2023-07-04 09:33:04 by jayusudindra
This page has been fully proofread once and needs a second look.
೩೬೭
ಇವರು ಕರ್ಣಾಟಕದ ಒಬ್ಬ ಹಿರಿಯ ಸಂಗೀತ
ವಿದುಷಿ. ಜಿ. ಎಂ. ಗುರುಬಸವಯ್ಯನವರ ಪುತ್ರಿಯಾಗಿ ತುಮಕೂರಿನಲ್ಲಿ
ಜನಿಸಿದರು. ಬಾಲ್ಯದಲ್ಲೇ ಅಂಕುರಿಸಿದ್ದ ಸಂಗೀತದ ಅಭಿರುಚಿಯನ್ನು ಬೆಳೆಸಿಕೊಂಡು
೧೯೩೨ರ ವೇಳೆಗೆ ಬೆಂಗಳೂರಿಗೆ ಬಂದು ಸಂಗೀತ ಕಲಾನಿಧಿ ಟೈಗರ್ ವರದಾಚಾರರ
ಸಹೋದರ ವೀಣಾ ಕೃಷ್ಣಮಾಚಾರರ ಶಿಷ್ಯಯಾದರು. ೧೯೩೭ ರಿಂದ ೧೯೩೯ರ
ವರೆಗೆ ಚಿದಂಬರದ ಅಣ್ಣಾಮಲೆ ವಿಶ್ವವಿದ್ಯಾನಿಲಯದಲ್ಲಿ ಪೊನ್ನಯ್ಯ ಪಿಳ್ಳೆಯವರಲ್ಲಿ
ಶಿಕ್ಷಣ ಪಡೆದರು
ನಂತರ ಬೊಂಬಾಯಿನ ದಕ್ಷಿಣ ಭಾರತ ಸಂಗೀತ ಅಕಾಡೆಮಿಯಲ್ಲಿ
ಕರ್ಣಾಟಕ ಸಂಗೀತದ ನಿರ್ದೇಶಕರಾಗಿದ್ದರು. ೧೯೪೨ರಲ್ಲಿ ಬೆಂಗಳೂರಿನ ಮಹಾರಾಣಿ
ಕಾಲೇಜಿನಲ್ಲಿ ಸಂಗೀತದ ಅಧ್ಯಾವಕಿಯಾಗಿ ೧೯೬೯ರ ವರೆಗೆ ಸೇವೆ ಸಲ್ಲಿಸಿದರು.
೧೯೪೩ರಲ್ಲಿ ಮದ್ರಾಸಿನಲ್ಲಿ ನಡೆದ ಅಖಿಲ ಭಾರತ ತಮಿಳು ಸಮ್ಮೇಳನದಲ್ಲಿ ವೀಣಾ
ಕೃಷ್ಣಮಾಚಾರರ ಕೃತಿಗಳನ್ನು ಹಾಡಿ ಬಹುಮಾನ ಪಡೆದರು
ಮೈಸೂರು ರಾಜ್ಯದ ಸಲಹಾಸಮಿತಿ, ಮೈಸೂರು ಮತ್ತು ಬೆಂಗಳೂರು
ವಿಶ್ವವಿದ್ಯಾನಿಲಯಗಳ, ಅಧ್ಯಯನ ಮಂಡಲಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
೧೯೪೨ರಲ್ಲಿ ಗಾನ ಮಂದಿರವೆಂಬ ಸಂಗೀತ ವಿದ್ಯಾಲಯವನ್ನು ನಡೆಸಿಕೊಂಡು
ಬಂದಿದ್ದಾರೆ. ಇಲ್ಲಿ ಹನ್ನೊಂದು ಮಂದಿ ವಿದ್ಯಾರ್ಥಿನಿಯರಿಗೆ ವೇತನವನ್ನು
ಕೊಡುವುದಲ್ಲದೆ ೪೦ ಮಂದಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಾರೆ.
ಕರ್ಣಾಟಕ ರಾಜ್ಯದಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಮಹಿಳೆಯರಿಗೆ ಸಂಗೀತ
ಶಿಕ್ಷಣ ದೊರಕಿಸಿ ಕೊಡುವುದರಲ್ಲಿ ಇವರ ಪಾತ್ರ ಹಿರಿದು. ಇವರ ಹಾಡುಗಾರಿಕೆಯು
ಭಾವಪೂರಿತವಾದ ನೆಮ್ಮದಿ
ದಿಯಿಂದ ಕೂಡಿದ ಗಾಯನ,
೧೯೩೬ ರಿಂದ
ಚೆ
ಇದು ತಮಿಳುನಾಡಿನ ಚೆಂಗಟೆ ಜಿಲ್ಲೆಯಲ್ಲಿರುವ ೧೯ನೆ
ಶತಮಾನದಲ್ಲಿ ಪ್ರಸಿದ್ಧವಾಗಿದ್ದ ಸಂಗೀತ ಮತ್ತು ನೃತ್ಯ ಕಲಾ ಕೇಂದ್ರ, ಪುರಾತನ
ಕಾಲದ ಕಾಶೀರಾಮೇಶ್ವರದ ತೀರ್ಥಯಾತ್ರೆ ಮಾರ್ಗದಲ್ಲಿ ಚೋಳಮಂಡಲ ತೀರದಲ್ಲಿದೆ.
ಇಲ್ಲಿಯ ದೇವಾಲಯವು ಸರ್ವವಾದ್ಯಗಳ ನುಡಿಸುವಿಕೆಗೆ ಪ್ರಸಿದ್ಧವಾಗಿದೆ.
ದೇವರನ್ನು ಗೀತ, ವಾದ್ಯ ಮತ್ತು ನೃತ್ಯ ಸೇವೆಯ ಮೂಲಕ ಪೂಜಿಸುತ್ತಾರೆ.
ಸರ್ವವಾದ್ಯ ಸೇವೆಯು ಮನೋರಂಜನೆ ಮತ್ತು ಶಿಕ್ಷಣದ ಜೊತೆಗೆ ಭಕ್ತಿಯ
ಅನುಭವವನ್ನು ಪಡೆಯಲು ಸಹಕಾರಿಯಾಗಿದೆ
ಇಲ್ಲಿ ಸರ್ವವಾದ್ಯವನ್ನು ಒಂದು ವ್ಯವಸ್ಥಿತವಾದ ಕ್ರಮದಲ್ಲಿ ನುಡಿಸುತ್ತಾರೆ.
ಮೊದಲು ವಾದ್ಯಗಳನ್ನು ತನಿಯಾಗಿ ನುಡಿಸಿ ನಂತರ ಒಟ್ಟಿಗೆ ನುಡಿಸುತ್ತಾರೆ.
ಈ ವಾದ್ಯ ಸೇವೆಯು ದೇವರಿಗೆ ಷೋಡಶೋಪಚಾರ ಪೂಜೆಯಾದ ನಂತರ
ಮೊದಲಾಗುತ್ತದೆ. ಪೂಜಾರಿಯು ಅವತಾರಿಕಾ ಶ್ಲೋಕವನ್ನು ಹೇಳಿದ ನಂತರ
ಈ ಕಾರ್ಯಕ್ರಮವು ಆರಂಭವಾಗುತ್ತದೆ. ಸರ್ವವಾದ್ಯ ಮೇಳದಲ್ಲಿ ನುಡಿಸುವ ವಾದ್ಯ
ಗಳೆಂದರೆ ಬ್ರಹ್ಮತಾಳ, ನಂದಿಕೇಶ್ವರವಾದ್ಯ ಅಥವಾ ಶುದ್ಧ ಮದ್ದಳೆ, ಟಕೋರವಾದ್ಯ,