This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಒಂದು ಕೃತಿಯ ತಾಳವನ್ನು ಛಾಪುತಾಳ ಎಂದು ಹೇಳಿದರೆ ಅದು ಮಿಶ್ರಛಾಪು

ತಾಳವೆಂದು ತಿಳಿದುಕೊಳ್ಳಬೇಕು
 

 
ಛಾಯಕೌಶಿಕ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ

ಗೌಳದ ಒಂದು ಜನ್ಯರಾಗ,
 
ಸ ಗ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
 

ಸ ಗ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
 
ಛಾಯಾ -
(೧) ಈ ರಾಗವು ೨೦ನೆ ಮೇಳಕರ್ತ ನಾಭೈರವಿಯ ಒಂದು

ಇದೊಂದು ಉಭಯ ವಕ್ರರಾಗ
 
ಜನ್ಯರಾಗ
 
ಸ ರಿ ಗ ರಿ ಮ ಪ ನಿ ದ ನಿ ಸ
 
ಸ ನಿ ಪ ನಿ ದ ಪ ಮ ಗ ಮ ರಿ ಗ ಸ
 
ಜನ್ಯರಾಗ,
 

 
೩೮೧
 
-
 

ಸ ರಿ ಗ ರಿ ಮ ಪ ನಿ ದ ನಿ ಸ
ಸ ನಿ ಪ ನಿ ದ ಪ ಮ ಗ ಮ ರಿ ಗ ಸ
(೨) ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ.
 

(೩) ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಇದೊಂದು ಚಂದ್ರಾಂಶ ರಾಗ

ಎಂದು ಹೇಳಿದೆ.
 

(೪) ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ ಇದು ೨೦ ಭಾಷಾಂಗ

ರಾಗಗಳಲ್ಲಿ ಒಂದು ರಾಗ,
 

(೫) ಸಂಗೀತ ನಾರಸಂಗ್ರಹವೆಂಬ ತೆಲುಗು ಗ್ರಂಥದಲ್ಲಿ ಹೇಳಿರುವ ೨೪ ಶ್ರುತಿ

ಪದ್ಧತಿಯಲ್ಲಿ ಇದು ೧೭ನೆ ಶ್ರುತಿಯ ಹೆಸರು.
 

 
ಛಾಯಾಗೌಡ-
ನಾರದ ವಿರಚಿತ ಸಂಗೀತಮಕರಂದವೆಂಬ ಗ್ರಂಥದಲ್ಲಿ

ಉಕ್ತವಾಗಿರುವ ಒಂದು ಪುಲ್ಲಿಂಗ ರಾಗ ಸಂಗೀತ ಸಮಯ ಸಾರವೆಂಬ ಗ್ರಂಥದಲ್ಲಿ

ಈ ರಾಗವು ಒಂದು ಉಪಾಂಗ ಸಂಪೂರ್ಣರಾಗವೆಂದು ಹೇಳಿದೆ.
 

 
ಛಾಯಾಗೌರಿ-
ಈ ರಾಗವು ೭ನೆಯ ಮೇಳಕರ್ತ ಸೇನಾವತಿಯ ಒಂದು
 
ಅ .
 
ಸ ರಿ ಮ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
 

ಸ ರಿ ಮ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
ರಾಗತಾಳ ಚಿಂತಾಮಣಿ ಎಂಬ ತೆಲುಗು ಗ್ರಂಥದಲ್ಲಿ ಈ ರಾಗವು ಮಾಯಾ

ಮಾಳವಗೌಳದ ಜನ್ಯವೆಂದು ಹೇಳಿದೆ.
 

 
ಛಾಯಾಗೌಳ-
(೧) ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ
 
ಒಂದು ಜನ್ಯರಾಗ
 
ಸ ರಿ ಗ ರಿ ಮ ಪ ದ ನಿ ಸ
 
ಸ ದ ನಿ ಪ ಮ ಗ ಸ ರಿ ಸ
 

ಸ ರಿ ಗ ರಿ ಮ ಪ ದ ನಿ ಸ
ಸ ದ ನಿ ಪ ಮ ಗ ಸ ರಿ ಸ
(೨) ಇದೇ ಹೆಸರಿನ ಮತ್ತೊಂದು ರಾಗವು ೧೫ನೆ ಮೇಳಕರ್ತ ಮಾಯಾಮಾಳವ

ಗೌಳದ ಒಂದು ಜನ್ಯರಾಗ,