2023-06-27 15:10:32 by jayusudindra
This page has been fully proofread once and needs a second look.
ಮರಾಠಾ ದೊರೆಗಳ ಕಾಲದಲ್ಲಿ ಇವು ಬಹಳ ಜನಪ್ರಿಯವಾಗಿದ್ದು ವು.
ಅಭಂಗಕ್ಕೆ ಮೂಲ ಓವೀ ಎಂಬ ಬಂಧ ಇದ್ದಿತೆಂದು ಹೇಳುತ್ತಾರೆ. ಪ್ರತಿ
ಯೊಂದರಲ್ಲಿ ನಾಲ್ಕು ಚರಣಗಳಿದ್ದು ನಾಲ್ಕನೆಯ ಚರಣವು ಪದಭಾಗವಾಗಿರುತ್ತದೆ.
ಜ್ಞಾನದೇವನ ಅಭಂಗಮಾಲೆಯೆಂಬ ಒಂದು ಕೃತಿಯಲ್ಲಿ ಒಂದು ಕನ್ನಡ ಅಭಂಗವಿದೆ.
ನಾಮದೇವನ ಅಭಂಗದಲ್ಲಿ ನುಡಿಯ ಮೊದಲನೆಯ ಚರಣದಲ್ಲಿ ೧೨ ಅಕ್ಷರಗಳೂ,
ಎರಡನೆಯದರಲ್ಲಿ ೧೦ ಅಕ್ಷರಗಳೂ ಇವೆ. ಮೊದಲ ಚರಣದ ಅಂತ್ಯಾಕ್ಷರವು
ಎರಡನೆಯ ಚರಣದ ೬ನೆಯ ಅಕ್ಷರವಾಗಿರುತ್ತದೆ. ಕೀರ್ತನೆಗಳಂತೆಯೇ ಅಭಂಗ
ಗಳಲ್ಲಿ ಪಲ್ಲವಿ ಮತ್ತು ಚರಣಗಳಿವೆ. ಅಭಂಗಗಳು ಭಕ್ತಿಗೀತೆಗಳು. ದಕ್ಷಿಣ ಭಾರತದಲ್ಲಿ
ಹರಿಕಥೆ, ಭಜನೆಗಳು ಮತ್ತು ಸಂಗೀತ ಕಚೇರಿಗಳಲ್ಲಿ ಅಭಂಗಗಳನ್ನು ಕೇಳ
ಅಭಂಗಿ-
ಅಭಂಗಿ
ಭರತನಾಟ್ಯದ ನಾಲ್ಕು ಬಗೆಯ ಭಾವಭಂಗಿಮಗಳಲ್ಲಿ ಒಂದು
ವಿಧ. ಸಮದಿಂದ ಭಾಗಿಸಲ್ಪಟ್ಟ ಭಂಗಿಮ ನಿಲುವಿನಲ್ಲಿ ತುಂಡಾದಂಥ ಭಂಗಿಮ.
ನೇರವಾದ ರೇಖೆಯು ಬಗ್ಗಿ, ಇಬ್ಬಾಗವನ್ನು ಸೂಚಿಸುತ್ತದೆ.
ಅಭ್ಯುಚ್ಛಯ
ಒಂದು ವಿಧವಾದ ಆರೋಹಿ ಅಲಂಕಾರ. ಇದರಲ್ಲಿ ಪ್ರತಿ
ಎರಡನೆಯ ಸ್ವರವನ್ನು ಬಿಡಲಾಗುವುದು.
ಸ ಗ ಪ ನಿ ಎಂಬಂತೆ.
ಅವರಾವಳಿ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಆ
ಅ : ಸ ನಿ ದ ಪ ಮ ಗ ರಿ ಸ
ಅಮರಸಿಂಧು
ತಾಳ್ಳಪಾಕ ವಾಗ್ಗೇಯಕಾರರ ಕೃತಿಗಳಲ್ಲಿ ಬಳಸಿರುವ
ಒಂದು ರಾಗ.
ಅಮರಸಿಂಹ ಮಹಾರಾಜ (೧೭೮೮-೧೭೯೯)
ಇವನು ತಂಜಾವೂರಿನ
ಸಂಗೀತ ಕಲೆಯ ಪೋಷಕನಾಗಿದ್ದನು. ಇವನ ಆಸ್ಥಾನದಲ್ಲಿ ಆ ಕಾಲದ
ಅನೇಕ ಸಂಗೀತ ವಿದ್ವಾಂಸರು ಮತ್ತು ವಾಗ್ಗೇಯಕಾರರಿದ್ದರು.
ದೊರೆ.
ಅಮೀರ್ ಕಲ್ಯಾಣಿ
ಹಮೀರ್ ಕಲ್ಯಾಣಿ ರಾಗ
ಅಮೀರ್ ಖುಸ್ರು
ಅಮೀರ್
ಅಲ್ಲಾ ಉದ್ದೀನ್ ಖಿಲ್ವಿ ಯ (೧೨೯೬-೧೩೧೫) ಆಸ್ಥಾನದಲ್ಲಿದ್ದ ಪರ್ಷಿಯ ಕವಿ
ಮತ್ತು ಸಂಗೀತ ವಿದ್ವಾಂಸ, ಭಾರತೀಯ ರಾಗಗಳು ಮತ್ತು ಪರ್ಷಿಯನ್ ಪದ್ಧತಿಯ
ಹಾಡುಗಳ ಸಮ್ಮೇಳನದಿಂದ ಹಲವು ಮಿಶ್ರರಾಗಗಳನ್ನು ಸೃಷ್ಟಿಸಿದನು, ಸುರ್‌ಡ್್ರ,
ಸಜಗಿರಿ, ಲಾಪ್ ಎಂಬ ರಾಗಗಳನ್ನು ಸೃಷ್ಟಿಸಿದನೆಂದು ನಂಬಿಕೆ ಇದೆ.
ಕವಾಲಿ ಶೈಲಿಯ ಹಾಡುಗಾರಿಕೆಯನ್ನು ಸೃಷ್ಟಿಸಿದನು. ದಕ್ಷಿಣ ಭಾರತದ ಸುಪ್ರಸಿದ್ಧ