2023-07-04 10:08:58 by jayusudindra
This page has been fully proofread once and needs a second look.
ಅಥವಾ ಅರ್ಧ ಆವರ್ತ ಜತಿಗಳನ್ನು ಹೊಂದಿರುತ್ತವೆ.
ಇಂತಹ ಜತಿಸ್ವರಗಳನ್ನು
ಪೊನ್ನಯ್ಯ, ವಡಿವೇಲು ಮತ್ತು ಶಿವಾನಂದಂ ಮುಂತಾದವರು ರಚಿಸಿದ್ದಾರೆ.
ಧಾತು ಸಮಗ್ರಯುಕ್ತವಾದ ಈ ರಚನೆಗಳಿಗೆ ಸ್ವರ ಪಲ್ಲವಿಗಳೆಂದು ಹೆಸರು. ಕೆಲವು
ಜತಿಸ್ವರಗಳಲ್ಲಿ ಪಲ್ಲವಿ ಅನುಪಲ್ಲವಿಗಳು ಜತಿಗಳಿಂದ ಕೂಡಿದ್ದು ಚರಣಗಳಲ್ಲಿ ಜತಿಗಳು
ಮತ್ತು ಸ್ವರಗಳು ಬರುತ್ತವೆ. ಇಂತಹ ರಚನೆಗಳಿಗೆ ಶಬ್ದ ಪಲ್ಲವಿಗಳೆಂದು ಹೆಸರು.
ರಾಗಮಾಲಿಕಾ ಜತಿಸ್ವರಗಳಲ್ಲಿ ಚರಣಗಳು ಬೇರೆ ಬೇರೆ ರಾಗಗಳಲ್ಲಿದ್ದು ಕೊನೆಯ
ಮುಕ್ತಾಯ ಸ್ವರಗಳು ಪಲ್ಲವಿಯ ರಾಗದಲ್ಲಿ ರಚಿಸಲ್ಪಟ್ಟಿವೆ
ಸ್ವಾತಿ ತಿರುನಾಳರ ಕೆಲವು ಜತಿಸ್ವರಗಳು ರಾಗಮಾಲಿಕಾ ಜತಿ ಸ್ವರಗಳಿಗೆ ಉತ್ತಮ
ಜತಿ ಸ್ವರಗಳನ್ನು ಚೌಕಕಾಲ ಮತ್ತು ಮಧ್ಯಮ ಕಾಲ
ಉದಾಹರಣೆಗಳು.
ಜೈತ
ಸೋಮನಾಥನ ರಾಗ ವಿಬೋಧವೆಂಬ ಗ್ರಂಥದಲ್ಲಿ ಉಕ್ತವಾಗಿರುವ
geses
ಜನಕ
ಪುರಾತನ ೧೦೮ ತಾಳಗಳಲ್ಲಿ ೧೦೫ನೆ ತಾಳದ ಹೆಸರು. ಇದರ
ಒಂದಾವರ್ತಕ್ಕೆ ೧೨ ಮಾತ್ರೆಗಳು ಅಥವಾ ೪೮ ಅಕ್ಷರಕಾಲ. ಇದರ ಅಂಗಗಳು
ನಾಲ್ಕು ಲಘು, ಎರಡು ಗುರು, ಎರಡು ಲಘು ಮತ್ತು ಒಂದು ಗುರು.
ಜನಕ-ಜನ್ಯ ಪದ್ಧತಿ
ರಾಗಗಳನ್ನು ಮೂಲರಾಗಗಳು ಮತ್ತು ಅವುಗಳಿಂದ
ಹುಟ್ಟಿದರಾಗಗಳೆಂದು ವರ್ಗೀಕರಣ ಮಾಡುವ ವೈಜ್ಞಾನಿಕ ಪದ್ಧತಿಗೆ ಜನಕ-ಜನ್ಯ
ಪದ್ಧತಿ ಎಂದು ಹೆಸರು. ಇದನ್ನು ಅತ್ಯಂತ ಸಮರ್ಪಕವಾದ ತಾರ್ಕಿಕ ತಳಹದಿಯ
ಗಳನ್ನು ಹೊಂದಿವೆ.
ಅವುಗಳ ಜನ್ಯರಾಗಗಳಲ್ಲಿ ಮೂಲರಾಗದ ಒಂದೋ, ಎರಡೋ
ಸ್ವರಗಳು ಆರೋಹಣ ಅಥವಾ ಅವರೋಹಣದಲ್ಲಿರುವುದಿಲ್ಲ. ಅಧವಾ ಎರಡರಲ್ಲೂ
ಇರುವುದಿಲ್ಲ. ಕೆಲವು ಜನ್ಯರಾಗಗಳಾದ ಭಾಷಾಂಗರಾಗಗಳು ಮೂಲರಾಗದಲ್ಲಿಲ್ಲದ
ಅನ್ಯ ಸ್ವರಗಳನ್ನು ಹೊಂದಿರುತ್ತವೆ.
ಜನಕರಾಗಜನಕ
ರಾಗವೆಂದರೆ ಮೂಲರಾಗ, ತಂದೆಯಂತಿರುವರಾಗ.
ಇವಕ್ಕೆ ಮೂರು ಲಕ್ಷಣಗಳಿವೆ.
(೧) ಇವು ಸಂಪೂರ್ಣ ಆರೋಹಣಾವರೋಹಣವನ್ನು ಹೊಂದಿರುತ್ತವೆ. (೨) ಇವು
ಕ್ರಮ ಸಂಪೂರ್ಣ ಆರೋಹಣ ಅವರೋಹಣವನ್ನು ಹೊಂದಿರುತ್ತವೆ (೩) ಇವುಗಳ
ಆರೋಹಣ ಮತ್ತು ಅವರೋಹಣದಲ್ಲಿ ಸ್ವರಗಳ ಕಂಪನಗಳ ಮೌಲ್ಯವು ಒಂದೇ
ವಿಧವಾಗಿದೆ.
ಕ್ರಮ ಸಂಪೂರ್ಣಾರೋಹಣಾವರೋಣವಿದ್ದು, ಒಂದೇ ವಿಧವಾದ ಸ್ವರಸ್ಥಾನ
ಗಳಿರುವ ಜನ್ಯರಾಗವು ಅದರ ಜನಕ ಮೇಳದಿಂದ ವ್ಯತ್ಯಾಸ ಹೊಂದಿರಬಹುದು