This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮಧ್ಯಮ ಮತ್ತು ಧೈವತವು ಜೀವ ಸ್ವರಗಳು. ಈ ರಾಗವು ರಾಗತಾಳ ಚಿಂತಾಮಣಿ
ಎಂಬ ಗ್ರಂಥದಲ್ಲಿ ಉಕ್ತವಾಗಿದೆ. ಸಾರ್ವಕಾಲಿಕ ರಾಗ, ತ್ಯಾಗರಾಜ ವಿರಚಿತವಾದ
(ಇದಿ ಸಮಯಮುರಾ' ಮತ್ತು ಮುತ್ತು ಸ್ವಾಮಿ ದೀಕ್ಷಿತರ 'ಭೋಗ ಛಾಯಾ ನಾಟಕ
ಎಂಬ ಕೃತಿಗಳು ಈ ರಾಗದ ಪ್ರಸಿದ್ಧ ಕೃತಿಗಳು.
ಛಾಯಾನಾಟ-ಇದು
 
ನಾರದ ವಿರಚಿತ ಸಂಗೀತ ಮಕರಂದವೆಂಬ
 
ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗ.
 
ಛಾಯಾಚೌಳಿ -ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ,
 
ಸ ರಿ ಗ ಮ ಸ ಸ ದ ನಿ ಸ
 
ಸ ನಿ ವ ದ ಮ ಗ ರಿ ಸ
 
ಛಾಯಾಮಾರುವ ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ
ಒಂದು ಜನ್ಯರಾಗ
 
ಸ ಗ ರಿ ಗ ಮ ದ ನಿ ದ ಸ
ಸ ನಿ ದ ಮ ಗ ರಿ ಸ
 
ಛಾಯಾಮಾಳವಿ ಈ ರಾಗವು ೭ನೆ ಮೇಳಕರ್ತ ಸೇನಾಪತಿಯ ಒಂದು
 

 
ಅ :
 
ಜನ್ಯರಾಗ,
 
೨೮೩
 
ಸ ಗ ರಿ ಗ ಮ ಪ ದ ನಿ ದ ಸ
ಸ ನಿ ದ ನ ಮ ಗ ಮ ರಿ ಸ
 
ಛಾಯಾರಾಗ-ಒಂದು ವಿಶಿಷ್ಟವಾದ ಸ್ವರಸಮೂಹ ಅಥವಾ ಪ್ರಯೋಗ
ದಿಂದ ವ್ಯಕ್ತವಾಗುವ ರಾಗ, ಉದಾ : ಹುಸೇನಿರಾಗ,
 
ಛಾಯಾರುದ್ರ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ,
 
ಸ ರಿ ಮ ಪ ಮ ದ ನಿ ಸ
ಸ ದ ನಿ ಪ ಮ ಗ ರಿ ಸ
 

 

 
ಛಾಯಾಲಗತಾಳ-ರಾಗಗಳಂತೆಯೇ ತಾಳಗಳನ್ನು ಶುದ್ಧ, ಛಾಯಾಲಗ
ಎರಡು ತಾಳಗಳ ಸಮ್ಮಿಳನದಿಂದ
 
ಮತ್ತು ಸಂಕೀರ್ಣವೆಂದು ವರ್ಗಿಕರಿಸಲಾಗಿತ್ತು.
ಆಗುವ ತಾಳಕ್ಕೆ ಛಾಯಾಲಗತಾಳವೆಂದು ಹೆಸರು. ಎರಡಕ್ಕೂ ಹೆಚ್ಚು ತಾಳಗಳ
ಕಾಲ ಪ್ರಮಾಣಗಳ ಸಮ್ಮೇಳನದಿಂದಾಗುವ ತಾಳವು ಸಂಕೀರ್ಣ ತಾಳ, ಉದಾ :
 
ಸಿಂಹನಂದನ ತಾಳ,
 
ಛಾಯಾಲಗರಾಗ ರಾಗವಿಸ್ತಾರ ಮಾಡುವಾಗ ಇನ್ನೊಂದು ರಾಗದ
ಛಾಯೆಯು ಆಗಾಗ್ಗೆ ಕಂಡು ಬರುವ ರಾಗಕ್ಕೆ ಛಾಯಾಲಗರಾಗವೆಂದು ಹೆಸರು.
ಇದನ್ನು ಸಾಲಂಗರಾಗ ಮತ್ತು ಸಾಲಗರಾಗ ಎಂದು ಹೇಳುವುದುಂಟು.