This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೩೭೯
 
ಇವರ ತಂದೆ
 
ತೊಡಗಿದರು.
 

ಭಾಗವತರು ಪ್ರಸಿದ್ಧ ಗಾಯಕರಾಗಿ ಸಂಗೀತ ಕ್ಷೇತ್ರದಲ್ಲಿ ವಿರಾಜಿಸಿದರು. ಇವರು

ಕೇರಳದ ಪಾಲ್ ಘಾಟ್ ಜಿಲ್ಲೆಯ ಚೆಂಬೈ ಗ್ರಾಮದಲ್ಲಿ ಜನಿಸಿದರು.

ಗೊಂಡಕುಳದಿ ಅನಂತರಾಮ ಭಾಗವತರು ಪ್ರಸಿದ್ಧ ಸಂಗೀತಗಾರರಾಗಿದ್ದರು.

ವೈದ್ಯನಾಧರಿಗೆ ತಂದೆಯೇ ಗುರು. ಆರನೆಯ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಶಾರೀರದ

ತೊಂದರೆಯುಂಟಾಯಿತು. ಆದ್ದರಿಂದ ಕಚೇರಿಗಳಲ್ಲಿ ಪಿಟೀಲುವಾದ್ಯವನ್ನು ನುಡಿಸಲು

ಕೆಲವು ವರ್ಷಗಳ ನಂತರ ಶಾರೀರವು ಸರಿ ಹೋಯಿತು. ತಮ್ಮ

೨೨ನೆ ವಯಸ್ಸಿನಲ್ಲಿ ೧೯೧೮ರಲ್ಲಿ ಮದ್ರಾಸಿನ ಗೋಖಲೆ ಹಾಲಿನಲ್ಲಿ ಪ್ರಥಮ ಕಚೇರಿ

ಯನ್ನು ಮಲೆಕೋಟೆ ಗೋವಿಂದಸ್ವಾಮಿಪಿಳ್ಳೆ, ಅಳಗನಂಬಿ ಮತ್ತು ದಕ್ಷಿಣಾಮೂರ್ತಿ

ಯವರ ಪಕ್ಕವಾದ್ಯದೊಡನೆ ಹಾಡಿ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿ

ಪ್ರಸಿದ್ಧರಾದರು. ೧೯೩೨ರಲ್ಲಿ ತಮ್ಮ ಗ್ರಾಮಾಫೋನ್ ರೆಕಾರ್ಡ್ ಮಾಡಿದರು.

ಗೋವಿಂದಸ್ವಾಮಿಪಿಳ್ಳೆ ಮತ್ತು ಅಳಗನಂಬಿಯ ನಂತರ ಮೈಸೂರು ಚೌಡಯ್ಯ ಮತ್ತು

ಪಾಲಘಾಟ್ ಮಣಿಅಯ್ಯರ್‌ರವರ ಪಕ್ಕವಾದ್ಯಗಳೊಡನೆ ಅತ್ಯಧಿಕ ಸಂಖ್ಯೆಯಲ್ಲಿ

ಕಚೇರಿಗಾಯನ ಮಾಡಿದ್ದಾರೆ. ಚೆಂಬೈಯವರು ತಮ್ಮ ನೆ ವಯಸ್ಸಿನಲ್ಲಿ ಕಚೇರಿ

ಗಾಯನವನ್ನು ಆರಂಭಿಸಿ ಕೊನೆಯವರೆಗೂ ಭರ್ಜರಿಯಾಗಿ ಹಾಡುತ್ತಲೇ ಇದ್ದರು.

ಮೈಕ

ಕ್ ಇಲ್ಲದ ಕಾಲದಲ್ಲಿ ಅವರ ಕಂಠಶ್ರೀ ಸಾವಿರಾರು ಜನರಿಗೆ ಕೇಳಿಸುವಂತಿತ್ತು

ಮಧ್ಯದಲ್ಲಿ ಕೆಲವು ಕಾಲ ಶಾರೀರದ ತೊಂದರೆ ಒದಗಿದ್ದಾಗ ಗುರುವಾಯೂರು ಅಪ್ಪನ್

ಶ್ರೀಕೃಷ್ಣನನ್ನು ತ್ರಿಕರಣ ಶುದ್ಧಿಯಿಂದ ಪೂಜಿಸಿ ಪುನಃ ಅದೇ ಸೊಗಸಾದ ಶಾರೀರವನ್ನು

ಪಡೆದರು. ಕಂಚಿನ ಕಂಠ, ಮಹತ್ತರ ಸಾಧನೆ, ಶಿಸ್ತು ಮತ್ತು ಸಂಯಮದ ಪರಿಶುದ್ಧ

ವಾದ ಜೀವನ, ದೈವಭಕ್ತಿ ಮತ್ತು ಸಂಪ್ರದಾಯ ಶರಣತೆ ಇವು ಇವರ ಯಶಸ್ಸಿನ

ಗುಟ್ಟು. ಇವರ ಗಾಯನದಲ್ಲಿ ಕಾಂಪ್ರಮಾಣ, ಲಯದಬಿಕ್ಕಟ್ಟು, ನಾದದಲ್ಲಿ

ಗಾಂಭೀರ್ಯ, ಶ್ರುತಿಶುದ್ಧತೆ ಇವುಗಳು ಎದ್ದು ಕಾಣುತ್ತಿದ್ದುವು

ಯಾದರೂ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು. ಇವರಿಗೆ ರಾಷ್ಟ್ರಪತಿ ಪ್ರಶಸ್ತಿ,

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಮುಂತಾದ ಹಲವಾರು

ಬಿರುದುಗಳು ಮತ್ತು ಸನ್ಮಾನಗಳು ದೊರಕಿವೆ. ಹಾಸ್ಯಪ್ರಿಯರೂ, ಸರಳ ಜೀವಿಗಳೂ,

ಸದಾಚಾರ ಸಂಪನ್ನರೂ ಹಾಗೂ ತರುಣ ವಿದ್ವಾಂಸರನ್ನು ಪ್ರೋತ್ಸಾಹಿಸಿ ಬೆಳಕಿಗೆ

ತರುವ ಹಿರಿಯ ಗುಣವುಳ್ಳವರಾಗಿದ್ದರು. ಇವರ ಶಿಷ್ಯರಲ್ಲಿ ಚೆಂಬೈನಾರಾಯಣನ್

ಮತ್ತು ಜೇಸುದಾಸ್ ಪ್ರಮುಖರು.
 
ಯಾವ ಕಾಲದಲ್ಲಿ
 

 
ಚೆಂಡ
ಚೆಂಡ ಅಧವಾ ಚಂಡೆವಾದ್ಯವು ಕೇರಳ ಮತ್ತು ದಕ್ಷಿಣ ಕನ್ನಡ

ಜಿಲ್ಲೆಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ವಾದ್ಯ, ಮೃದಂಗದಂತಿರುವ ದೊಡ್ಡ ವಾದ್ಯ.

ಇದರ ಶಬ್ದವು ಬಹಳ ಕರ್ಕಶ ಮತ್ತು ಬಹು ದೂರಕ್ಕೆ ಕೇಳಿಸುತ್ತದೆ

ಇದರ ಶಬ್ದ

ಕೇಳಿದೊಡನೆ ಜನರು ತಮ್ಮ ಊರಿನ ದೇವಾಲಯದ ಆವರಣದಲ್ಲಿ ಅಂದು ರಾತ್ರಿ

ಯಕ್ಷಗಾನ ಅಥವಾ ಕಥಕಳಿ ನಡೆಯುವುದೆಂದು ತಿಳಿಯುತ್ತಾರೆ. ಯಕ್ಷಗಾನ ಅಧವಾ