೋಹಣದಲ್ಲಿ ವರ್ಜ್ಯವಾಗಿರುವುದರಿಂದ ಮೇಳಕ್ಕೂ ಈ ಜನ್ಮಕ್ಕೂ ವ್ಯತ್ಯಾಸವಿದೆ.
ಜನ್ಯರಾಗಗಳನ್ನು ಈ ರೀತಿ ವರ್ಗೀಕರಣ ಮಾಡಬಹುದು.
ಜನ್ಯಸಂಪೂರ್ಣ

 
(೧)
 
ವಕ್ರ
 
ಉಪಾಂಗ
 
ಭಾಷಾಂಗ
 
ಈ ರಾಗಗಳು ತಮ್ಮ ಜನಕ ಮೇಳದ ಸಪ್ತ ಸ್ವರಗಳನ್ನು ಸಂಪೂರ್ಣವಾಗಿ ಆರೋಹಣಾವ
ರೋಹಣಗಳಲ್ಲಿ ಹೊಂದಿರುವುದಲ್ಲದೆ ಭಾಷಾಂಗ ಅಥವಾ ವಕ್ರ ರಾಗಗಳಾಗಿರುತ್ತವೆ.
ಉದಾ : ಭೈರವಿ, ಮಾಂಜಿರಾಗಗಳು.
 
ವರ್ಜರಾಗ
 
ಔಡವ
 
ಔಡವಸಂಪೂರ್ಣ
 
ಉಪಾಂಗ
 
a
 
ಭಾಷಾಂಗ
 
b)
 
ಷಾಡವ
 
ಷಾಡವಸಂಪೂರ್ಣ
 

ಭಾಷಾಂಗ