This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಬೆಂಗಳೂರಿನ ಬಂಗಾರು ನಾದಸ್ವರ ವೆಂಕಟಪ್ಪನವರಲ್ಲಿ ಐದು ವರ್ಷಗಳ ಕಾಲ, ನಂತರ
ಬಿ ಎನ್. ಮೂರ್ತಿಯವರಲ್ಲ, ಮದ್ರಾಸಿನ ಸುಪ್ರಸಿದ್ಧ ಪಲ್ಲವಿ ವಿದ್ವಾಂಸರಾಗಿದ್ದ
ವಿದ್ಯಲ ನರಸಿಂಹಲು ನಾಯ್ಡುರವರಲ್ಲಿ ಶಿಕ್ಷಣ ಪಡೆದು ಅಪರೂಪವಾದ ಕೀರ್ತನೆಗಳು,
ತಾಳ ಮತ್ತು ಲಯದ ಅನೇಕ ರಹಸ್ಯಗಳನ್ನು ತಿಳಿದರು. ಮೈಸೂರಿನ ಮೃದಂಗ
ವಿದ್ವಾನ್ ವೆಂಕಟೇಶ ದೇವರು ಇವರ ಗಮನತವನ್ನು ತಾಳಾವಧಾನದ ಕಡೆಗೆ
 
ಸೆಳೆದರು.
 
೩೭೩
 
ತಾಳದ ಆವರ್ತಗಳು ಸಮನಾಗಿ ಕೂಡಿಬರ
 
ಒಂದೇ ಕಾಲದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಾಳಗಳನ್ನು
ಎಣಿಸುತ್ತಾ ಹಾಡುವುದು ಅವಧಾನ ಪದ್ಧತಿ. ಮೊದಲು ಹಾಡಲು ಪಲ್ಲವಿಯ
ಒಟ್ಟು ಅಕ್ಷರ ಕಾಲಕ್ಕೆ ಸಮನಾಗುವ ಕಾಲವುಳ್ಳ ತಾಳಗಳಾಗಬೇಕು ಹೀಗೆ
ಸಮನಾದ ಅಕ್ಷರ ಕಾಲವುಳ್ಳ ಎರಡು ತಾಳಗಳನ್ನು ಆರಿಸಿದರೆ ಅವುಗಳ ಅಂಗ ಹಾಗೂ
ನಡಿಗೆಯಲ್ಲಿ ವ್ಯತ್ಯಾಸ ಬರುತ್ತದೆ.
ಬೇಕಾದಲ್ಲಿ ಒಂದೊಂದು ಕೈಯಲ್ಲಿ ಬೇರೆ ಬೇರೆ ಬಗೆಯ ಲೆಕ್ಕವನ್ನಿಡುತ್ತ ಹೋಗ
ಬೇಕು ಹೀಗೆ ಒಂದೇ ಕಾಲದಲ್ಲಿ ಬೇರೆ ಬೇರೆ ಬಗೆಯ ನಾಲ್ಕಾರು ಲೆಕ್ಕಾಚಾರಗಳನ್ನು
ಮಾಡುತ್ತ ಹಾಡಬೇಕು. ಈ ಬಗೆಯ ತಾಳಾವಧಾನದಲ್ಲಿ ತಿರುವಯ್ಯಾರ್
ಸುಬ್ರಹ್ಮಣ್ಯ ಅಯ್ಯರ್ ಮತ್ತು ಕುಕ್ಕುಡಿ ಕೃಷ್ಣಯ್ಯರ್‌ ಪ್ರವೀಣರಾಗಿದ್ದರು.
ಚಂದ್ರಪ್ಪನವರಿಗೆ ಸೂಳಾದಿ ಸಪ್ತತಾಳಗಳು ಮತ್ತು ಅವುಗಳ ಪ್ರಭೇದಗಳು,
ನಂದಿಕೇಶ್ವರ ಮತದ ೧೦೮ ತಾಳಗಳು, ಅಗತ್ಯಮತದ ೫೨ ಅಪೂರ್ವತಾಳಗಳು,
ಹನುಮನ್ಮತದ ಮರ್ಮತಾಳಗಳು, ಶುಕ್ರಾಚಾರ್ಯ ಮತದ ದಿವ್ಯ ಸಂಕೀರ್ಣ
ಮುಂತಾದುವುಗಳಲ್ಲಿ ಸಿದ್ಧಿಯಿದೆ. ಮದ್ರಾಸಿನ ಮ್ಯೂಸಿಕ್ ಅಕಾಡೆಮಿ ಮತ್ತು
ಇತರ ಸಂಗೀತ ಸಮ್ಮೇಳನಗಳಲ್ಲಿ ಪಲ್ಲವಿ ವಿನ್ಯಾಸ ಮಾಡಿ ಪ್ರಶಂಸಿತರಾಗಿದ್ದಾರೆ.
ನೃತ್ಯ ಪ್ರಕಾರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಬೆಂಗಳೂರಿನ ಸಾರ್ವಜನಿಕ ಸಭೆಯೊಂದರಲ್ಲಿ ಇವರಿಗೆ ಚಿನ್ನದ ತೋಡಾ ತೊಡಿಸಿ
ಪಲ್ಲವಿ ವಿದ್ವಾನ್ ಎಂಬ ಪ್ರಶಸ್ತಿಯಿತ್ತು ಗೌರವಿಸಿದರು.
 
ಶಾಂತಾರಾವ್‌ರ
 
ಚಂದ್ರಾಂಶರಾಗ -(೧) ನಾರದ ವಿರಚಿತ ( ಸಂಗೀತ ಮಕರಂದ 'ವೆಂಬ
ಗ್ರಂಧದಲ್ಲಿ ರಾಗಗಳನ್ನು ಸೂರಾಂಶ ಮತ್ತು ಚಂದ್ರಾಂಶರಾಗಗಳೆಂದು ವರ್ಗೀಕರಣ
 
ಮಾಡಿದೆ.
 
(೨) ರಾತ್ರಿವೇಳೆಯಲ್ಲಿ ಹಾಡಬಹುದಾದ ಒಂದು ರಾಗ
 
ಚಂದ್ರಕಿರಣಿ-ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ,
ಆ. ಸ ಗ ಮ ಪ ಮ ದ ನಿ ಸ
 

 
ಸ ನಿ ದ ನಿ ಪ ಮ ಗ ಮ ರಿ ಸ
 
ಚಂದ್ರಪ್ರಭಾ-ಈ ರಾಗವು ೪೨ನೆ ಮೇಳಕರ್ತ ರಘುಪ್ರಿಯದ ಒಂದು
 
ಜನ್ಯರಾಗ,